Skip to product information
1 of 1

Dr. K. N. Ganeshaiah

ದಿವ್ಯ ಸುಳಿ

ದಿವ್ಯ ಸುಳಿ

Publisher -

Regular price Rs. 330.00
Regular price Rs. 330.00 Sale price Rs. 330.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಇಡೀ ವಿಶ್ವ, ಬ್ರಹ್ಮಾಂಡವೆ ಆಗಲಿ, ಅದರಲ್ಲಿನ ಜೀವ ಪ್ರಪಂಚವೆ ಆಗಲಿ, ಹಾಗೂ ಆ ಜೀವ ಪ್ರಪಂಚದ ಪ್ರಜ್ಞಾವರ್ತನೆಗಳೆ ಆಗಲಿ, ಎಲ್ಲವೂ ಒಂದಾನೊಂದು ರೀತಿಯಲ್ಲಿ ಯಾವುದೋ ಸುಳಿಗೆ ಸಿಕ್ಕಿ ವಿಕಾಸಗೊಂಡ ಪ್ರಾಕಾರಗಳು, ಹಾಗೆಯೇ, ವಿಜ್ಞಾನ, ಕಲೆ, ಸಾಹಿತ್ಯ, ಧರ್ಮ, ಇವೆಲ್ಲವೂ ಮಾನವನ ಪ್ರಜ್ಞೆಯ ಕೂಸುಗಳೇ ಆದರೂ, ಅವು ಆ ಪ್ರಜ್ಞೆಯನ್ನೇ ತಮ್ಮ ಸಂಕೋಲೆಗಳಲ್ಲಿ ಕಟ್ಟಿಹಾಕಬಲ್ಲ ಶಕ್ತಿ ಸುಳಿಗಳು ಎಂಬ ಕಟುಸತ್ಯವನ್ನು ಲೇಖಕರು ಇಲ್ಲಿ ಪರಿಚಯಿಸುತ್ತಾರೆ. ಪ್ರಪಂಚದ ಹಲವಾರು ಆಯಾಮಗಳನ್ನು ಅರಿಯಲು ವೈಜ್ಞಾನಿಕ ಅಧ್ಯಯನದಲ್ಲಿ ನಿರತರಾಗಿದ್ದ ಲೇಖಕರು, ಕ್ರಮೇಣ ವಿಜ್ಞಾನದ ಹಾದಿಯಲ್ಲಿಯೇ ಹಲವು ಧಾರ್ಮಿಕ ವಸ್ತು-ವಿಷಯಗಳನ್ನೂ ಅವಲೋಕಿಸಲು ಮುಂದಾದಾಗ ಕಂಡುಕೊಂಡ ದಿವ್ಯಸುಳಿಗಳ ಪರಿಚಯವನ್ನು ಪಯಣದ ಹೆಜ್ಜೆಗಳನ್ನೂ ಈ ಹೊತ್ತಿಗೆ ತೆರೆದಿಡುತ್ತದೆ. ಅವರೇ ಹೇಳುವ ಹಾಗೆ ಈ ಹೊತ್ತಿಗೆಯಲ್ಲಿ ಪುರಾವೆಗಳನ್ನಾಧರಿಸಿದ ವೈಜ್ಞಾನಿಕ ವಿಷಯಗಳಿಂದ ಕೇವಲ ತರ್ಕಗಳನ್ನೇ ಆಧರಿಸುವ ಶೋಧಗಳವರೆಗೆ ವೈವಿಧ್ಯಮಯ ವಸ್ತುಗಳ ನಡುವಿನ ಪ್ರಯಾಣವಿದೆ. ವಿಜ್ಞಾನ, ಚರಿತ್ರೆ, ಹಾಗೂ ಪೌರಾಣಿಕ ವಿಷಯಗಳ ಸುತ್ತ ಕಥೆಕಾದಂಬರಿ ಹೆಣೆಯುವ ಡಾ.ಕೆ.ಎನ್.ಗಣೇಶಯ್ಯ, ದಿವ್ಯಸುಳಿಯಲ್ಲಿ ಅವೆಲ್ಲ ವಿಷಯಗಳ ಅಂತರಾಳದ ಸಂಬಂಧವನ್ನು ಕೆದಕಿ ತೆಗೆಯಲು ಪ್ರಯತ್ನಿಸಿದ್ದಾರೆ.

ಪ್ರಕಾಶಕರು - ಅಂಕಿತ ಪುಸ್ತಕ

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
S
Satish

ದಿವ್ಯ ಸುಳಿ