Dr. T. N. Vasudevamurthy
Publisher -
- Free Shipping
- Cash on Delivery (COD) Available
Couldn't load pickup availability
ದೇವಗಂಗೆಯ ಮಹಾಮಕರವು ನೀರು ಕುಡಿಯಲು ಬಂದ ಕಿಶೋರ ಕೇಸರಿಯನ್ನು ಭದ್ರವಾಗಿ ಹಿಡಿದುಕೊಂಡಿತು. ಸಿಂಹದಮರಿ ತಪ್ಪಿಸಿಕೊಳ್ಳಲು ಎಷ್ಟು ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ಕಳಚಿ ಹಿಡಿದಿದ್ದ ಆ ಮರಕ್ಕೂ ತನ್ನ ಕೋರೆದಾಡೆಗಳನ್ನು ಕಳಚಿ ಬಿಚ್ಚಿ ಬಾಯ್ದೆರೆದು ಆ ಸಿಂಹ ಶಾಬಕವನ್ನು ಬಿಟ್ಟುಬಿಡಲೂ ಸಾಧ್ಯವಾಗಲಿಲ್ಲ. ಹೋರಾಡುತ್ತ ಹೋರಾಡುತ್ತ ಎರಡೂ ಅಮೃತ ನದಿಯ ಪವಿತ್ರ ತೀರ್ಥದಲ್ಲಿ ಮಗ್ನವಾಗುವುದನ್ನು ನೋಡುತ್ತೇವೆ. – ಕುವೆಂಪು
ಮತಗಳಲ್ಲಿ ಪ್ರಾಚೀನತಮ ಮತದ ಪ್ರತಿನಿಧಿ ವಯಸ್ಸಿನಲ್ಲಿ ಎಲ್ಲ ಪ್ರತಿನಿಧಿಗಳಿಗಿಂತಲೂ ಕನಿಷ್ಠತಮನಾಗಿದ್ದರೂ ಪ್ರತಿಭೆಯಲ್ಲಿ ಯಾರಿಗೇನೂ ಕಡಿಮೆಯಾಗಿರಲಿಲ್ಲ. ಗರ್ವಿಷ್ಟ ಪಾಶ್ಚಾತ್ಯ ದೇಶಗಳಿಗೆ ಭಾರತಮಾತೆ ತನ್ನ ಯೋಗ್ಯತಮ ಪುತ್ರನನ್ನೇ ದೂತನನ್ನಾಗಿ ಕಳುಹಿಸಿ ಗೌರವಾನ್ವಿತೆಯಾದಳು.
-ಅನಿಬೆಸೆಂಟ್
(ಚಿಕಾಗೋದಲ್ಲಿ ಮೊದಲ ಸಲ ಕಂಡಾಗ)
ಮೇಲ್ನೋಟಕ್ಕೆ ನಾನು
ಮಹಾಬಂಡಾಯಗಾರನಂತೆ ಮತ್ತು ನನ್ನ ಗುರು ಮಹಾಭಕ್ತನಂತೆ ತೋರಬಹುದು. ನಿಜವೇನೆಂದರೆ ನನ್ನ ಗುರು ಒಬ್ಬ ಬಂಡಾಯಗಾರರಾಗಿರುವರು ಮತ್ತು ನಾನು ಅವರ ಪರಮಭಕ್ತನಾಗಿರುವೆನು.
ಸ್ವಾಮಿ ವಿವೇಕಾನಂದ
ವಂಶಿ ಪಬ್ಲಿಕೇಷನ್ಸ್
