Maasti Venkatesha Iyyangar
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನನ್ನನ್ನು ಈ ಕೆಲಸ ಮಾಡಲು ಪ್ರೇರಿಸಿದ್ದು ವಯಸ್ಸಿನಿಂದ ನನಗೆ ಕಿರಿಯರಾದ ಒಬ್ಬ ಮಿತ್ರರು ನನಗೆಂದು ಬರೆದ ಒಂದು ಪತ್ರ
ಈ ಕೆಲಸದಲ್ಲಿ ನನ್ನ ಉದ್ದೇಶ ನಮ್ಮ ಸಂಸ್ಕೃತಿ ನಮ್ಮ ಧರ್ಮ ನಮ್ಮ ದೇಶ ಇವುಗಳ ಇಂದಿನ ಸ್ಥಿತಿಯನ್ನು ನೋಡಿ ನಿರಾಶರಾಗಿ ಧೈರ್ಯ ಕುಂದಿರುವ, ನನಗಿಂತ ಕಿರಿಯ ವಯಸ್ಸಿನ ನನ್ನ ಸೋದರರಿಗೆ, ಇದನ್ನು ಕುರಿತು ಬೇಸರ ಅಧೈರ್ಯ ಬೇಡ ಎಂದು ಹೇಳಿ, ಅವುಗಳ ಸ್ವರೂಪವನ್ನು ತೋರಿಸುವ ಸಂಗತಿಗಳನ್ನು ತಿಳಿಸುವುದು.
೬೬ ವರ್ಷದ ಹಿಂದೆ ಒಂದು ಉಪಾಕರ್ಮದ ದಿನ ನನ್ನ ತಾಯಿನೆಲ ನನಗೆ ಸಂದೇಶವನ್ನು ನೀಡಿತು. ನಾನು ಈ ಪಂಕ್ತಿಗಳನ್ನು ಬರೆಯುತ್ತಿರುವ ಈ ದಿನ ಯೋಗಾಯೋಗದಿಂದ ಈ ವರ್ಷದ ಉಪಾಕರ್ಮದ ದಿನ ಆ ಉಪಾಕರ್ಮದ ದಿನ ನನಗೆ ಬಂದ ಸಂದೇಶವನ್ನು ಅನುಗ್ರಹ ಎಂದು ಅಂಗೀಕರಿಸಿ ಇಷ್ಟು ವರ್ಷ ಬಾಳಿನಲ್ಲಿ ನಡೆದು ಬಂದಿದೇನೆ.
ನನ್ನ ಎಲ್ಲ ದಿನವೂ ಸುಖದ ದಿನಗಳಾಗಲಿಲ್ಲ. ಆದರೆ ನನ್ನ ಆಶೆ ಕುಗ್ಗಲಿಲ್ಲ.
ದೈವ ತಾನು ಜೊತೆಗೆ ನಡೆಯುತ್ತಿರುವುದನ್ನು ಬಿಟ್ಟುಕೊಡದೆ ಎಲ್ಲ ಹೊತ್ತೂ ನನ್ನೊಡನೆ ನಡೆಯಿತು; ನನ್ನನ್ನೂ ಕಾಪಾಡಿತು ...
“ಅಧೈರ್ಯ ಆತ್ಮ ಹನನ; ಅದಕ್ಕೆ ಎಡೆಗೊಡಬೇಡಿ', ಎಂದು ನಮ್ಮ ಹಿರಿಯರು ಮೊರೆಯುತ್ತಿದ್ದಾರೆ ನಮ್ಮ ಆಚಾರ ವ್ಯವಹಾರಗಳಲ್ಲಿ ಕುಂದುಕೊರತೆ ಇದೆ. ಅದನ್ನು ಸರಿಪಡಿಸಿ ಎಂಬುದಲ್ಲವೆ ಅವರ ಉಪದೇಶ?
ಹೀಗೆ ಮಾಡದೆ ನಮ್ಮನ್ನು ನಾವೇ ಹಳಿದುಕೊಳ್ಳುವವಾದರೆ ನಾವು ಕೋಣೆಯಲ್ಲಿ ಕಸ ಹೆಚ್ಚಿತು ಎಂದು ಗೊಣಗುತ್ತ ಮೂಲೆಯಲ್ಲಿ ನಿಂತ ಪರಕೆ ಆಗುತ್ತೇವೆ……
-ಮಾಸ್ತಿ ವೆಂಕಟೇಶ ಅಯ್ಯಂಗಾರ್
