Skip to product information
1 of 2

Dr. K. S. Acharya Narayanacharya

ದಶವತಾರ

ದಶವತಾರ

Publisher - ಸಾಹಿತ್ಯ ಭಂಡಾರ

Regular price Rs. 600.00
Regular price Sale price Rs. 600.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 536

Type - Paperback

Gift Wrap
Gift Wrap Rs. 15.00
ಅಂದಿನ ಕಥೆಗಳಲ್ಲೇ ಇಂದಿನ ಘಟನೆಗಳನ್ನು ನೋಡುವ ಕಣ್ಣಿಟ್ಟೇ ಬರೆದ ಈ ಪುರಾಣಗಳಲ್ಲಿ ನಮ್ಮ ಕಣ್ಣು ತೊರೆದು ವ್ಯಾಸರ ಕಣ್ಣಿಂದ ನೋಡುವವರಿಗೆ, ಹಿರಣ್ಯಾಕ್ಷ, ಹಿರಣ್ಯಕಶಿಪು, ರಾವಣ, ಶಿಶುಪಾಲ, ಬಲಿಚಕ್ರವರ್ತಿಗಳಂಥವರಲ್ಲದೆ, ಪ್ರಹ್ಲಾದ, ಧ್ರುವ, ಅಂಬರೀಷ, ವೈವಸ್ವತ ಮನು, ವಿಂಧ್ಯಾವಳಿ, ಶುಕ್ರ, ಬೃಹಸ್ಪತಿಗಳ ರಾಜನೀತಿಗಳ ಅನುಯಾಯಿಗಳೂ, 'ದಿಗ್ವಿಜಯ'ದ ಪುನರಾವರ್ತಿಯ ಅನಾಹುತಗಳೂ, ಹಾಗೆಯೇ 'ಸಮುದ್ರಮಥನ', 'ಹಾಲಾಹಲಪಾನ, ಹೊಸಸೃಷ್ಟಿ ದೀಕ್ಷೆಯ ಪುನಃ ಪ್ರಯತ್ನಗಳೂ, ವಿಶ್ವಾಮಿತ್ರ ಕಾರ್ತವೀರ್ಯಾರ್ಜುನರ ಬ್ರಾಹ್ಮಣ ನಿರ್ನಾಮದ ವ್ಯರ್ಥ ಪ್ರಯತ್ನಗಳೂ, ಜಾತಿಕಲಹ ನಿರ್ಮಿಸುವ ಅನರ್ಥಗಳೂ, 'ಧರ್ಮಕ್ಕೇ ಜಯ' ಎಂದು ಸಾರುವ ನೂರಾರು ದೇವಾಸುರಯುದ್ಧಸಾಂಕೇತಿಕ ಪ್ರಕರಣಗಳೂ, ಕಾಣಬರುತ್ತವೆ. “ಕಂಭದಿಂದ ಹೊರಬರುವ ದೇವರು, ಬ್ಯಾಲೆಟ್ ಬಾಕ್ಸಿನಿಂದಲೂ ಹೊರಬರಬಲ್ಲ” ಎಂದರೆ ನರಸಿಂಹಾವತಾರಕ್ಕೆ ಎಂಥ ವ್ಯಾಖ್ಯೆಯಾಗುತ್ತದೆ, ನೋಡಿಕೊಳ್ಳಿ! ಬ್ರಿಟಿಷರನ್ನು ಭಾರತ ಹೊರದಬ್ಬಿದಂತೆ ಅಂದು ವಾಮನ ತ್ರಿವಿಕ್ರಮನಾಗಿ ಬಲಿಯನ್ನು ಹೊರದಬ್ಬಿದ! ಎಷ್ಟು ಬಲ ಇದ್ದರೇನು? ಧರ್ಮಬಲ, ದೈವಬಲ ಇಲ್ಲದವನು ಎಂಥಾ 'ಬಲಿ?' ಅವನಿಗೆ ಸಿಗುವುದೇ 'ಬಲಿದಾನ'ದ ನಿರ್ಬಂಧದ 'ಬಲಿ' ಎಂದರೆ ಎಂಥ ವ್ಯಾಖ್ಯೆ!! ದೇವಾಸುರರು ಕೂಡಿಯೇ ಸಮುದ್ರಮಥನ ಮಾಡಬೇಕಾದ ನಿರ್ಬಂಧಕ್ಕೆ ಅಪೂರ್ವ ವಿಶ್ವರಾಜಕೀಯ ವ್ಯಾಖ್ಯೆಗಳನ್ನು ಎಷ್ಟು ಬೇಕಾದರೂ ಬರೆಯಬಹುದು.

ಈ ನಿಧಿ, ಈ ಗಣಿ, ಈ ಶಬ್ದಭಂಡಾರದ, ಸಾಹಿತ್ಯದ ನಿತ್ಯನೂತನ ಧ್ವನಿಗಳನ್ನು ಉಪಯೋಗಿಸಿಕೊಳ್ಳದ, ಇದನ್ನೆಲ್ಲ 'ಕಂತೆ' ಎಂದು ಭಾವಿಸಿರುವ ಇಂದಿನ ಕೆಲವು ಭಾರತೀಯರ ಮೂಢತೆಗೆ ನಾನು ಕಣ್ಣೀರು ಸುರಿಸಿದ್ದೇನೆ.

ಆ ಹನಿಗಳಿಂದ ಹುಟ್ಟಿಬಂದ ಈ ಕಥಾ, ಕಾದಂಬರೀರೂಪದ ಹೊಸ ಬಗೆಯ ಸಾಹಿತ್ಯ ಈಗ ನಿಮ್ಮ ಕೈಯಲ್ಲಿದೆ.

-ಕೆ. ಎಸ್. ನಾರಾಯಣಾಚಾರ್ಯ(ಮುನ್ನುಡಿಯಿಂದ)
View full details