Beluru Ramamurthy
ದಾರಿದೀಪದ ಕಥೆಗಳು
ದಾರಿದೀಪದ ಕಥೆಗಳು
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 216
Type - Paperback
Couldn't load pickup availability
ಉನ್ನತಿತ್ರಯಗಳು ಲೇಖನದಿಂದ.. ದೇವುಡು ಅವರ ಮಹಾದರ್ಶನದಲ್ಲಿ ಉನ್ನತಿತ್ರಯಗಳ ಬಗೆಗೆ ಪ್ರಸ್ತಾಪವಿದೆ. ಅವುಗಳ ವಿವರ ಹೀಗಿದೆ.
ಕಾಯೋನ್ನತಿ
ಜಗದಲ್ಲಿ ಎಲ್ಲ ಪ್ರಾಣಿಗಳೂ ಹುಟ್ಟಿದೊಡನೇ ಸ್ವತಂತ್ರವಾಗುತ್ತವೆ. ಮನುಜನಿಗೆ ಮೂರ್ನಾಲ್ಕು ವರ್ಷಗಳಾಗುತ್ತವೆ. ಅಲ್ಲಿಯವರೆಗೆ ಮಗು ದೇವತಾಮಯವಾದ ಶರೀರಿಯಾಗಲಿ ಎಂದು ಸಂಕಲ್ಪಿಸಿ ತಾಯಿ ಸ್ತನ್ಯಪಾನ ಮಾಡಿಸಿದರೆ ಮಗು ಹಾಗೇ ಆಗುತ್ತದೆ. ಇದು ಕಾಯೋನ್ನತಿ, ಸಂಕಲ್ಪಪೂರ್ವಕವಾಗಿ ಬೆಳೆಸಿದ ದೇಹದಲ್ಲಿ ಕಣ್ಣು, ಧರ್ಮ, ಚಕ್ಷು ಗಳಿರುವುದರಿಂದ ಜೊತೆಗೆ ಜ್ಞಾನಚಕ್ಷಸ್ಸೂ ಆಗುವ ಯೋಗ್ಯತೆಯನ್ನು ಪಡೆಯುವುದು. ಮಳೆಯಿಂದ ಬೆಳೆದ ಭತ್ತವೂ ಭತ್ತವೇ ನೀರು ಹಾಯಿಸಿ ಬೆಳೆದ ಭತ್ತವೂ ಭತ್ತವೇ. ಆದರೆ ಎರಡನೆಯದರಲ್ಲಿ ಇರುವ ಮೃದುತ್ವಾದಿ ಗುಣಗಳು ಮೊದನಲೆಯದಕ್ಕಿರುವುದಿಲ್ಲ. ನೆಲ ತನಗೆ ತೋರಿದಂತೆ ಹೇಳಿ ಕೇಳುವವರಿಲ್ಲದೆ ಬೆಳೆದರೆ ಕಾಡು, ಹಾಗಿಲ್ಲದೆ ಒಬ್ಬನ ಸಂಕಲ್ಪದಂತೆ ಬೆಳೆದರೆ ಹೊಲ. ಇವೇ ಕಾಯೋನ್ನತಿ
ಮನೋನ್ನತಿ
ಶ್ರೋತ್ರಿಯ ಬ್ರಾಹ್ಮಣನು ತನಗೆ ಪ್ರಾಣ ಹೋಗುತ್ತಿದ್ದರೂ ಕೈ ಕಾಲು ತೊಳೆದುಕೊಂಡು ಶುದ್ದಾಶಮನ ಮಾಡುವವರೆಗೂ ನೀರು ಕುಡಿಯುವುದಿಲ್ಲ. ಹಾಗೆಯೇ ಉತ್ತಮರು ಯಾರೂ ಮಲಿನ ಬಟ್ಟೆಯನ್ನು ತೊಡುವುದಿಲ್ಲ. ಮನಸ್ಸಿಗೆ ಬರುವ ಕಾರ್ಯಗಳಲ್ಲಿ ಇದು ಯೋಗ್ಯ ಇದು ಅಯೋಗ್ಯ ಎಂದು ವಿಭಾಗಿಸಿಕೊಂಡು ಅದರಂತೆ ನಡೆಯುವುದು ಮನೋನ್ನತಿ ತನ್ನದಲ್ಲದ್ದು ತನಗೆ ಬೇಡವೆಂದು ನಿರ್ಬಂಧ ಹಾಕಿಕೊಳ್ಳುವುದು. ಇತರರಿಗೆ ನೋವಾದರೆ ತನಗೇ ನೋವಾದಂತೆ ನಡೆದುಕೊಳ್ಳುವುದು. ತನ್ನಲ್ಲಿ ಈಶ್ವರನಿದ್ದಾನೆಂದು, ಅದೇ ಈಶ್ವರನು ಇತರರಲ್ಲಿಯೂ ಇದ್ದಾನೆಂದು ನಂಬಿ ಈಶ್ವರನಿಗೆ ದ್ರೋಹ ಆಗದಂತೆ ನಡೆಯುವುದು, ಇವೆಲ್ಲಾ ಮನೋನ್ನತಿಯ ಲಕ್ಷಣಗಳು.
ವಿದ್ಯೋನ್ನತಿ
ವಿದ್ಯೋನ್ನತಿಯಲ್ಲಿ ಬುದ್ಧಿಯನ್ನು ಸೂಕ್ಷ್ಮಪಡಿಸಬೇಕೆಂಬ ಸಂಕಲ್ಪವಿದೆ. ವಿದ್ಯೆಯು ಹಾದಿಯ ಕೊನೆಯನ್ನು ಸೇರಿಸುವ ಸಾಧನ. ಅದಕ್ಕೆ ತಕ್ಕ ಸಾಮರ್ಥ್ಯವನ್ನು ಸಂಪಾದಿಸಿಕೊಡುವ ವಿದ್ಯೆಯನ್ನು ಆರಾಧಿಸುವುದು ವಿದ್ಯೋನ್ನತಿ. ಹೊಟ್ಟೆ ಬಟ್ಟೆಯಿಂದಾಚೆಗೆ ಇನ್ನೂ ಏನೋ ಇದೆ ಎಂದು ಆರಾಧಿಸುವುದು ವಿದ್ಯೋನ್ನತಿ, ಭೂಮಿಯಲ್ಲಿರುವ ನೀರಿನಂತೆ ಮರೆಯಲ್ಲಿದ್ದು ಅಮೃತವನ್ನು ಹುಡುಕಬೇಕು. ಅದು ಎಲ್ಲಿ ಇರುವುದೋ ಅಲ್ಲಿಗೆ ಹೋಗುವ ಸಾಮರ್ಥ್ಯವನ್ನು ಕಲ್ಪಿಸಿಕೊಡುವುದು ವಿದ್ಯೆ. ಅಂತಹ ವಿದ್ಯೆಯನ್ನು ಸಾಧಿಸುವುದು ವಿದ್ಯೋನ್ನತಿ.
(ಲೇಖನದ ಪೂರ್ಣಪಾಠಕ್ಕೆ ಗ್ರಂಥದ 3ನೇ ಲೇಖನವನ್ನು ಓದಿ)
Share


Subscribe to our emails
Subscribe to our mailing list for insider news, product launches, and more.