Dr. N. Jagadish Koppa
ದಕ್ಷಿಣದ ಗಾಂಧಿ ಕೆ. ಕಾಮರಾಜ್
ದಕ್ಷಿಣದ ಗಾಂಧಿ ಕೆ. ಕಾಮರಾಜ್
Publisher -
- Free Shipping Above ₹350
- Cash on Delivery (COD) Available*
Pages - 148
Type - Paperback
Couldn't load pickup availability
ಇಂಡಿಯಾ ಕಂಡ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಕೆ. ಕಾಮರಾಜ್ ಅವರು ಪ್ರಮುಖರು. ಪಕ್ಷ, ಸಿದ್ಧಾಂತ, ನಾಡು-ನುಡಿ ಮತ್ತು ಆದರ್ಶಗಳಿಗೆ ತಮ್ಮನು ಸರ್ವದಾ ಮುಡುಪಿಟ್ಟುಕೊಂಡವರು. ಜನಪರವಾದ ಕಾಳಜಿ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಒತ್ತು, ಕಾರ್ಯಬದ್ಧತೆ, ಸರಳತೆ ಹೀಗೆ ಹತ್ತಾರು ವಿಷಯಗಳಲ್ಲಿ ಮಾದರಿಯಾಗಿ ಬದುಕಿ ಬಾಳಿದವರು, ಎಂತಹ ಸಮಯದಲ್ಲಿಯೂ ಅಧಿಕಾರಕ್ಕಾಗಿ ಹಂಬಲಿಸದೇ ಪಕ್ಷ ಮತ್ತು ಆದರ್ಶಗಳಿಗೆ ನಿಷ್ಠವಾಗಿ ದುಡಿಯುವ ಅವರ ಕಾರ್ಯತತ್ಪರತೆ, ವೈಯುಕ್ತಿಕ ಮತ್ತು ಸಾರ್ವಜನಿಕ ಜೀವನಗಳಲ್ಲಿ ಬೇರೆಯಾಗಿ ನೋಡದೇ ಅವುಗಳಲ್ಲಿ ಶುದ್ಧ ಹಸ್ತರಾಗಿ, ತನ್ನ ನೆಲಕ್ಕಾಗಿ, ಸಮಾಜಕ್ಕಾಗಿ ಬದುಕುವ ಬದ್ಧತೆಯು ವರ್ತಮಾನದ ಇಂಡಿಯಾದಲ್ಲಿನ ರಾಜಕಾರಣವು ಕಲಿಯಬೇಕಾದ ಒಂದು ಜೀವಂತ ಪಾಠ.
ಕೆ ಕಾಮರಾಜ್ ಅವರು ಒಂದು ಪ್ರದೇಶಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರನ್ನು ದಕ್ಷಿಣದ ಗಾಂಧಿ ಎಂದು ಕರೆದಿರಬಹುದು, ಅವರು ತಮಿಳುನಾಡಿನ ಶಾಸಕ, ಸಂಸದ, ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿರಬಹುದು. ಆದರೆ ಅವರ ಆದರ್ಶ ಮತ್ತು ಜೀವನ ಮೌಲ್ಯಗಳು ಲೋಕಕ್ಕೆ ಬೇಕಾದವು. ಸಮಾಜ, ಶಿಕ್ಷಣ, ಸಮಾನತೆ, ಉದ್ಯಮಶೀಲತೆ ಮೊದಲಾದ ವಿಚಾರಗಳಲ್ಲಿ ಅವರಿಗಿರುವ ಆಸಕ್ತಿ ಮತ್ತು ಆಲೋಚನೆಗಳು ಕಂಡಾಗ ಅವರೊಬ್ಬ'ಲೋಕಚಿಂತಕ'ರೆನ್ನುವುದರಲ್ಲಿ ಎರಡನೇ ಮಾತಿಲ್ಲ.
ಇಂದಿನ ಯುವ ರಾಜಕೀಯ ಕಾರ್ಯಕರ್ತರಿಗೆ ಕೆ. ಕಾಮರಾಜ್, ಎಸ್ ನಿಜಲಿಂಗಪ್ಪ ಅಂತಹವರು ಅತ್ಯುತ್ತಮ ಮಾದರಿ. ಹಿರಿಯರಾದ ಜಗದೀಶ್ ಕೊಪ್ಪ ಅವರು ಕಾಮರಾಜ್ ಅವರ ಬದುಕಿನ ಚಿತ್ರಣವನ್ನು ಅವರ ಸಮಕಾಲೀನ ವಸ್ತು ಸ್ಥಿತಿ ಅಧ್ಯಯನಗಳ ಜೊತೆಗೆ ಈ ಪುಸ್ತಕದಲ್ಲಿ ತುಂಬಾ ಚೆನ್ನಾಗಿ ನಿರೂಪಿಸಿಕೊಟ್ಟಿದ್ದಾರೆ. ಈ ಪುಸ್ತಕದ ಓದು ಯುವಜನರ ರಾಜಕೀಯ ಚಿಂತನೆಗಳಿಗೆ, ಹೋರಾಟಗಳಿಗೆ ಸ್ಪೂರ್ತಿಯಾದರೆ ಸಾರ್ಥಕ್ಯ.
- ರಾಜೇಂದ್ರ ಪ್ರಸಾದ್
Share

Subscribe to our emails
Subscribe to our mailing list for insider news, product launches, and more.