D. S. Lingaraju
Publisher -
Regular price
Rs. 210.00
Regular price
Sale price
Rs. 210.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಭೂಮಿಯ ಮೇಲೆ ಮಾನವನ ಹೆಜ್ಜೆಗುರುತು ಮೂಡಿದಂದಿನಿಂದ, ಆತ ಒಂದೆಡೆ ನಿಲ್ಲದ ವಿಶಾಲ ಭೂಖಂಡದ ಎಲ್ಲೆಡೆಗೂ ವಲಸೆ ಹೊರಟಿದ್ದ. ಆಹಾರ ಹುಡುಕುತ್ತ ನೀರಿನ ಸೆಲೆ ಕಂಡಲ್ಲಿ ತಾತ್ಕಾಲಿಕ ನೆಲೆ ನಿಂತು, ಅಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಇನ್ನೊಂದೆಡೆಗೆ ಸಾಗುತ್ತ ಇಡೀ ಭೂಮಂಡಲವನ್ನೇ ಸುತ್ತಿದ್ದ. ಬೇಟೆಯ ಹಂತದಿಂದ ಕೃಷಿಗೆ ಪಲ್ಲಟಗೊಂಡಾಗ ಆತನ ಈ ವಲಸೆಗೆ ಒಂದು ಕಡಿವಾಣ ಬಿದ್ದಂತಾಗಿ ಒಂದೆಡೆ ನೆಲೆನಿಂತ, ಭೂಮಿಯನ್ನು ಉತ್ತು-ಬಿತ್ತಿ-ಬೆಳೆದು ಮನೆ ಕಟ್ಟಿ ಒಂದೆಡೆ ಸ್ಥಾಯಿಯಾಗಿ ನಿಂತ. ಜೊತೆಗೆ ಪಶುಪಾಲಕನಾದ. ಸಮುದಾಯವೊಂದು ರೂಪುಗೊಂಡು ಅಲ್ಲಲ್ಲಿ ನೆಲೆ ನಿಂತು, ಭೂ ಒಡೆಯನಾಗಿ ಬದಲಾದ. ತಂತಾನೇ ನಾಗರಿಕತೆಯೊಂದು ಉದಯವಾಯಿತು. ಭೂಮಿಯ ಹಲವು ಭಾಗಗಳನ್ನು ಆಕ್ರಮಿಸುತ್ತಿದ್ದಂತೆ, ಇದು ತನ್ನದೆಂಬ ಮೋಹ ಬೆಳೆಯಿತು. ಬಲಶಾಲಿಯು ಮುಂದೆ ಅರಸನಾಗಿ ಸಾಮ್ರಾಜ್ಯಗಳನ್ನೇ ಕಟ್ಟಿ ಚಕ್ರವರ್ತಿಯಾಗಿ ಮೆರೆದು ಯುದ್ಧಗಳನ್ನು ಸಾರಿದ. ಹಲವು ಪ್ರದೇಶಗಳ ನದಿ ತೀರಗಳಲ್ಲಿ ಹಲವಾರು ನಾಗರಿಕತೆಗಳು ಬೆಳೆದವು. ಕೆಲವು ಅಳಿದು ಹೊಸದಾಗಿ ತಲೆಯೆತ್ತಿದವು. ಹೀಗೆ ಈ ಭೂಮಂಡಲದ ಮಹಾನ್ ನಾಗರಿಕತೆಗಳು ಬೆಳೆದು ಬಂದ ರೋಚಕ ಕಥೆಯನ್ನು ಇಲ್ಲಿ ಪರಿಚಯಿಸಲಾಗಿದೆ.
