N. Sandhya Rani
Publisher - ಸಾವಣ್ಣ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
‘ಸಿನಿಮಾಯಾಲೋಕ’ ಎನ್. ಸಂಧ್ಯಾರಾಣಿ ಅವರ ಲೇಖನ ಸಂಕಲನ. ಸಿನಿ ಮಾಯಾಲೋಕ- ಇದು ಸಿನಿಮಾ ಎನ್ನುವ ಮಾಯಾಲೋಕವನ್ನು ಕುರಿತ ಬರಹಗಳು. ನಾವು ಬೆಳೆಯುತ್ತಿದ್ದಾಗ ಸಿನಿಮಾ ನಮ್ಮ ಏಕೈಕ ಮನರಂಜನೆ. ಗಡಿಭಾಗದ ಕೋಲಾರ ಜಿಲ್ಲೆಯಲ್ಲಿ ಬೆಳೆದ ನನಗೆ ಕನ್ನಡದಷ್ಟೇ ತೆಲುಗು ಮತ್ತು ತಮಿಳು ಚಿತ್ರಗಳೂ ಪ್ರಿಯ. ಇವುಗಳ ಜೊತೆಯಲ್ಲಿ ಆಗ ದೂರದರ್ಶನದಲ್ಲಿ ಭಾನುವಾರ ಮಧ್ಯಾಹ್ನಗಳಂದು ಬರುತ್ತಿದ್ದ ಭಿನ್ನಧ್ವನಿಯ ಚಲನಚಿತ್ರಗಳು ನಮ್ಮ ಅರಿವನ್ನು, ಸಿನಿಮಾ ಕಲ್ಪನೆಯನ್ನೂ ವಿಸ್ತರಿಸುತ್ತಿದ್ದವು ಎನ್ನುತ್ತಾರೆ ಲೇಖಕಿ ಸಂಧ್ಯಾರಾಣಿ. " ಈಗಂತೂ ನನಗೆ ಸಿನಿಮಾ ಎನ್ನುವುದು ದಿನಪತ್ರಿಕೆಯ ಹಾಗೇ ದಿನಪತ್ರಿಕೆ ಓದದ, ಒಂದಾದರೂ ಸಿನಿಮಾ ನೋಡದ ದಿನಗಳು ನನ್ನ ಕ್ಯಾಲೆಂಡರಿನಲ್ಲಿ ಬಹಳ ಕಡಿಮೆ. ಹೀಗೆ ಇಷ್ಟಬಂದ ಚಿತ್ರಗಳನ್ನು ನೋಡುತ್ತಿದ್ದವಳಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸನ ಜಗತ್ತಿನ ಸಿನಿಮಾಗಳನ್ನು ಕಣ್ಣೆದುರಲ್ಲಿ ತಂದು ನಿಲ್ಲಿಸಿತ್ತು. ಹಾಗೇ ನೋಡಿದ ಕೆಲವು ಚಿತ್ರಗಳ ಬಗ್ಗೆ ಬರೆಯದೆ ಇರಲು ಸಾಧ್ಯವೇ ಇಲ್ಲ ಎಂದಾಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಿತ್ರಗಳು ಮತ್ತು ತೆಲುಗು, ತಮಿಳು, ಮಲಯಾಳಂ ಚಿತ್ರಗಳನ್ನು ನಾನು ಕಂಡ ಬಗೆ ಮತ್ತು ಅವುಗಳೊಡನೆ ನನ್ನ ಸಂವಾದವನ್ನು ಬರೆಯಲಾರಂಭಿಸಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಸಿದ್ಧವಾದ ಚಲನಚಿತ್ರ ಇನ್ಯಾವುದೋ ಮೂಲೆಯಲ್ಲಿರುವವರೊಂದಿಗೆ ಮಾತನಾಡಲು ಸಾಧ್ಯ ಎನ್ನುವುದರಲ್ಲಿ ಸಿನಿಮಾದ ಮಾಯಾಲೋಕ ಇದೆ. ರಾಜ್ಯ, ದೇಶ, ಖಂಡಗಳಾಚೆಗೂ ಮನುಷ್ಯರ ಬದುಕು, ಪ್ರೀತಿ, ಪ್ರೇಮ, ನೋವು, ಅವಮಾನ, ತಲ್ಲಣ ಮೂಲಭೂತವಾಗಿಒಂದೇ ಎನ್ನುವುದು ನನ್ನ ನಂಬಿಕೆ. ಹಾಗಾಗಿಯೇ ಈ ಕಥೆಗಳು ನಮ್ಮೆಲ್ಲರ ಕಥೆಯೂ ಹೌದು" ಎಂದಿದ್ದಾರೆ.
