Skip to product information
1 of 2

B. S. Venkatesha Rao

ಸಿನಿ ಮಾಯೆ

ಸಿನಿ ಮಾಯೆ

Publisher - ಸ್ನೇಹ ಬುಕ್ ಹೌಸ್

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 132

Type - Paperback

Gift Wrap
Gift Wrap Rs. 15.00
ರಂಗುರಂಗಿನ ಮಾಯಾನಗರಿ ಗಾಂಧಿನಗರದತ್ತ ಆಸೆಗಣ್ಣುಗಳಿಂದ ನೋಡುತ್ತಾ ಹೆಜ್ಜೆ ಹಾಕುವ ಯುವ ಪ್ರತಿಭೆಗಳಿಗೆ ಉತ್ತಮ ಕೈಪಿಡಿಯಂತಿರುವ "ಸಿನಿ - ಮಾಯೆ" ಕೃತಿಯ ಲೇಖಕರಾದ ಬಿ. ಎಸ್. ವೆಂಕಟೇಶ ರಾವ್ ಅವರ ಬಗ್ಗೆ ಅತೀವವಾದ ಗೌರವ ಮೂಡಲು ಕಾರಣ ಈ ವಯಸ್ಸಿನಲ್ಲಿ ಅವರಿಗಿರುವ ಬರೆಯುವ ಹುಮ್ಮಸ್ಸು ಮತ್ತು ಹೊಸ ತಲೆಮಾರಿನ ಸಿನಿಮಾಸಕ್ತ ಯುವಕ/ಯುವತಿಯರಿಗೆ ಮಾರ್ಗದರ್ಶನದ ರೂಪದಲ್ಲಿ ಇಂಥದೊಂದು ಪುಸ್ತಕ ರೂಪಿಸಿಕೊಡುವಲ್ಲಿನ ಆಸಕ್ತಿ,

ಕಳೆದ ನಾಲ್ಕು ದಶಕಗಳಿಂದ ಕಿರುಚಿತ್ರ, ಬೀದಿನಾಟಕಗಳ ಮೂಲಕ ತಮ್ಮದೇ ಛಾಪು ಮೂಡಿಸುತ್ತ ಬಂದ ಇವರ ಅನುಭವ ಕೋಶ ವಿಸ್ತಾರವಾದದ್ದು. ಅಭಿನಯ, ನಟನೆ, ನಿರ್ದೇಶನದ ಮೂಲಕ ತಮ್ಮ ಅಂತರ್ಲೋಕದ ಮಿಡಿತಗಳನ್ನು, ಸಂವೇದನೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತಾ ಬಂದಿರುವ ಈ ಹಿರಿಯ ಜೀವ ಈಗಿನ ತಲೆಮಾರಿನ ಅನೇಕರಿಗೆ ಸ್ಫೂರ್ತಿಯಾಗಬಲ್ಲದು.

"ಸಿನಿ - ಮಾಯೆ" ಕೃತಿ ಹೆಚ್ಚು ಹೆಚ್ಚು ಜನರ ಕೈ ತಲುಪಲಿ, ಹೃದಯ ತಟ್ಟಲಿ, ಆ ಮೂಲಕ ತನ್ನ ಸಾರ್ಥಕತೆ ಪಡೆದುಕೊಳ್ಳಲಿ ಎನ್ನುತ್ತಾ ಕನ್ನಡ ಸಿನಿಮಾ ಸಂದರ್ಭದಲ್ಲಿನ ಈ ಮಹತ್ವದ ಕೃತಿಯ ಕರ್ತೃ ಬಿ.ಎಸ್. ವೆಂಕಟೇಶ ರಾವ್ ಅವರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ.

- ಹೃದಯ ಶಿವ
View full details