Asha Raghu
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕಾಳಿದಾಸನ ಅಭಿಜಾನ ಶಾಕುಂತಲ ನಾಟಕದಲ್ಲಿ ಪ್ರೇಮದ ಸಂಕೇತವಾದಂತೆ, ಒಂದು ನಿರ್ಣಾಯಕ ಉಪಾಧಿಯಾದಂತೆ ಈ ನಾಟಕದಲ್ಲಿ ಚೂಡಾಮಣಿಯೇ ಸೀತಾರಾಮರ ಪ್ರೇಮದ ಸಂಕೇತವಾಗಿದೆ. ನಾಟಕದುದ್ದಕ್ಕೂ ಮತ್ತೆ ಮತ್ತೆ ಪುನರಾವರ್ತನೆ ಯಾಗುವ 'ರೆಕರಿಂಗ್ ಮೆಟಫರ್' ಆಗಿದೆ. ಇದರ ಹಲವಾರು ದೃಶ್ಯಗಳು ಕಾವ್ಯಾತ್ಮಕ ಗುಣ ಪಡೆದಿರುವುದುಂಟು. ಮೂಲ ಉತ್ತರ ಕಾಂಡದ ಕತೆಗೆ ಹೋಲಿಸಿದರೆ ಇದರಲ್ಲಿ ಹಲವು ಮಾರ್ಪಾಟುಗಳೂ ಉಂಟು. ಉತ್ತರಕಾಂಡದಲ್ಲಿ ದುರಂತ ಅಂತ್ಯವಿದೆ. ಆದರೆ ಇಲ್ಲಿ ಸೀತಾರಾಮರು ರಾಜ್ಯವನ್ನು ಮಕ್ಕಳಿಗೊಪ್ಪಿಸಿ ಸ್ವತಂತ್ರರಾಗುತ್ತಾರೆ.
ಎಲ್ಲರಿಂದ ದೂರವಾಗಿ ಉಳಿದ ಆಯುಷ್ಯವನ್ನು ಏಕಾಂತದಲ್ಲಿ ಜೊತೆಯಾಗಿ ಕಳೆಯಲು ನಿರ್ಧರಿಸುತ್ತಾರೆ. ಹೆಂಡತಿಯಾದವಳು ಗಂಡನ ಸಹಚಾರಿಣಿಯೆಂಬುದು ನಮ್ಮ ಸಾಮಾನ್ಯ ನಂಬಿಕೆಯಾಗಿದೆ. ಆದರೆ 'ಚೂಡಾಮಣಿ' ನಾಟಕದಲ್ಲಿ ಕೊನೆಗೆ ರಾಮನೇ ಸೀತೆಯನ್ನು ಹಿಂಬಾಲಿಸಲು ಬಯಸುವ ಸನ್ನಿವೇಶ ನಿಜಕ್ಕೂ ಹೃದಯಂಗಮವಾಗಿದೆ. ಶ್ರೀಮತಿ ಆಶಾರಘು ಅವರ ಉತ್ಸಾಹ ಮತ್ತು ಧ್ಯಾನಶೀಲತೆಗಳು ಇಂದಿನ ಯುವಲೇಖಕರಿಗೆ ನಿಜಕ್ಕೂ ಒಂದು ಮೇಲ್ಪಂಕ್ತಿಯಾಗಿದೆ.
ಇದು ಯಾವುದೇ ರಂಗ ನಿರ್ದೇಶಕನಿಗೆ ಸವಾಲೆಸೆವ ನಾಟಕವಲ್ಲ, ಬದಲಾಗಿ ನಿರ್ದೇಶಕನಿಗೆ ಸರ್ವ ಸ್ವಾತಂತ್ರ್ಯ ನೀಡಬಲ್ಲ ನಾಟಕವಾಗಿದೆ.
-ಡಾ|| ಟಿ.ಎನ್. ವಾಸುದೇವಮೂರ್ತಿ
ನೆನಪಿನ ಬುತ್ತಿಯಾಗಿ ದಾಂಪತ್ಯದ ದ್ಯೋತಕವಾಗಿ ಚೂಡಾಮಣಿಯ ನಿರ್ವಚನವಾಗುತ್ತಲೇ ಕುಟೀರ ಮತ್ತು ಅಯೋಧ್ಯೆ ಎಂಬ ಎರಡು ಚಿತ್ರಣಗಳ ಮೂಲಕ ಭಿನ್ನ ಸಾಮಾಜಿಕ ಸಂದರ್ಭಗಳನ್ನು ನಿರೂಪಣೆ ಮಾಡುವುದು ಈ ನಾಟಕದ ಶಕ್ತಿಗಳಲ್ಲಿ ಮುಖ್ಯವಾದುದು, ಆಪ್ತವಾಗಿ ಸಂವಹನ ಮಾಡುವ ಪಾತ್ರಗಳು, ದೇಸಿ ನುಡಿಗಟ್ಟು, ಕಥೆ ಹೇಳುವ ತಂತ್ರ, ಕಾವ್ಯಾತ್ಮಕ ಭಾಷೆ, ಕಥಾ ಹಂದರಕ್ಕೆ ಪೂರಕವಾಗಿ ನಿಲ್ಲುವ ಹಾಡುಗಳು, ಸನ್ನಿವೇಶ ಮತ್ತು ದೃಶ್ಯಗಳ ಕಟ್ಟುವಿಕೆ, ನವಿರು ಸಂಭಾಷಣೆ ಇತ್ಯಾದಿಗಳು ನಾಟಕವನ್ನು ಓದಲು ಪ್ರಿಯವೆನಿಸುತ್ತದೆ.
-ಶ್ರೀ ಬೇಲೂರು ರಘುನಂದನ
-ಪ್ರಕಾಶಕರು - ಸಾಹಿತ್ಯ ಲೋಕ ಪ್ರಕಾಶನ
