ಚೋಮನ ದುಡಿ

ಚೋಮನ ದುಡಿ

ಮಾರಾಟಗಾರ
ಡಾ. ಕೆ. ಶಿವರಾಮ ಕಾರಂತ
ಬೆಲೆ
Rs. 70.00
ಕೊಡುಗೆಯ ಬೆಲೆ
Rs. 70.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ದಕ್ಷಿಣಕನ್ನಡ ಜಿಲ್ಲೆಯ ಜೀವನಚಿತ್ರಣವಿರುವ ಈ ಪುಟ್ಟ ಪುಸ್ತಕ 1930-40 ರ ದಶಕದ ಸಾಮಾಜಿಕ ವ್ಯವಸ್ಥೆಯನ್ನು ಹೊರಚೆಲ್ಲುತ್ತದೆ. ಸಮಾಜದ ವಿಭಿನ್ನ ಸ್ತರಗಳ ತಾರತಮ್ಯದ ಚಿತ್ರಣದ ಒಂದು ಭಾಗವಾದ ಚೋಮನಿಗೆ ಅವನ ದುಡಿಯೇ ಆಸ್ತಿ… ಬಂಡವಾಳ…! ಈ ಕಥಾವಸ್ತು ಮುಖ್ಯವಾಗಿ ಸಮಾಜದ ರೀತಿನೀತಿಗಳ… ಜಾತಿವ್ಯವಸ್ಥೆಯ ಪರಿಚಯ.

ಜಾತಿ… ಜೀತ… ಭೂಮಿಯ ಹಂಚಿಕೆಯಲ್ಲಿ ಅಸಮಾನತೆ… ತಾರತಮ್ಯ… ಇವೆಲ್ಲವುಗಳ ಸಮಾಜದರ್ಶನದ ಚಿತ್ರಣವಿದೆ. ಚೋಮನ ಆಸೆ ಕನಸು ತಾನು ಸ್ವಂತವಾಗಿ ಬೇಸಾಯ ಮಾಡಬೇಕೆಂದ ಆಸ್ಥೆಯನ್ನು ಉಳ್ಳವರ ಹಠದಿಂದ… ಬೇಧಭಾವದಿಂದ ಹೊಸಕಿ ಹಾಕುವ ಪ್ರಯತ್ನ… ಸಮಾಜದ ಶೋಷಿತವರ್ಗದವನ ಒಳದನಿಯಾಗಿದೆ…

ಕಾರಂತರ ಈ ಪುಸ್ತಕ ಇಂದಿಗೆ ಹೋಲಿಸಿದಾಗ ಪುಟ್ಟಪುಸ್ತಕವೆಂದು ತೋರಿದರೂ ಅದರಲ್ಲಿ ಅಡಕವಾಗಿರುವ ವಸ್ತುವಿಷಯ ನಿಮ್ನವರ್ಗದವರ ಆಂತರ್ಯದ ದನಿ… ಆಳುಮಗನೊಬ್ಬನ ಆಸೆ… ಅದು ನೇರವೇರದ ಕೊರಗು… ಇಂತಹ ಜಾತೀಯತೆಯನ್ನಾಧರಿಸಿದ ವಿಷಯಗಳನ್ನು ತುಲನಾತ್ಮಕವಾಗಿ ಅಂದಿನ ಕಾಲಕ್ಕೆ ತಾಳೆ ಹಾಕಿದರೆ ಇದೊಂದು ಕ್ರಾಂತಿಕಾರಕ ಕೃತಿಯೇ…!