C.N. Krishnamurthy
ಚಿನ್ನದ ಕಳಶಗಳು
ಚಿನ್ನದ ಕಳಶಗಳು
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹350
- Cash on Delivery (COD) Available
Pages - 1005
Type - Paperback
Couldn't load pickup availability
ಅಂಗೈಯಲ್ಲಿ ಆಕಾಶವನ್ನು ತೋರುವ ಈ ಸಾಹಸದ ಅಂಗವಾಗಿ, ಶ್ರೀ ಕೃಷ್ಣಮೂರ್ತಿಗಳು ಇತಿಹಾಸ ಪ್ರಸಿದ್ಧರಾದ 26 ಮಹಾವ್ಯಕ್ತಿಗಳನ್ನು ಪರಿಚಯಿಸಿ ಕೊಟ್ಟಿದ್ದಾರೆ. ಇದರಿಂದಾಗಿ ಕರ್ನಾಟಕದ ಇತಿಹಾಸದ ಹಾಗೂ ಭಾರತೀಯ ಇತಿಹಾಸದ ಉಜ್ವಲ ಅಧ್ಯಾಯಗಳು ನಮ್ಮ ಮುಂದೆ ಅನಾವರಣಗೊಳ್ಳುತ್ತವೆ. ಸ್ವಾತಂತ್ರ್ಯ ಹೋರಾಟಕ್ಕೆ ಅವಿಸ್ಮರಣೀಯ ಕಾಣಿಕೆಯನ್ನು ಸಲ್ಲಿಸಿರುವ, ಹುತಾತ್ಮರಾಗಿರುವ 35 ಮಹನೀಯರ ಸಾಧನೆಗಳನ್ನು ಗಮನಿಸಿ ಕೃತಜ್ಞತೆಯಿಂದ ನಮ್ಮ ತಲೆ ಬಾಗುತ್ತದೆ. ಸುಪ್ರಸಿದ್ದರು ಮಾತ್ರವಲ್ಲದೆ ಇತಿಹಾಸದ ಮರೆವಿಗೂ ಸ್ವಲ್ಪಮಟ್ಟಿಗೆ ಪಾತ್ರರಾಗಿಬಿಟ್ಟಿರುವಂಥ ಕೆಲವು ಚೇತನಗಳನ್ನೂ ಪರಿಚಯಿಸಿರುವುದು ವಿಶೇಷ ಸಂಗತಿಯೇ ಆಗಿದೆ. ಜ್ಞಾನ ದೀವಿಗೆಗಳಾಗಿರುವ ಹಾಗೂ ಸಮಾಜ ಸುಧಾರಣೆಗಾಗಿ ತಮ್ಮ ಬಾಳನ್ನೇ ಅರ್ಪಿಸಿದ 37 ಮಂದಿ ಹಿರಿಯ ಚೇತನಗಳನ್ನು, ದಾದಾಭಾಯಿ ನವರೋಜಿಯವರಿಂದ ಹಿಡಿದು ಕಡಿದಾಳ್ ಮಂಜಪ್ಪನವರವರೆಗಿನ 40 ಮಂದಿ ವಿಶಿಷ್ಟ ಸಾಧಕರನ್ನು, ವಾಲ್ಮೀಕಿಯಿಂದ ಹಿಡಿದು ಜಯಕಾಂತನ್ವರೆಗಿನ ಭಾರತೀಯ ಸಾಹಿತ್ಯದ 61 ಮಂದಿ ಅನನ್ಯ ಸಾಧಕರನ್ನು, ತಾನ್ಸೇನ್ನಿಂದ ಹಿಡಿದು ಮಾಯಾರಾವ್ ಅವರವರೆಗಿನ 33 ಮಂದಿ ಕಲೋಪಾಸಕರನ್ನು, ಆರ್ಯಭಟನಿಂದ ಹಿಡಿದು ಬಿ.ಜಿ.ಎಲ್ ಸ್ವಾಮಿ ಅವರವರೆಗಿನ ವಿಜ್ಞಾನ ಲೋಕದ 26 ಮಂದಿ ಮಹತ್ತರ ಜ್ಞಾನಚಕ್ಷುಗಳನ್ನು ಭಾರತದ ಕೀರ್ತಿಯನ್ನು ಎತ್ತಿಹಿಡಿದಿರುವ ಮಿಹಿರ್ಸೇನ್ರಿಂದ ಹಿಡಿದು ಗೀತ್ಸೇಥ್ವರೆಗಿನ 11 ಮಂದಿ ಕ್ರೀಡಾಪಟುಗಳನ್ನು ಮದರ್ ಥೆರೇಸಾ ಅವರಿಂದ ಹಿಡಿದು ಬಾನಯಾನವನ್ನು ಶ್ರೀಸಾಮಾನ್ಯರಿಗೂ ಸಾಧ್ಯವಾಗಿಸಿದ ಕ್ಯಾಪ್ಟನ್ ಗೋಪಿನಾಥ್ ಅವರವರೆಗಿನ ವಿವಿಧ ಕ್ಷೇತ್ರಗಳಲ್ಲಿನ 25 ಮಂದಿ ವಿಶಿಷ್ಟ ವ್ಯಕ್ತಿಗಳನ್ನು ಪರಿಚಯಿಸಿಕೊಟ್ಟಿರುವ ಶ್ರೀಯುತರ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಲೇಬೇಕಾಗುತ್ತದೆ.
ಶ್ರೀ ಕೃಷ್ಣಮೂರ್ತಿಗಳ ಪರಿಶ್ರಮ-ತಾಳ್ಮೆಗೆ ನಾವು ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಇಂಥ ಮಹಾಸಾಧಕರ ಪಟ್ಟಿ ನಿತ್ಯ ನವೀಕೃತವಾಗುತ್ತಲೇ ಸಾಗುವುದರಿಂದ ಇದಕ್ಕೆ ಸೇರ್ಪಡೆಗಳು ಆಗುತ್ತಲೇ ಇರಬೇಕಾಗುತ್ತದೆ. ಇಂಥ ಇನ್ನೂ ಪುರವಣಿಗಳನ್ನು ಹೊರತರುವುದೂ ಅಗತ್ಯವಾಗುತ್ತ ಇರುತ್ತದೆ ಎನ್ನುವುದು ನಿಜವಾದರೂ, ಇಷ್ಟೊಂದು ಅಗಾಧವಾದ ಮಾಹಿತಿಯನ್ನು ವ್ಯವಸ್ಥಿತ ರೂಪದಲ್ಲಿ ತಂದುಕೊಟ್ಟಿರುವುದಕ್ಕಾಗಿ ಶ್ರೀ ಕೃಷ್ಣಮೂರ್ತಿಗಳಿಗೆ ಕನ್ನಡಿಗರು ಕೃತಜ್ಜರಾಗಿರಬೇಕಾಗಿದೆ.
-ಡಾ. ಪ್ರಧಾನ್ ಗುರುದತ್ತ (ಮುನ್ನುಡಿಯಿಂದ).
Share


Subscribe to our emails
Subscribe to our mailing list for insider news, product launches, and more.