Skip to product information
1 of 1

K. R. Swamy

ಚಿಗುರು ಚಿತ್ತಾರ

ಚಿಗುರು ಚಿತ್ತಾರ

Publisher - ಅಂಕಿತ ಪುಸ್ತಕ

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸಿಹಿನೆನಪುಗಳೇ ಹಾಗೆ, ಅದರಲ್ಲೂ ಮರುಕಳಿಸಲಾಗದ ಗತದ ಬಗ್ಗೆ ಹಳಹಳಿಕೆ ಇಲ್ಲದೇ ಸಹಜ ಜೀವನಪ್ರೀತಿಯಿಂದ ದಾಖಲಿಸಿದಾಗ ಅದು ಸದ್ಯಕ್ಕೂ ಕನ್ನಡಿಯಾಗಬಲ್ಲದು. ಕೆ.ಆರ್. ಸ್ವಾಮಿಯವರ ಈ ಲೇಖನಮಾಲೆಗೆ ಆ ಗುಣ ದಕ್ಕಿದೆ. ಅವರ ಲೇಖನ ಕೃಷಿಗೆ ಎಂತಹ ಉತ್ಕಟಕ್ಷಣದಲ್ಲೂ, ಎಂಥಾ ದುರಿತ ಸಂದರ್ಭದಲ್ಲೂ, ಒಳಸುಳಿಗಳಲ್ಲೆಲ್ಲೋ ಪ್ರಕಟವಾಗುವ ಬದುಕಲ್ಲಿನ ಅನುಭೋಗವನ್ನು ಸೆರೆಹಿಡಿಯುವ ಶಕ್ತಿ ಇದೆ. ಕೇವಲ ವಿಷಾದವಾಗಬಹುದಾಗಿದ್ದ ಮೂವರು ಅಜ್ಜಿಯಂದಿರ (ಬದುಕೆಂದರೆ ಹೀಗೆ) ಕಥೆಗೆ ಒಂದು ಅನುಭೂತಿ ಪ್ರಾಪ್ತವಾಗುತ್ತದೆ.

ವ್ಯಂಗ್ಯ ಚಿತ್ರವನ್ನೇ ಕಲಾಭಿವ್ಯಕ್ತಿ ಮಾಡಿಕೊಂಡ ಕೆ.ಆರ್.ಸ್ವಾಮಿಯವರ ಬರಹ ಸಮುಚ್ಚಯದಲ್ಲಿ ವ್ಯಂಗ್ಯ ಚಿತ್ರಕಲೆಯ ವೈಶಿಷ್ಟ್ಯವಾದ ಲಘುವಿನಲ್ಲಿ ಗುರು ಕಾಣುವ, ಗುರುವಿನಲ್ಲಿ ತನಿ ಕಾಣುವ ಪರಿಯನ್ನು ಗಮನಿಸಬಹುದು.

ದಾವಣಗೆರೆಯಲ್ಲಿ ಇಂಜನಿಯರಿಂಗ್ ಓದುತ್ತಿದ್ದ ಕೆ.ಆರ್.ಸ್ವಾಮಿಯವರು ರಜೆಗೆ ನಮ್ಮ ಮನೆಯಲ್ಲಿ ಒಂದು ವಾರ ಇದ್ದು ಹೋಗುತ್ತಿದ್ದದ್ದು ವಾಡಿಕೆ. ನಮ್ಮ ತಾಯಿಗೆ ತನ್ನ ತಮ್ಮ ಬಂದ ಎಂಬ ಸಂತೋಷವಾದರೆ ನಮಗೋ, ಬೆಳಗಾಗುತ್ತಿದ್ದಂತೆಯೇ ಈಜಾಡಲು ಕರೆಗೋ, ಹೊಳೆಗೋ ಕರೆದುಕೊಂಡು ಹೋಗುವ, ಮನೆಗೆ ಬಂದರೆ ತರತರಹದ ಹೊಸ ಆಟಗಳನ್ನು ಹೇಳಿಕೊಡುವ, ಸಂಜೆಯಾದರೆ ಗುಡ್ಡ ಬೆಟ್ಟಕ್ಕೆ ಕರೆದೊಯ್ದು ಈ ಮರದ ಹೆಸರೇನು ಹೇಳು? ಆ ಹೂವಿನ ವೈಶಿಷ್ಟ್ಯತೆ ಗೊತ್ತಾ? ಎಂದು ಪ್ರಶ್ನಿಸುತ್ತಾ ಪ್ರಕೃತಿ, ಪರಿಸರವನ್ನು ಪರಿಚಯಿಸುವ, ರಾತ್ರಿಯಾದರೆ ಸರಿರಾತ್ರಿಯವರೆಗೂ ತಾನು ಓದಿದ ಕನ್ನಡ ಸಾಹಿತ್ಯದ ಕಥೆ, ಕಾದಂಬರಿಗಳ ಸಂಕ್ಷಿಪ್ತ ವಿವರಣೆ ಹೇಳುವ ಕೆ.ಆರ್ ಸ್ವಾಮಿ (ನಮ್ಮ ರಾಮಣ್ಣ) ಬಂದರು ಎನ್ನುವ ಸಂತೋಷ. ಆಗಿನಿಂದಲೇ ಕುಶಲ ಸಂಭಾಷಣಾಕಾರರಾಗಿದ್ದ ಅವರ ಮಾತಿನ ಸರಸ, ಸುಭಗ ಶೈಲಿ ವಯಸ್ಸಾದಂತೆ ಕುಂದದೇ ಅದೇ ಗುಣವನ್ನು ಕಾಪಿಟ್ಟುಕೊಂಡಿದೆ ಹಾಗೂ ಅದು ಈ ಲೇಖನಗಳಲ್ಲೂ ಅನುರಣಿಸಿರುವುದೇ ಈ ಲೇಖನಗಳ ಪ್ರಧಾನ ಗುಣವಾಗಿದೆ.

-ಗಿರೀಶ್‌ ಕಾಸರವಳ್ಳಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)