ಜೋಗಿ
Publisher:
Couldn't load pickup availability
ಕಡಲನ್ನು ಸೇರುತ್ತೇನೆ ಎಂದು ಗೊತ್ತಿಲ್ಲದ ನದಿ ಕಡಲು ಸೇರಿದ ತಕ್ಷಣ ತನ್ನ ಅಸ್ತಿತ್ವವನ್ನ ಕಳಕೊಳ್ಳುವ ಸೋಜಿಗವ ಧ್ಯಾನಿಸುತ್ತೇನೆ.
ಧ್ಯಾನಿಸಿದರೆ ಕವಿ ಋಷಿಯಾಗುತ್ತಾನಂತೆ ಯೇಟ್ಸನಂತೆ
ನನಗೋ ಬೋದಿಲೇರನ ಹಾಗೆ ವಸಂತನಾಗುವ ಆಸೆ: ಅಕಾಲದಲ್ಲಿ ದಿವಂಗತನಾಗಿ.
ಮಾಡ್ಗಾನ್ ಬೆನ್ನಿಗೆ ಬಿದ್ದ ಯೇಟ್ಸ್‌ಗೆ ಕೊನೆಗೂ ದಕ್ಕಿದ್ದು ಎರಡೇ ಸಾಲು; Why, what could she have done, being what she is? Was there another Troy for her to burn?
ನಾನು ಪ್ರೀತಿಸಿ ಕವಿತೆ ಬರೆಯುತ್ತೇನೆ ಎಂದು ಅವಳಿಗೆ ಹೊಟ್ಟೆಕಿಚ್ಚು ನಾನು ಕವಿತೆ ಬರೆದು ಪ್ರೀತಿಸುತ್ತೇನೆ ಎಂದು ಇವನಿಗೆ ಗುಮಾನಿ.
ತನ್ನನ್ನು ಕೂಡಿದ ನದಿಯ ನೀರಿನ ರುಚಿ ಕಡಲಿಗೆ ನೆನಪುಂಟೆ? ನೆನಪನ್ನೂ ರುಚಿಯನ್ನೂ ಕಡಲಲ್ಲಿ ಕಳಕೊಂಡಿದ್ದಕ್ಕೆ ನದಿಗೆ ಕೊರಗುಂಟೆ?
ವರುಣಸೂಕ್ತ ಪಠಿಸುವ ಹೊತ್ತಿಗೇ ಅಗ್ನಿಕಾರ್ಯ ಶುರು. ಕಡಲೊಳಗೂ ಸುಡುಕೆಂಡ ಬಡಬಾಗ್ನಿ; ಬಾಕಿ ಮೊಕ್ತ.
ಪ್ರಕಾಶಕರು - ಅಂಕಿತ ಪುಸ್ತಕ
