Skip to product information
1 of 2

T. S. Padmanabha Sharma

ಚಾಲೀಸಾ ಸಂಗ್ರಹ

ಚಾಲೀಸಾ ಸಂಗ್ರಹ

Publisher - ಶ್ರೀನಿಧಿ ಪ್ರಕಾಶನ

Regular price Rs. 75.00
Regular price Rs. 75.00 Sale price Rs. 75.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 104

Type - Paperback

Gift Wrap
Gift Wrap Rs. 15.00

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮಹಾಸ್ತೋತ್ರ ಸಾಗರದ ವಿಷಯವನ್ನು ಕೆಲವು ನೈಮತ್ತಿಕ ಕಾಲದಲ್ಲಿ ಮಾತ್ರ ಉಪಯೋಗಿಸಲು ಮೊರೆ ಹೋಗುತ್ತೇವೆ, ಆದರೆ ನಿತ್ಯೋಪಯಾಗಕ್ಕಾಗಿ ಸರಳ ಸ್ತೋತ್ರವನ್ನು ಎದುರು ನೋಡುವುದು ಸಹಜ. ಅದಕ್ಕಾಗಿ ಅಷ್ಟೋತ್ತರ ಮಾತ್ರ ಮಾಡವುದು ವಾಡಿಕೆ. ಶ್ರೀಘ್ರ ಫಲಕ್ಕಾಗಿ ಸ್ತೋತ್ರದೊಂದಿಗೆ ಅಷ್ಟೋತ್ತರ ಮಾಡಿದರೆ ವಿಶೇಷ ಫಲ ಲಭ್ಯವಾಗುತ್ತೆ. ಆದಕಾರಣ 10 ಚಾಲೀಸಾಗಳನ್ನು . ಅಷ್ಟೋತ್ತರ ಸಹಿತವಾಗಿ ಸಂಗ್ರಹಿಸಿ ಕೊಡಲಾಗಿದೆ.

ದೇವತೆಗಳು ಸ್ತೋತ್ರ ಪ್ರಿಯರಾಗಿದ್ದಾರೆ. ಅವರನ್ನು ಭಕ್ತಿಯಿಂದ ಸ್ತುತಿಸಿದರೆ ಮಾನವರಾದ ನಮ್ಮ ಹಲವಾರು ದೈಹಿಕ, ಮಾನಸಿಕ ಕ್ಷೇಶಗಳು ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. ದೇವತೆಗಳನ್ನು ವೈದಿಕ, ಪೌರಾಣಿಕ ಸ್ತೋತ್ರಗಳಿಂದ ಪ್ರಾರ್ಥನೆ ಮಾಡುವ ಬಗೆಯೊಂದಾದರೆ, ಸಂಸ್ಕೃತವರಿಯದ ಸಾಮಾನ್ಯರು ತಂತಮ್ಮ ಭಾಷೆಗಳಲ್ಲೇ ಈ 'ಸ್ತೋತ್ರಗಳನ್ನು ರಚನೆ ಮಾಡಿದ್ದಾರೆ.

ಉತ್ತರ ಭಾರತದಲ್ಲಿ ಶ್ರೀ ಕೃಷ್ಣನು ಅವತರಿಸಿದಾಗ ಪ್ರಚುರದಲ್ಲಿದದ್ದು ವ್ರಜಭಾಷೆ ಇದು ಗೋವಳರ ನುಡಿ, ಇಂತಹ ಹಲವಾರು ಉಪಭಾಷೆಗಳಲ್ಲಿ ಜಾನಪದ ಸ್ತೋತ್ರಗಳು ರಚಿತವಾಗಿವೆ. ಗೋಸ್ವಾಮಿ ತುಳಸೀದಾಸರು ತಮ್ಮ ಅಮೂಲ್ಯ ಕೃತಿಯಾದ ರಾಮಚರಿತಮಾನಸದಲ್ಲಿ ಶ್ರೀ ರಾಮಭಕ್ತನಾದ ಹನುಮಂತನನ್ನು 2 ಸಾಲಿನ 40 ಪದ್ಯಗಳಲ್ಲಿ ವಿಶೇಷವಾಗಿ ಪ್ರಾರ್ಥಿಸಿದ್ದು. ಚಾಲೀಸಾ ಸ್ತೋತ್ರಗಳ ಪರಂಪರೆಗೆ ನಾಂದಿಯಾಯಿತು.

ಗೋಸ್ವಾಮಿ ತುಳಸೀದಾಸರು, ಹನುಮಂತನ ದಿವ್ಯ ಮಹಿಮೆಯನ್ನು 40 ಪದ್ಯಗಳ ಸ್ತೋತ್ರವೊಂದನ್ನು ರಚಿಸಿದ್ದಾರೆ. ಈ ಹನುಮಾನ್ ಚಾಲೀಸಾದ ಪಾರಾಯಣದಿಂದ ಸಕಲ ಕಷ್ಟಗಳೂ ನಿವಾರಣೆ ಆಗುವುದು ಎಂದರು ಹಲವು ಮೂಲಗಳಿಂದ ತಿಳಿದು ಬರುತ್ತದೆ. ಇದೇ ರೀತಿ ನಂತರ ಹಲವಾರು ಚಾಲೀಸಾ ಸ್ತೋತ್ರಗಳು ವ್ರಜ ಭಾಷೆಯಲ್ಲಿ ಬಳಕೆಗೆ ಬಂದಿವೆ.

ಈ ಸಂಗ್ರಹದಲ್ಲಿ ಶ್ರೀ ಗಣೇಶ, ದುರ್ಗಾ, ಶಿವ, ಸರಸ್ವತಿ, ಶನೈಶ್ಚರ, ರಾಮ, ಲಕ್ಷ್ಮೀ, ಗಂಗಾ, ಗಾಯಿತ್ರಿ ಮತ್ತು ಹನುಮಾನ್ ಚಾಲೀಸಾಗಳಿಗೂ ಮೂಲ ಮತ್ತು ಕನ್ನಡ ಪದ್ಯಗಳೊಡನೆ ನೀಡಿದ್ದೇವೆ. ಈ ಸ್ತೋತ್ರಗಳ ಪಾರಾಯಣದಿಂದ ದೈವಕೃಪೆಯಾಗಲೆಂದು ಹಾರೈಸಿ ಪುಸ್ತಕವನ್ನು ಆಸ್ತಿಕರ ಅವಗಾಹನೆಗಾಗಿ ತಮ್ಮ ಮುಂದೆ ಇಟ್ಟಿದ್ದೇನೆ. ಎಂದಿನಂತೆ ತಾವು ಈ ಪುಸ್ತಕವನ್ನು ಆದರಿಸುವಿರೆಂದು ನಿರೀಕ್ಷಿಸಿತ್ತೇವೆ.

ಈ ಪುಸ್ತಕದ ವಿಷಯಗಳನ್ನು ಸಂಗ್ರಹಿಸಲು ಪ್ರೇರಣೆಯಿತ್ತು, ಪ್ರಕಾಶನದ ಸಂಪೂರ್ಣ ಜವಾಬ್ದಾರಿವಹಿಸಿಕೊಂಡು, ಅಚ್ಚುಕಟ್ಟಾಗಿ ಸಕಾಲಕ್ಕೆ ಹೊರತಂದ '' ಮಹೇಶ್ ಪ್ರಕಾಶನ'' ದವರಿಗೆ ನನ್ನ ಅಭಿನಂದನೆಗಳು.

View full details