Dr. Aparna Shreevatsa
ಕ್ಯಾನ್ಸರ್ಗೆ ಆನ್ಸರ್
ಕ್ಯಾನ್ಸರ್ಗೆ ಆನ್ಸರ್
Publisher - ಸಾವಣ್ಣ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
- Free Shipping Above ₹250
- Cash on Delivery (COD) Available
Pages - 172
Type - Paperback
ಭಾರತವು ಬೃಹತ್ ಆರ್ಥಿಕ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆಯಾದರೂ ಭಾರತೀಯರ ಆರೋಗ್ಯ ಕ್ರಮೇಣ ಕ್ಷೀಣಿಸುತ್ತಿದೆ. ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಭಾರತೀಯರಲ್ಲಿ ಹೆಚ್ಚುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹಾಗೂ ಕ್ಯಾನ್ಸರ್‌ನಿಂದ ಅಸುನೀಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಮುಂಬರುವ ದಶಕದಲ್ಲಿ ಭಾರತವು “ವಿಶ್ವದ ಕ್ಯಾನ್ಸರ್ ರಾಜಧಾನಿ" ಆಗಲಿದೆ ಎಂಬ ನಿರೀಕ್ಷೆಯಿದೆ. ಕ್ಯಾನ್ಸರ್ ರೋಗ ನಿರ್ಣಯವು ರೋಗಿಗಳಲ್ಲಿ ಮತ್ತು ಅವರ ಕುಟುಂಬಗಳಲ್ಲಿ ಸಾವಿನ ಭಯವನ್ನು ಉಂಟು ಮಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ಚಿಕಿತ್ಸೆಗಳಿಂದ ಹಲವಾರು ಆರಂಭಿಕ ಹಂತದ ಕ್ಯಾನ್ಸರ್‌ಗಳನ್ನು ಸಂಪೂರ್ಣವಾಗಿ ಗುಣ ಪಡಿಸಬಹುದಾಗಿದೆ. ಅಷ್ಟೇ ಅಲ್ಲದೆ ಕೊನೆಯ ಹಂತಗಳ ಕ್ಯಾನ್ಸರ್ ಅನ್ನು ಸಹ ಇಮ್ಯೂನೊಥೆರಪಿ, ಟಾರ್ಗೆಟ್ ಥೆರಪಿಯಂತಹ ನೂತನ ಚಿಕಿತ್ಸೆಗಳಿಂದ ನಿಯಂತ್ರಿಸಬಹುದಾಗಿದೆ. ಇದರಿಂದ ರೋಗಿಗಳ ಜೀವಿತಾವಽಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ರೋಗಿಯು ಲವಲವಿಕೆಯಿಂದ ಜೀವನ ನಡೆಸುವಂತೆ ಮಾಡಬಹುದಾಗಿದೆ. ಹಾಗೆಯೇ ಆರೋಗ್ಯವಂತರಲ್ಲಿ ಕೆಲವು ಸರಳ ಪರೀಕ್ಷೆಗಳ ಮೂಲಕ ಕ್ಯಾನ್ಸರ್ ಅನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಮಾಡಬಹುದು. ಮತ್ತೆ ಕೆಲವು ಕ್ಯಾನ್ಸರ್‌ಗಳನ್ನು ಲಸಿಕೆಗಳಿಂದ ಹಾಗೂ ಜೀವನ ಶೈಲಿಯ ಬದಲಾವಣೆಗಳಿಂದ ತಡೆಗಟ್ಟಲೂಬಹುದು.
ಪ್ರಾದೇಶಿಕ ಭಾಷೆಗಳಲ್ಲಿ ಕ್ಯಾನ್ಸರ್ ಬಗೆಗಿನ, ತಜ್ಞವೈದ್ಯರು ಬರೆದ ವೈಜ್ಞಾನಿಕ ಮಾಹಿತಿ ಅಪರೂಪ. ಈ ಪುಸ್ತಕ “ಕ್ಯಾನ್ಸರ್‌ಗೆ ಆನ್ಸರ್" ಕ್ಯಾನ್ಸರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರಳ ಕನ್ನಡದಲ್ಲಿ ಸುಲಲಿತವಾಗಿ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಕ್ಯಾನ್ಸರ್ ಪತ್ತೆಯಾದ ರೋಗಿಗೆ ಮತ್ತು ಕುಟುಂಬ ವರ್ಗದವರಿಗೆ ಕ್ಯಾನ್ಸರ್ ಚಿಕಿತ್ಸೆಗಳ ಬಗ್ಗೆ ಮಾಹಿತಿ ಹಾಗೂ ಚೇತರಿಕೆಗೆ ಸರಳ ಉಪಾಯಗಳನ್ನು ನೀಡಿ ಮಾರ್ಗದರ್ಶಿಯಾಗಿದೆ. ಅಂತೆಯೇ ಆರೋಗ್ಯವಂತರಿಗೆ, ಕ್ಯಾನ್ಸರ್ ಉಂಟಾಗಲು ಕಾರಣಗಳು, ಕ್ಯಾನ್ಸರ್ ತಡೆಗಟ್ಟುವುದಕ್ಕೆ ಜೀವನಶೈಲಿಯ ಮಾರ್ಪಾಡುಗಳು ಹಾಗೂ ವಾರ್ಷಿಕ ಆರೋಗ್ಯ ತಪಾಸಣೆಯಲ್ಲಿ ಕ್ಯಾನ್ಸರ್ ಪತ್ತೆ ಮಾಡಲು ಪರೀಕ್ಷೆಗಳ ಬಗ್ಗೆ ಶಿಕ್ಷಣ ನೀಡುವುದರಲ್ಲಿ ಸಫಲವಾಗಿದೆ.

ಡಾ. ದೇವಿ ಪ್ರಸಾದ್ ಶೆಟ್ಟಿ
ಅಧ್ಯಕ್ಷರು ಮತ್ತು ಸಂಸ್ಥಾಪಕರು
ನಾರಾಯಣ ಹೆಲ್ತ್, ಬೆಂಗಳೂರು
ಪದ್ಮಶ್ರೀ ಮತ್ತು ಪದ್ಮಭೂಷಣ ಪುರಸ್ಕೃತರು
Share
Subscribe to our emails
Subscribe to our mailing list for insider news, product launches, and more.