Purnesh
ಕ್ಯಾಡ್ಬರೀಸ್ ನ ಕ್ಯಾಬ್-ಡೈರೀಸ್
ಕ್ಯಾಡ್ಬರೀಸ್ ನ ಕ್ಯಾಬ್-ಡೈರೀಸ್
Publisher -
- Free Shipping Above ₹350
- Cash on Delivery (COD) Available*
Pages - 81
Type - Paperback
Couldn't load pickup availability
ಓಹ್ ನೀವು!! ನಮಸ್ಕಾರ!! ಎಲ್ಲಿ ಈ ಪುಸ್ತಕ ನೋಡಿನೂ ಸುಮ್ಮನೆ ಹಂಗೆ ಹೋಗ್ಬಿಡ್ತಿರೋ ಅಂಡ್ಕೊಂಡಿದ್ದೆ. ಸದ್ಯ ಕೊನೆಗೂ ಪುಸ್ತಕ ಕೈಗೆತ್ತಿಕೊಂಡು ಬೆನ್ನುಡಿ ಓಡ್ತಿದ್ದೀರ. ನಾನೇ ಧನ್ಯ!
ಇಷ್ಟು ದಿನ ಬೇರೆ ಎಲ್ಲರ ಪುಸ್ತಕ ಓದ್ಕೊಂಡು, ಅವರ ಪಾತ್ರಗಳ ಜೊತೆ ಮಾತಾಡ್ಕೊಂಡು ಚೆನ್ನಾಗಿದ್ದೆ. ಯಾರನ್ನಾದರು ಮೊದಲ ಬಾರಿಗೆ ಓದುತ್ತಿದ್ದೇನೆ ಅಂದ್ರೆ ಆ ಪುಸ್ತಕ ಕೊಳ್ಳುವ ಮುನ್ನ ಬೆನ್ನುಡಿಯನ್ನ ಓದಿ, ಅದು ನನ್ನನ್ನ excite ಮಾಡಿದರೆ ಆ ಪುಸ್ತಕ ಕೊಳ್ಳುತಿದ್ದೆ. ಆದರೆ ಈಗ ನನ್ನದೇ ಕತೆ ಪುಸ್ತಕ ಆಗ್ತಿದೆ, ಅದಕ್ಕೂ excite ಆಗುವಂತ ಬೆನ್ನುಡಿಯನ್ನ ಬರೆಯಬೇಕು ಅಂತ ಗೊತ್ತಾದಾಗ ಏನು ಮಾಡಬೇಕು ಅಂತ ಆಲೋಚನೆಗೆ ಬಿದ್ದುಬಿಟ್ಟೆ. ಯಾಕೆ ಅಂದ್ರೆ ಪುಸ್ತಕದ ಕೊನೆಪುಟದಲ್ಲಿ ಬರುವ ಈ ಬೆನ್ನುಡಿಯೇ ಓದುಗರು ಓದುವ ಮೊದಲ ಪುಟ
ಅನ್ನೋದು ನನಗೆ ಅರಿವಾಗಿತ್ತು. ಈ ಪುಸ್ತಕ ನೀವು ಕೊಂಡುಕೊಳ್ಳೋಕೆ ನಿಮಗೆ ನಾನೊಂದು ಕಾರಣ ಕೊಡ್ತೀನಿ ಇರಿ.
''ಕಾಡುತ್ತೆ, ಆದರೆ ಹಿಂಸೆ ಕೊಡಲ್ಲ, ಕೊಲ್ಲುತ್ತೆ, ಆದರೆ ಉಸಿರು ನಿಲ್ಲಲ್ಲ, ಕಣ್ಣೆದುರೆ ಇರುವಂತಾಗುತ್ತೆ, ಆದರೆ ನೆನಪಿಗೆ ಬರಲ್ಲ, ಅದು ಗೆದ್ದಾಗ ಅಳು ಬರುತ್ತೆ, ಕೆಲವೊಮ್ಮೆ ಆನಂದದಿಂದ, ಕೆಲವೊಮ್ಮೆ ದುಃಖದಿಂದ.
ಅದು ಏನು?"
ಮೇಲಿನ ಒಗಟಿಗೆ ಉತ್ತರ ಈ ಕತೆಯಲ್ಲಿದೆ. ಅಂದ್ರೆ, ನೇರವಾಗಿ ಇಲ್ಲದಿದ್ದರೂ ಕತೆಯನ್ನ ಪೂರ್ತಿ ಓದಿ, ಮತ್ತೆ ಈ ಒಗಟನ್ನು ಓದಿದರೆ ಉತ್ತರ ತಂತಾನೆ ಬಂದರೂ ಬರಬಹುದು. ಈ ಸುಲಭದ ಒಗಟನ್ನ ಬಿಡಿಸುವುದಕ್ಕಾದರೂ ಈ ಪುಸ್ತಕವನ್ನ ಕೊಂಡು ಓದಬೇಕು ನೀವು. ಹಾ!! ನಂಗೊತ್ತು ನೀವು ಬುದ್ದಿವಂತರು ಅಂತ. ನಿಮಗೆ ಈಗಾಗಲೆ ಉತ್ತರ ಗೊತ್ತಿದ್ದರೆ, ಆ ಉತ್ತರ ಸರಿನಾ ಅಂತ ಪರಿಶೀಲನೆಗಾದ್ರು ಈ ಕತೆಯನ್ನ ಓದಬೇಕು ನೀವು. ಪುಸ್ತಕ ಕೊಂಡು ಓದ್ದೀರ ಅಂತ ಭಾವಿಸ್ತೀನಿ. ನಿಮಗೆ ಒಳ್ಳೆಯದಾಗ್ಲಿ!!
Share

Subscribe to our emails
Subscribe to our mailing list for insider news, product launches, and more.