Skip to product information
1 of 2

Dr. Lakshmana Kounte

ಬುದ್ಧಂ ಶರಣಂ ಗಚ್ಛಾಮಿ

ಬುದ್ಧಂ ಶರಣಂ ಗಚ್ಛಾಮಿ

Publisher - ಹರಿವು ಬುಕ್ಸ್

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 295

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

'ಬುದ್ಧಂ ಶರಣಂ ಗಚ್ಛಾಮಿ'

ವಿಶ್ವದ ದಾರ್ಶನಿಕರಲ್ಲಿ ಗೌತಮಬುದ್ಧನ ಶಿಷ್ಯರಷ್ಟು ಧರ್ಮಪ್ರಿಯರು, ಬೌದ್ಧಧರ್ಮ ನಿಯಮಗಳನ್ನು ಅನುಸರಿಸಿದವರು ದೊರೆಯುವುದು ಅಪರೂಪ. ಬುದ್ಧನ ಪ್ರಭಾವವೇ ಅಷ್ಟು ಪರಿಣಾಮಕಾರಿಯಾದುದು. ಗೌತಮನ ಪ್ರಭಾವ ವಲಯಕ್ಕೆ ಒಳಗಾದವರು ಅವರಿಂದ ಮತ್ತೆ ದೂರ ಸರಿಯುವುದು ಅಸಾಧ್ಯ ಎನ್ನುವುದಕ್ಕೆ ಹಲವು ಉದಾಹರಣೆಗಳು ದೊರೆಯುತ್ತವೆ. ಬೌದ್ಧಧರ್ಮ ವಾಸ್ತವವಾಗಿ ಕರುಣಾಮಯಿಯಾದದ್ದು, ಮೌಡ್ಯವನ್ನು ನಿರಾಕರಿಸಿ ವೈಜ್ಞಾನಿಕವಾಗಿ ಚಿಂತನೆಗೆ ಹಚ್ಚುವಂತೆ ಮಾಡುವಂಥದ್ದು. ಮನುಜರೊಳಗಿನ ಆಮಿಷಗಳನ್ನು ಮೋಸ ವಂಚನೆ ಕಳ್ಳತನ ಕೊಲೆಯಂತಹ ಹೇಯಗುಣಗಳನ್ನು ವಿಸರ್ಜಿಸಿ ಮಾನವೀಯ ಮಾರ್ಗದಲ್ಲಿ ನಡೆಯುವಂತಹ ತಿಳುವಳಿಕೆಯನ್ನು ಆ ಧರ್ಮ ಹೇಳಿದೆ. ಅಂಗುಲಿಮಾಲಾನಂತಹ ಕೊಲೆಗಡುಕನನ್ನು ಪುಣ್ಯಾಕ್ಷನನ್ನಾಗಿ ಮಾಡಿದ. ವೇಶ್ಯ ಆಮ್ರಪಾಲಿಯನ್ನು ಭಿಕ್ಕುಣಿಯಾಗುವಂತೆ ಪರಿವರ್ತನೆಯ ದಿಶೆ ತೋರಿದ ಧರ್ಮ ಗೌತಮಬುದ್ಧನದು. ದೊರೆಗಳಾದ ಬಿಂಬಿಸಾರ, ಪ್ರಸೇನಜಿತರಂಥವರಲ್ಲಿನ ದೋಷಗಳನ್ನು ಕಳೆದು ಅವರಲ್ಲಿಯೂ ಮಾನವೀಯ ಅನುಕಂಪವನ್ನು ಬುದ್ಧ ಬೀರಿದ್ದು ಬಹುದೊಡ್ಡ ಸಂಗತಿಯೇ ಆಗಿದೆ. ಬುದ್ಧಧರ್ಮದಡಿಯಲ್ಲಿ ನಡೆಯುವ ಭಿಕ್ಕುಸಂಘಕ್ಕೆ ಎಳೆಸಿ ಬಂದವರು ಕೇವಲ ಸಾಮಾನ್ಯ ವರ್ಗದ ಜನರಲ್ಲ; ದೊರೆಗಳಂಥವರು ರಾಜ್ಯ ಮೊದಲಾದ ಸರ್ವಗಳನ್ನು ತೊರೆದು ಬಹಳ ದೂರದ ದೇಶದಿಂದ ಅವನನ್ನು ಹುಡುಕಿಕೊಂಡು ಬಂದವರಿದ್ದಾರೆ. ಗಾಂಧಾರ ದೊರೆ ಪುಕ್ಕುಸಾತಿ, ರೋರುವ ರಾಜ್ಯದ ಅರಸ ತಿಷ್ಯ ಮೊದಲಾದವರನ್ನು ಇಲ್ಲಿ ಹೆಸರಿಸಬಹುದು.


View full details

Talk about your brand

Share information about your brand with your customers. Describe a product, make announcements, or welcome customers to your store.