Deepa Heeregutti
Publisher - ಸಾವಣ್ಣ ಪ್ರಕಾಶನ
Regular price
Rs. 160.00
Regular price
Rs. 160.00
Sale price
Rs. 160.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಐಡಿಯಾಗಳು ಜಗತ್ತನ್ನು ಆಳುತ್ತವೆ ಎಂಬುದನ್ನು ಸಾಬೀತುಪಡಿಸಿದ ಕಂಪನಿಗಳು ಬೆಳೆದುಬಂದ ದಾರಿಯ ಅಪರೂಪದ ಕಥೆಗಳಿವು. ತಮ್ಮ ಉತ್ಕೃಷ್ಟತೆಯಿಂದಲೇ ಗೆದ್ದ, ತಂತ್ರಜ್ಞಾನದ ದಿಕ್ಕನ್ನೇ ಬದಲಾಯಿಸಿದ, ಬಡತನದ ಹಿನ್ನೆಲೆಯಿದ್ದರೂ ತಮ್ಮ ಉದ್ಯಮಶೀಲತೆಯಿಂದ ವಿಶ್ವದರ್ಜೆಯ ಸ್ಥಾನಮಾನ ಗಳಿಸಿದ, ಜನರ ಕಾಲೆಳೆಯುವಿಕೆಯನ್ನೇ ಸ್ಫೂರ್ತಿಯಾಗಿಸಿಕೊಂಡು ಮೇಲೇರಿ ತಮ್ಮದೇ ಆದ ಬ್ಯಾಂಡ್ ನಿರ್ಮಿಸಿಕೊಂಡ ವಿಭಿನ್ನ ವಿಶಿಷ್ಟ ಕಂಪನಿಗಳಿವು.
ಈ ಕಂಪನಿಗಳು ತಲುಪಿದ ಎತ್ತರ ವರ್ಷ ವರ್ಷಗಳ ಪರಿಶ್ರಮದ ಫಲ. ನಿಧಾನವಾಗಿ ಆದರೆ ದೃಢವಾಗಿ ಮೇಲೇರಿದ ಸಾಧನೆ ಇವುಗಳದ್ದು. ಆದರೆ ಆಲದಮರದಂತೆ ವಿಶಾಲವಾಗಿರುವ ಸಾಧನೆಯ ಹಿಂದೆ ಕಣ್ಣೀರಿದೆ, ಹಸಿವಿನ ಸಂಕಟವಿದೆ, ಸೋಲಿನ ಛಾಯೆಯಿದೆ, ಭವಿಷ್ಯದ ಆತಂಕವಿದೆ, ಕತ್ತಿಯಲುಗಿನಂತಹ ಸಮಾಜದ ವ್ಯಂಗ್ಯವಿದೆ, ಅನಿರೀಕ್ಷಿತ ಏರಿಳಿತಗಳಿಂದಕೂಡಿದ ಸವಾಲಿನ ಬದುಕಿದೆ.
ಇಂತಹ ಹಿನ್ನಡೆಗಳ ಮಧ್ಯೆಯೂ ತಮ್ಮ ಕನಸುಗಳನ್ನು ನಂಬಿ ಮುನ್ನಡೆದು ಇಂತಹ ಅದ್ಭುತಗಳನ್ನು ಸಾಧ್ಯವಾಗಿಸಿದ ಸಾಧಕರ ಸಾಧನೆಯ ಹಾದಿಯನ್ನು ಸಮಾಧಾನದಿಂದ ಗಮನಿಸಿದರೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ. ಏಕೆಂದರೆ ಈ ಸಾಧಕರು ಯಾರೂ ಗೆದ್ದದ್ದು ಅದೃಷ್ಟದಿಂದಲ್ಲ! ಬದಲಾಗಿ ತಾವು ಯಶಸ್ವಿಯಾಗಬೇಕೆಂದು ತೀರ್ಮಾನಿಸಿದ್ದರಿಂದ ಸಾಧಾರಣ ವ್ಯಕ್ತಿಗಳೂ ಸಹ ಛಲ, ದೃಢ ಮನಸ್ಸು, ಸತತ ಪರಿಶ್ರಮ, ಸದಾ ಹೊಸದನ್ನು ಕಲಿಯುವ ಹಂಬಲ, ದಣಿವರಿಯದ ಸ್ಪೂರ್ತಿಯಿಂದ ಕಣ್ಣಕ್ಷಿತಿಜವನ್ನು ಮೀರಿ ಮುನ್ನಡೆಯಬಹುದು ಎಂಬುದಕ್ಕೆ ಉದಾಹರಣೆ ಈ ಸಾಧಕರು. ನಮ್ಮ ಗುರಿ ಏನೇ ಇರಲಿ, ಪರೀಕ್ಷೆಯಲ್ಲಿ ಒಳ್ಳೆ ಅಂಕ ಗಳಿಸುವುದಿರಲಿ, ಒಳ್ಳೆಯ ಉದ್ಯೋಗ ಪಡೆಯುವುದಿರಲಿ ಅಥವಾ ಸ್ವಂತ ಉದ್ಯಮದಲ್ಲಿ ಮುನ್ನಡೆಯುವುದಿರಲಿ, ಇಂತಹ ಸ್ಫೂರ್ತಿಯ ಕಥೆಗಳು ಸದಾ ಮಾರ್ಗದರ್ಶಕವಾಗಿರುತ್ತವೆ. ನಡುಗಡಲಲ್ಲೂ ಕೈ ಸೋಲದಂತೆ ಕಾಪಾಡುವ ಭರವಸೆಯ ಹುಲ್ಲಿನೆಳೆಯಂತೆ...
ಸುಡು ಮರಳುಗಾಡಲ್ಲಿ ಸಿಕ್ಕ ಜೀವದಾಯಿನಿ ಓಯಸಿಸ್‌ನಂತೆ...