Skip to product information
1 of 1

M. S. Murthy

ಬೌಲ್

ಬೌಲ್

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
'ಬೌಲ್' ಒಂದು ಅನನ್ಯ ಕೃತಿಯಾಗಿದ್ದು ಅದು ಪ್ರಾಚೀನ ವ್ಯಕ್ತಿತ್ವಗಳನ್ನು ಅಧುನಿಕ ಸಂವೇದನೆಯೊಂದಿಗೆ ಸುಂದರವಾಗಿ ಮರುಸೃಷ್ಟಿಸುತ್ತದೆ. ಬುದ್ಧ, ಆನಂದ, ಜಗತ್ತಿನ ಸಕಲ ತಾಯಂದಿರು ಇವರೆಲ್ಲ ಸಮಕಾಲೀನ ಪ್ರಪಂಚದ ಸಾಮಾನ್ಯ ಮನುಷ್ಯರೊಂದಿಗೆ ಪರಸ್ಪರ ಸಂಬಂಧ ಹೊಂದಿದ್ದಾರೆ, ಈ ಸಾಮಾನ್ಯ ಮನುಷ್ಯರು ಅಸಾಮಾನ್ಯ ಅನ್ವೇಷಕರಾಗಿ ವರ್ತಮಾನದ ಬುದ್ಧರಾಗುವವರು ಹಾಗೂ ಆ ಕಾಲಾತೀತ ಚೇತನದ ಅನಂತವಾದ ಮತ್ತು ಶಾಶ್ವತವಾದ ನವೀಕರಣದ ಮೂಲಕ ಮಾತ್ರವೇ ಈ ಪರಭಕ್ಷಕ ಪ್ರಪಂಚವು ತನ್ನ ಮೋಕ್ಷವನ್ನು ಹುಡುಕಿಕೊಳ್ಳಬಹುದು. ಇದರ ಅಗಾಧವಾದ ಪರಿಣಾಮ ಯಾವುದೆಂದರೆ ಅನಂತಕಾಲದ ಇರುವಿಕ, ಕಾದಂಬರಿಯಲ್ಲಿ ಬರುವ ಮುದುಕ - ಆತ ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ನೇರ ಪೂರಕಸಾಕ್ಷಿಯಾಗಿದ್ದಾನೆ. ಮೂಲತಃ ಬೌಲ್ ಕೃಷಿಯ ಪ್ರಧಾನ ಕೇಂದ್ರಬಿಂದುವೇ ವರ್ತಮಾನವನ್ನು ಅಭಿನಂದಿಸುತ್ತಲೇ ಭವಿಷ್ಯದೊಳಗೆ ಕೊಂಡೊಯ್ಯುವ ಈ ಗೌರವಾನ್ವಿತ ವಯೋವೃದ್ಧ 'ಅಜ್ಜ' ಬೌಲ್ ಒಂದು ಪ್ರಧಾನಧಾರೆಯ ಮಹತ್ವದ ಕೃತಿಯಾಗಿದ್ದು, ಇದು ವ್ಯರ್ಥವಾದ, ನಿರರ್ಥಕವಾದ, ಅಮೂರ್ತ ತಾತ್ವಿಕ ನಿರೂಪಣೆಯನ್ನೇನೂ ಹೊಂದಿಲ್ಲ. ಈ ಗುಣಗಳನ್ನು ಗ್ರಹಿಸಲಾಗದೆ ತಪ್ಪಿದ್ದಲ್ಲಿ ಇದರ ನಿರೂಪಣಾ ರಚನೆಯನ್ನು ಸಂಪೂರ್ಣ ತಪ್ಪಾಗಿ ಅರ್ಥೈಸಿಕೊಳ್ಳುವುದು ಮತ್ತು ಅದರ ವಿಷಯಾಧಾರಿತ ಆದ್ಯತೆಗಳನ್ನು ತಪ್ಪಾಗಿ ಗ್ರಹಿಸುವುದು ಎಂದರ್ಥ,

ಇದೊಂದು ಮೂಲಭೂತವಾದ ತಾತ್ವಿಕ ವಿಚಾರಗಳನ್ನು ಅಪ್ಪಿಕೊಳ್ಳುವ ಸುಂದರ ಕಲಾಕೃತಿಯಾಗಿದೆ, ತತ್ವಶಾಸ್ತ್ರವು ತನ್ನ ಸತ್ವ, ಆಹಾರ ಮತ್ತು ಪೋಷಣಿಯನ್ನು ಕಂಡುಕೊಳ್ಳುವುದು ಸರ್ವರ ಬದುಕಿನ ಸಾಮಾನ್ಯತೆಯಲ್ಲಿ ಬೌಲ್, ಈ ಅಂಶವನ್ನೇ ಸಂಪೂರ್ಣ ಅನುಕರಣೀಯ ರೀತಿಯಲ್ಲಿ ಉದಾಹರಿಸಿ ನಮಗೆ ತೋರಿಸುತ್ತದೆ.

ಈ ಕೃತಿಯ ಮೂಲಕ ಎಂ.ಎಸ್. ಮೂರ್ತಿಯವರು ಅತ್ಯಂತ ಸಮರ್ಥ ರೀತಿಯಲ್ಲಿ ನಮ್ಮ ಪ್ರಜ್ಞೆಯನ್ನು ಅರಸುವ ಕೆಲಸ ಮಾಡಿದ್ದಾರೆ.

(ಮುನ್ನುಯಿಂದ)
View full details