Skip to product information
1 of 2

J Krishnamurthi | Kannada : Dr Mahabaleshwara Rao

ಬೋಧನೆಗೊಂದು ಪ್ರವೇಶಿಕೆ

ಬೋಧನೆಗೊಂದು ಪ್ರವೇಶಿಕೆ

Publisher - ವಸಂತ ಪ್ರಕಾಶನ

Regular price Rs. 290.00
Regular price Rs. 290.00 Sale price Rs. 290.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 264

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕೃಷ್ಣಮೂರ್ತಿಯವರ ಅತ್ಯುತ್ತಮ ಪರಿಚಯ ಸ್ವತಃ ಕೃಷ್ಣಮೂರ್ತಿಯವರೇ; ಪುಸ್ತಕಗಳು, ದೃಶ್ಯಮುದ್ರಿಕೆ ಹಾಗೂ ಧ್ವನಿಮುದ್ರಿಕೆಗಳೇ ಅವರ ಪರಿಚಯ ಹೊರತು ಅವರು ವ್ಯಾಖ್ಯಾನಕಾರರಲ್ಲ, ಟೀಕಾಕಾರರಲ್ಲ. ಈ ದೃಷ್ಟಿಯಿಂದಲೇ ಈ ಸಂಕಲನವನ್ನು ಪ್ರಸ್ತುತಪಡಿಸಲಾಗುತ್ತಿದೆ. ಶೀರ್ಷಿಕೆಯೇ ಸೂಚಿಸುವ ಹಾಗೆ ಈ ಪುಸ್ತಕವನ್ನು ಪ್ರಮುಖವಾಗಿ ಅವರ ಬೋಧನೆಗಳ ಪರಿಚಯವಿಲ್ಲದವರಿಗಾಗಿ ಸಿದ್ಧಪಡಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನೂ ದಿನನಿತ್ಯ ಎದುರಿಸುವ ಸಮಸ್ಯೆಗಳು ಮತ್ತು ಅವುಗಳ ಬಗೆಗೆ ಕೃಷ್ಣಮೂರ್ತಿಯವರ ಸ್ಟೋಪಜ್ಞ ದೃಷ್ಟಿ, ಜೀವನ ಮತ್ತು ಪಾವಿತ್ರ್ಯವನ್ನು ಕುರಿತಾದ ಅವರ ಕಾಲಾತೀತ ದರ್ಶನ ಈ ಪುಸ್ತಕದಲ್ಲಿನ ಲೇಖನಗಳ ಆಯ್ಕೆಗೆ ಬುನಾದಿ.

1948 ರಿಂದ 1983ರ ವರೆಗೆ ಕೃಷ್ಣಮೂರ್ತಿ ತಮ್ಮ ಸಂದೇಶವನ್ನು ಪಸರಿಸಲು ಬಳಸಿದ ಸಾರ್ವಜನಿಕ ಭಾಷಣಗಳು, ಪ್ರಶೋತ್ತರಗಳು, ಸಂದರ್ಶನಗಳು, ದೈನಂದಿನಿಗಳು, ಉಕ್ತಲೇಖನಗಳು, ಪತ್ರಗಳು, ಸಂಭಾಷಣೆಗಳು ಮತ್ತು ವಾಗ್ವಾದಗಳು - ಇವೇ ಮುಂತಾದ ವೈವಿಧ್ಯಮಯ ಪ್ರಕಾರಗಳನ್ನು ಈ ಸಂಕಲನ ಒಳಗೊಂಡಿದೆ. ಲೋಕ ಶಿಕ್ಷಕರಾಗಿ ಕೃಷ್ಣಮೂರ್ತಿಯವರ ಅಸಾಧಾರಣ ಜೀವನ ಹಾಗೂ ದರ್ಶನದ ವಿಹಂಗಮ ನೋಟವನ್ನು ಪ್ರವೇಶಿಕೆ ಕಟ್ಟಿಕೊಡುತ್ತದೆ.

ಜೆ. ಕೃಷ್ಣಮೂರ್ತಿ [1895-1986] ಸಾರ್ವಕಾಲಿಕ ಜಾಗತಿಕ ಶ್ರೇಷ್ಠ ತತ್ವಜ್ಞಾನಿ ಹಾಗೂ ಧಾರ್ಮಿಕ ಬೋಧಕ ಎಂದು ಮಾನ್ಯರು. ಆರು ದಶಕಗಳಿಗೂ ಹೆಚ್ಚುಕಾಲ ಅವರು ಜಗತ್ತಿನಾದ್ಯಂತ ಸಂಚರಿಸಿ ಓರ್ವ ಗೆಳೆಯನಂತೆ, ಗುರುವಿನ ಹಾಗಲ್ಲ, ಭಾಷಣಗಳನ್ನು ಮಾಡಿದ್ದಾರೆ. ಸಂವಾದಗಳನ್ನು ನಡೆಸಿದ್ದಾರೆ. ಅವರ ಬೋಧನೆಗಳು ಗ್ರಂಥಜ್ಞಾನ ಹಾಗೂ ಸಿದ್ಧಾಂತಗಳನ್ನು ಆಧರಿಸಿಲ್ಲ. ಆದುದರಿಂದಲೇ ಸದ್ಯದ ಜಾಗತಿಕ ಬಿಕ್ಕಟ್ಟು ಹಾಗೂ ಮಾನವನ ಇರವಿನ ಚಿರಂತನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರ ಜತೆ ಅವು ನೇರವಾಗಿ ಸಂವಹನ ಸಾಧಿಸುತ್ತವೆ.

View full details

Talk about your brand

Share information about your brand with your customers. Describe a product, make announcements, or welcome customers to your store.