Dr. Karigowda Beechanahalli
Publisher -
Regular price
Rs. 80.00
Regular price
Rs. 80.00
Sale price
Rs. 80.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೂ ಕನ್ನಡದ ಹೆಸರಾಂತ ಕತೆಗಾರರೂ ಆದ ಡಾ. ಕರೀಗೌಡ ಬೀಚನಹಳ್ಳಿ ಅವರು ಕನ್ನಡ ನಾಡಿನ ಹಿರಿಯ ಹಾಗೂ ನವೋದಯದ ಲೇಖಕರಾದ ಬಿ.ಎಂ. ಶ್ರೀಕಂಠಯ್ಯನವರ ಜೀವನ, ಸಾಧನೆ ಹಾಗೂ ಅವರ ಸಾಹಿತ್ಯವನ್ನು ಕುರಿತು ಈ ಕೃತಿಯಲ್ಲಿ ಸಮಗ್ರವಾಗಿ ಅವಲೋಕಿಸಿ ಸಮರ್ಥವಾಗಿ ವಿಶ್ಲೇಷಣೆ ಮಾಡಿದ್ದಾರೆ. ಶ್ರೀಯವರ ಸ್ವತಂತ್ರ ಕವನಗಳ ಮತ್ತು ಅನುವಾದಿತ ಕವನಗಳ ವಸ್ತು, ಉದ್ದೇಶ, ಭಾಷಾಶೈಲಿ ಕುರಿತಂತೆ ಬರೆದಿರುವ ಕರೀಗೌಡ ಬೀಚನಹಳ್ಳಿ ಅವರ ಈ ಬರವಣಿಗೆ ತುಂಬಾ ಆಕರ್ಷಕವಾಗಿದೆ. ಇಲ್ಲಿ ಶ್ರೀಯವರ ನಾಟಕಗಳ ಬಗ್ಗೆಯೂ ವಿವರವಾಗಿ, ವಸ್ತುನಿಷ್ಠವಾಗಿ ವಿವೇಚಿಸಿದ್ದಾರೆ. ಶ್ರೀ ಅವರು ಕನ್ನಡ ಕಟ್ಟುವುದಕ್ಕೆ ಸಂಬಂಧಿಸಿದಂತೆ ಚಿಂತನೆ ನಡೆಸಿದ ವಿಚಾರಗಳನ್ನು ತಾತ್ವಿಕವಾಗಿ ಹಾಗೂ ಆನ್ವಯಿಕವಾಗಿ ಇಲ್ಲಿ ಕರೀಗೌಡರು ಪರಿಶೀಲಿಸಿ ಚರ್ಚಿಸಿರುವುದು ಗಮನಾರ್ಹವಾಗಿದೆ.
ಶ್ರೀಯವರು ಕನ್ನಡ ನಾಡು, ನುಡಿ, ಸಂಸ್ಕೃತಿಗೆ ನೀಡಿದ ಕಾಣಿಕೆಗಳನ್ನು ಕುರಿತು ಬೀಚನಹಳ್ಳಿ ಅವರು ಆಪ್ತವಾಗಿ ವ್ಯಾಖ್ಯಾನಿಸಿದ್ದಾರೆ. ಶ್ರೀ ಅವರು ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಕನ್ನಡ ಛಂದಸ್ಸಿನ ಬಗ್ಗೆ ಬರೆದಂತಹ ಬರಹಗಳನ್ನು ಕುರಿತು ಇಲ್ಲಿ ವಿವರಿಸಲಾಗಿದೆ. ಒಟ್ಟಾರೆ ಬಿಎಂಶ್ರೀ ಅವರನ್ನು ಕುರಿತಾದ ಈ ಕೃತಿ ತುಂಬಾ ಮೌಲಿಕ ಹಾಗೂ ಪರಿಣಾಮಕಾರಿ ಯಾಗಿರುವುದು ಪ್ರಶಂಸನೀಯವಾಗಿದೆ. ಇಂತಹ ಉಪಾದೇಯವಾದ ಕಾರ್ಯವನ್ನು ಮಾಡಿಕೊಟ್ಟ ಡಾ. ಕರೀಗೌಡ ಬೀಚನಹಳ್ಳಿ ಅವರನ್ನು ಮನಸಾರೆ ಅಭಿನಂದಿಸುತ್ತೇನೆ.
← ಪ್ರೊ. ಹಿ.ಚಿ. ಬೋರಲಿಂಗಯ್ಯ