C. V. Jayanna
101 ಬಿಡಿಸಿದ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳ ಕೈಪಿಡಿ
101 ಬಿಡಿಸಿದ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳ ಕೈಪಿಡಿ
Publisher - ಸಪ್ನ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages -
Type -
ನಿಮಗಿದು ತಿಳಿದಿರಲಿ.....
ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳಡಿಯಲ್ಲಿ ಸಮೂಹ 'ಎ' ಮತ್ತು 'ಬಿ' ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗುತ್ತಿದ್ದು, ಅಭ್ಯರ್ಥಿಯು ಭಾರತೀಯ ನಾಗರೀಕನಾಗಿದ್ದು, ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. 2011ರಿಂದ ಪರೀಕ್ಷಾ ಕ್ರಮ ಮತ್ತು ಪಠ್ಯವಿಷಯವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಪ್ರತೀ ಪತ್ರಿಕೆಯಲ್ಲಿ 100 ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ ಎರಡು ಅಂಕಗಳು ಅಂದರೆ ಒಂದು ಪ್ರಶ್ನೆ ಪತ್ರಿಕೆಗೆ 200 ಅಂಕಗಳನ್ನು ನಿಗದಿಪಡಿಸಿದೆ. ಸಮಯ 2 ಗಂಟೆ ಇರುತ್ತದೆ. ಎರಡೂ ಪತ್ರಿಕೆಗಳಿಂದ ಒಟ್ಟು 400 ಅಂಶಗಳಿದ್ದು ಇಲ್ಲಿ ಉತ್ತೀರ್ಣತೆ ಎಂಬುದಿಲ್ಲ. ಹೆಚ್ಚು ಅಂಕಗಳನ್ನು ಪಡೆದವರು 1:20 ರ ಅನುಪಾತದಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದುತ್ತಾರೆ. ಇದಾದ ನಂತರ ಮೂರನೇ ಹಂತವಾಗಿ ವ್ಯಕ್ತಿತ್ವ ಪರೀಕ್ಷೆ ಇರುತ್ತದೆ. ಮುಖ್ಯಪರೀಕ್ಷೆಯಲ್ಲಿ ಪಡೆದ ಅಂಕಗಳಿಗನುಗುಣವಾಗಿ 1:3 ರ ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ವ್ಯಕ್ತಿತ್ವ ಪರೀಕ್ಷೆಯು 200 ಅಂಕಗಳನ್ನು ಹೊಂದಿದ್ದು ಅಂತಿಮವಾಗಿ ಆಯ್ಕೆಯು ಮುಖ್ಯಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಒಟ್ಟಿಗೆ ಸೇರಿಸಿ ಅರ್ಹತೆ ಮತ್ತು ಮೀಸಲಾತಿಗೆ ಅನುಗುಣವಾಗಿ ನಿಗದಿತ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯು ಮುಖ್ಯ ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಪರೀಕ್ಷೆಯೇ ಹೊರತು ಈ ಅಂಕಗಳನ್ನು ಅಂತಿಮ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
ಪ್ರಸ್ತುತ ಕೈಪಿಡಿಯು ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಥಮ ಪತ್ರಿಕೆಯಲ್ಲಿ 20 ಮಾದರಿ ಪ್ರಶ್ನೆಪತ್ರಿಕೆಗಳನ್ನು ಮತ್ತು ದ್ವಿತೀಯ ಪತ್ರಿಕೆಯಲ್ಲಿ 10 ಮಾದರಿ ಪ್ರಶ್ನೆಪತ್ರಿಕೆಗಳನ್ನು ಹಾಗೂ 2012ರ ಎರಡು ಬಿಡಿಸಿದ ಪ್ರಶ್ನೆ ಪತ್ರಿಕೆಗಳನ್ನು ಸೇರಿಸಲಾಗಿದೆ. ಎರಡೂ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮವನ್ನು ಈ ಕೈಪಿಡಿಯ ಮೊದಲ ಪುಟದಲ್ಲಿ ಪ್ರಕಟಿಸಿದೆ. ಮಾದರಿ ಪ್ರಶ್ನೆಪತ್ರಿಕೆಗಳಲ್ಲಿ ಪ್ರಶ್ನೆಗಳು ಈಗಾಗಲೇ ಕೆ.ಎ.ಎಸ್. ಹಾಗೂ ಐ.ಎ.ಎಸ್. ಪರೀಕ್ಷೆಗಳಿಗೆ ಕೇಳಿದಂತಹ ಪ್ರಶ್ನೆಗಳನ್ನೇ ಸಂಯೋಜಿಸಲಾಗಿದೆ. ಕೆಲವು ಪ್ರಶ್ನೆಗಳು ಪುನರಾವರ್ತಿತವಾಗಲೂಬಹುದು ಆದ್ದರಿಂದ ಅಭ್ಯರ್ಥಿಗಳು ಗೊಂದಲಕ್ಕೊಳಗಾಗದೆ ಹೆಚ್ಚು ಅಧ್ಯಯನ ಮಾಡುವುದು. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನಕ್ಕಾಗಿ ಪ್ರಕಟವಾಗಿರುವ ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಎರಡು ಕೃತಿಗಳು (ಪತ್ರಿಕೆ 1 ಮತ್ತು ಪತ್ರಿಕೆ 2) ಲಭ್ಯವಿದ್ದು ಇವುಗಳ ಪ್ರಯೋಜನವನ್ನು ಪಡೆಯಬಹುದಾಗಿದೆ.
ಸಿ.ವಿ. ಜಯಣ್ಣ
Share
Subscribe to our emails
Subscribe to our mailing list for insider news, product launches, and more.