Asha Raghu
ಭೈರಪ್ಪನವರೆಡೆಗೆ ಭಾವತಂತು
ಭೈರಪ್ಪನವರೆಡೆಗೆ ಭಾವತಂತು
Publisher - Upasana Books
- Free Shipping Above ₹350
- Cash on Delivery (COD) Available*
Pages - 120
Type - Paperback
Couldn't load pickup availability
ತಾತ್ವಿಕ ಭಿನ್ನಾಭಿಪ್ರಾಯಗಳು ವೈಯಕ್ತಿಕ ವಿರೋಧವಾಗಬಾರದೆಂಬ ವಿವೇಕ ಮುಖ್ಯ ಎಂದು ನಾನು ನಂಬಿದ್ದೇನೆ. ಈ ಹಿನ್ನೆಲೆಯಲ್ಲಿ ಭೈರಪ್ಪನವರು ಕಾದಂಬರಿ ಪ್ರಕಾರದಲ್ಲಿ ಜನಪ್ರಿಯತೆ ಮತ್ತು ಗಂಭೀರತೆಗಳನ್ನು ಬೆಸೆದ ಬಗೆಯನ್ನು ಸಾಹಿತ್ಯ ವಿವೇಕದಿಂದ ಗೌರವಿಸುತ್ತೇನೆ. ಅವರ ಸಾಹಿತ್ಯ ಸ್ಮರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.
-ಡಾ.ಬರಗೂರು ರಾಮಚಂದ್ರಪ್ಪ
ತಪಸ್ವಿಯೊಬ್ಬ ಸಕಲ ಲೌಕಿಕ ಸುಖ ಸಂತೋಷಗಳನ್ನೂ ತ್ಯಜಿಸಿ ಕಗ್ಗಾಡಿನ ಕಟ್ಟೇಕಾಂತದಲ್ಲಿ ಕಠೋರ ತಪಸ್ಸಿನಲ್ಲಿ ನಿರತನಾದಂತೆ, ತಮ್ಮ ಪಾಡಿಗೆ ತಾವು ನಿರಂತರ ಸಾಹಿತ್ಯ ರಚನೆಯಲ್ಲಿ ತೊಡಗಿ, ಮಹತ್ವದ ಸಿದ್ದಿ, ಪ್ರಸಿದ್ಧಿ ಗಳಿಸಿದ 'ಸಾಹಿತ್ಯ ತಪಸ್ವಿ' ಎಸ್.ಎಲ್. ಭೈರಪ್ಪನವರು ಎಂದರೆ ಅತಿಷಯೋಕ್ತಿಯಲ್ಲ. ಇಂತಹ ಕನ್ನಡದ ಕಣ್ಮಣಿಗೆ ಕನ್ನಡ ಸಾರಸ್ವತ ಲೋಕದ ಪರವಾಗಿ ಹೃನ್ಮನದ ನಮನ.
-ಡಾ.ಬಿ.ಆರ್.ಲಕ್ಷ್ಮಣರಾವ್
ಭೈರಪ್ಪನವರು ರಚಿಸಿರುವ ಇಪ್ಪತ್ತೈದಕ್ಕೂ ಹೆಚ್ಚು ಕಾದಂಬರಿಗಳು ಭಿನ್ನ ವಿಷಯಗಳನ್ನೊಳಗೊಂಡಿರುವ ನೈಜ ಘಟನೆಗಳನ್ನಾಧರಿಸಿರುವ ಮೇರು ಸಾಹಿತ್ಯ ಕೃತಿಗಳು, ಮುಂದಿನ ಶತಮಾನಕ್ಕೂ ಸಾಹಿತ್ಯದ ರಸದೌತಣವನ್ನು ಸಾಹಿತ್ಯಾಸಕ್ತರಿಗೆ ನೀಡುತ್ತವೆ ಎಂಬ ತೃಪ್ತಿ ಇದೆ.
-ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ
ಭೈರಪ್ಪನವರ ಸಾಹಿತ್ಯಯಾತ್ರೆ ಅವರ ಜೀವನದ ಅತಿ ಹೆಚ್ಚು ಅವಧಿಯನ್ನು ಪಡೆದುಕೊಂಡಿದ್ದಕ್ಕೋ ಏನೋ ಅತ್ಯಂತ ಸಾಂದ್ರ ಸಂಪುಟವೇ ಆಗಿದೆ. ಬಡತನ, ಕಷ್ಟಕಾರ್ಪಣ್ಯ, ಜೀವನದ ಘಾತಗಳನ್ನು ಎದುರಿಸಿ ಬೆಳೆದ ವ್ಯಕ್ತಿತ್ವ ಅವರದು.
-ಶ್ರೀಮತಿ ಜಯಶ್ರೀ ದೇಶಪಾಂಡೆ
ಭೈರಪ್ಪನವರೇ ಗೌರವಿಸುವ, ಆದರಿಸುವ ಎಂ.ಹಿರಿಯಣ್ಣ, ಆನಂದ ಕುಮಾರಸ್ವಾಮಿ, ಕುಮಾರವ್ಯಾಸರಂಥವರು ಭಾರತೀಯ ಪ್ರಜ್ಞೆಯಲ್ಲಿ ಚಿರಸ್ಥಾಯಿಯಾಗಿರುವವರೆಗೂ ಭೈರಪ್ಪನವರ ಸಾಹಿತ್ಯವೂ ಅಜರಾಮರವಾಗಿರುತ್ತದೆ ಎನ್ನುವುದೂ ಸತ್ಯ.
- ಶ್ರೀ ಶಶಾಂಕ ಪರಾಶರ
ನಾನಾ ಪಾತ್ರಗಳ ಜಗತ್ತಿನಲ್ಲಿ ಬದುಕುತ್ತಾ, ಬಹಳ ತೀಕ್ಷ್ಣಾವಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಾ, ಅಧ್ಯಯನ ಮಾಡುತ್ತಾ, ಪ್ರವಾಸ ಕೈಗೊಳ್ಳುತ್ತಾ ಸದಾ ಚಟುವಟಿಕೆಯಿಂದ ಇರುತ್ತಿದ್ದವರು, ವಯೋಸಹಜವಾಗಿಯೇ ಆದರೂ, ಅನಾರೋಗ್ಯಕ್ಕೆ ಒಳಗಾದರೆ... ನೆನಪಿನ ಸಾರ್ಮಥ್ಯ ಕಳೆದುಕೊಂಡು ತಡವರಿಸಿದರೆ... ಹೀಗೆ ಕಡೆಗೆ ಮಿಸುಕಾಡದಂತೆ ಚಲನೆ ಕಳೆದುಕೊಂಡು ಅಂಗಾತ ಮಲಗಿಬಿಟ್ಟರೆ... ಅದನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ!
-ಶ್ರೀಮತಿ ಆಶಾ ರಘು
Share

Subscribe to our emails
Subscribe to our mailing list for insider news, product launches, and more.