Skip to product information
1 of 2

Dr. Na. Mogasale

ಭೂಮಿಗೀತ

ಭೂಮಿಗೀತ

Publisher - ಸಾಹಿತ್ಯ ಭಂಡಾರ

Regular price Rs. 450.00
Regular price Rs. 450.00 Sale price Rs. 450.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 328

Type - Paperback

Gift Wrap
Gift Wrap Rs. 15.00

ಭೂ ಮಸೂದೆ ಬರುವುದಕ್ಕಿಂತ ಮೊದಲು ಇದ್ದ ಧನಿ-ಒಕ್ಕಲುಗಳ ಸಂಬಂಧ, ಉಳುವವನು ನೆಲದ ಒಡೆಯನಾದ ನಂತರದ ಒಡೆಯ ಒಕ್ಕಲುಗಳ ಎರಡನೇ ತಲೆಮಾರಿನ ನಡವಳಿಕೆ, ಜಾಗತೀಕರಣದ ನಂತರದ ದಿನಗಳಲ್ಲಿ ಹಿಂದಿನ ಒಡೆಯ- ಒಕ್ಕಲುಗಳ ಮೂರನೇ ತಲೆಮಾರು ಬೇಸಾಯದಿಂದ ವಿಮುಖವಾದ ಸಾಮಾಜಿಕ ಸ್ಥಿತ್ಯಂತರವನ್ನು 'ಭೂಮಿಗೀತ' ಕಾದಂಬರಿಯಲ್ಲಿ ಮೊಗಸಾಲೆಯವರು ಚಿತ್ರಿಸಿದ್ದಾರೆ. ದಲಿತರ ಬದುಕನ್ನು 'ಚೋಮನದುಡಿ', 'ಕುಡಿಯರ ಕೂಸು' ಕಾದಂಬರಿಗಳಲ್ಲಿ ಚಿತ್ರಿಸಿದ ಶಿವರಾಮ ಕಾರಂತರ ಮಾದರಿಯ ಮುಂದುವರಿಕೆಯಾಗಿ ನಾ. ಮೊಗಸಾಲೆಯವರು ತಮ್ಮ ಕೆಲವು ಕಾದಂಬರಿಗಳಲ್ಲಿ ಕರಾವಳಿ ಸಮಾಜದ ಭೂಮಾಲಿಕ ಬಂಟರು ಮತ್ತು ಒಕ್ಕಲುಗಳಾದ ಇತರೆ ತಳ ಸಮುದಾಯದವರ ಬದುಕನ್ನು ಕಲಾತ್ಮಕವಾಗಿ ನಿರೂಪಿಸಿರುವ ಪ್ರಯತ್ನಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಕಳೆದ ಐದಾರು ದಶಕಗಳ ಹಿಂದಿನ ಸಾಮಾಜಿಕ ನಡವಳಿಕೆಗಳನ್ನು ವಾಸ್ತವ ದೃಷ್ಟಿಯಿಂದ ಹಿಡಿದಿಟ್ಟಿರುವ ಮೊಗಸಾಲೆಯವರ 'ಭೂಮಿಗೀತ' ಕೆಲವು ದಶಕಗಳ ನಂತರ ಚಾರಿತ್ರಿಕ ಮಹತ್ವದ ಕೃತಿಯಾಗಿ ಉಳಿದುಕೊಳ್ಳುವ ಸತ್ವವನ್ನು ಪಡೆದಿದೆ.

-ಲಕ್ಷ್ಮಣ ಕೊಡಸೆ

View full details