Dr. Santhosha Hanagalla
ಭಾಷೆ- ಬದುಕು
ಭಾಷೆ- ಬದುಕು
Publisher - ವೀರಲೋಕ ಬುಕ್ಸ್
- Free Shipping Above ₹350
- Cash on Delivery (COD) Available*
Pages - 520
Type - Paperback
Couldn't load pickup availability
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕ್ರಿಯಾಶೀಲ ಕಾರ್ಯದರ್ಶಿಗಳಾಗಿರುವ ಡಾ. ಸಂತೋಷ ಹಾನಗಲ್ಲರ ಪ್ರತಿಭೆಗೆ ಹಲವು ಆಯಾಮಗಳಿವೆ. ರಾಣಿ ಚನ್ನಮ್ಮನ ಕಿತ್ತೂರು ಕೋಟೆಯೂ ಸೇರಿದಂತೆ, ಕರ್ನಾಟಕದ ಪ್ರಾಚೀನ ಕೋಟೆಗಳ ಬಗ್ಗೆ ತಲಸ್ಪರ್ಶಿ ಅಧ್ಯಯನ ನಡೆಸಿರುವ ಅವರು, ಭಾಷೆಯ ಕುರಿತೂ ಪುಟ್ಟ, ಆದರೆ ಮಹತ್ವದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅನೇಕ ಕೃತಿಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಕನ್ನಡ ಪರ ವ್ಯಕ್ತಿಗಳ ಮತ್ತು ಸಂಘಟನೆಗಳ ನಿರಂತರ ಸಂಪರ್ಕದಲ್ಲಿರುವ ಅವರು ಇದೀಗ ಭಾಷೆಯ ಬಗ್ಗೆ ನಮ್ಮ ಅರಿವಿನ ವಲಯಗಳನ್ನು ವಿಸ್ತರಿಸಬಲ್ಲ 'ಭಾಷೆ- ಬದುಕು' ಸಂಪುಟವನ್ನು ಒದುಗರ ಕೈಗೆ ಕೊಡುತ್ತಿದ್ದಾರೆ.
ಜಾಗತೀಕರಣದ ಪರಿಣಾಮದಿಂದ ಮಾರುಕಟ್ಟೆ ಕೇಂದ್ರಿತವಾಗಿ ಬೆಳೆಯುತ್ತಿರುವ ಇಂದಿನ ಸಮಾಜದಲ್ಲಿ ಅನೇಕ ಭಾಷೆಗಳು ಗಂಭೀರವಾದ ಬಿಕ್ಕಟ್ಟುಗಳನ್ನು ಇದೆರಿಸುತ್ತವೆ. ಬಹುಭಾಷೆಗಳನ್ನು ಹೊಂದಿರುವ ಭಾರತದಲ್ಲಿ ಅನೇಕ ಭಾಷೆಗಳು ಪತನಮುಖಿಯಾಗಿವೆ. ಕಳೆದ 50 ವರ್ಷಗಳಲ್ಲಿ 250ಕ್ಕೂ ಹೆಚ್ಚು ಭಾಷೆಗಳು ನಶಿಸಿ ಹೋಗಿವೆ. ಇಂಥ ಸಂದರ್ಭದಲ್ಲಿ ಈ ಭಾಷೆಗಳನ್ನು ಉಳಿಸಿಕೊಳ್ಳಲು ನಾವು ಅನುಸರಿಸಬೇಕಾದ ಭಾಷಾ ನೀತಿ ಹೇಗಿರಬೇಕು? ನಾವು ಇದುವರೆಗೆ ಒಪ್ಪಿಕೊಂಡು ಬಂದಿರುವ ತ್ರಿಭಾಷಾ ಸೂತ್ರದ ಸಾಧಕ ಬಾಧಕಗಳೇನು ಮತ್ತು ಕರ್ನಾಟಕಕ್ಕೆ ದ್ವಿಭಾಷಾ ಸೂತ್ರ ಯಾಕೆ ಬೇಕು? ಎಂಬಿತ್ಯಾದಿ ವಿಷಯಗಳನ್ನು ವಿಭಿನ್ನ ಚೌಕಟ್ಟಿನಲ್ಲಿ ಚರ್ಚಿಸುವ 50 ಅಮೂಲ್ಯ ಲೇಖನಗಳು ಈ ಸಂಪುಟದಲ್ಲಿವೆ.
ಭಾಷಾ ನೀತಿಗಳ ಕುರಿತಾಗಿ ಇಂಥದ್ದೊಂದು ಪುಸ್ತಕ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಕಟವಾಗುತ್ತಿದೆ.
-ಡಾ. ಪುರುಷೋತ್ತಮ ಬಿಳಿಮಲೆ
ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ
Share

Subscribe to our emails
Subscribe to our mailing list for insider news, product launches, and more.