Skip to product information
1 of 2

Shwetha Bhide

ಭರವಸೆಯೇ ಬದುಕು

ಭರವಸೆಯೇ ಬದುಕು

Publisher - ಸಾವಣ್ಣ ಪ್ರಕಾಶನ

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 160

Type - Paperback

Gift Wrap
Gift Wrap Rs. 15.00

ಪುಸ್ತಕಗಳೆಂದರೆ ಆಪ್ತ ಸ್ನೇಹಿತನಂತೆ. ಏಕೆಂದರೆ ಅವು ಮನುಷ್ಯರು ನೀಡಲಾಗದ ಆಪ್ತತೆಯನ್ನು, ಸಮಾಧಾನವನ್ನು, ಕಲ್ಪನೆಗಳನ್ನು, ಅಷ್ಟೇ ಅಲ್ಲ, ಬದುಕನ್ನೂ ಕಟ್ಟಿ ಕೊಡುತ್ತವೆ. ವೇಗದಿಂದ ಸಾಗುತ್ತಿರುವ ಜಗತ್ತಿನಲ್ಲಿ ನಾವು ಕ್ಷಣದಿಂದ ಕ್ಷಣಕ್ಕೆ ಮಾನಸಿಕವಾಗಿ ಕುಗ್ಗುತ್ತಿದ್ದೇವೆ. “ಕಷ್ಟಗಳೆಲ್ಲವೂ ನಮ್ಮ ವಿಳಾಸಕ್ಕೇ ಬರುತ್ತಿವೆ” ಎಂದು ನೋಯುತ್ತಿದ್ದೇವೆ. ಹಿಂದಿನಂತೆ ನಮ್ಮನ್ನು ಸಂತೈಸುವ ಹಿರಿಯರ, ಗೆಳೆಯರ ಕೊರತೆ ನಮಗಿದೆ. ಗುರು-ಹಿರಿಯರ ಮಾರ್ಗದರ್ಶನ ನೀಡುವ ಸಾಂತ್ವನಗಳನ್ನೂ ಮೀರಿ ಎಲ್ಲೋ ಕಾಣುವ, ಕೇಳುವ ವಿಷಯಗಳು ನಮ್ಮ ಬದುಕಿನ ಹದ ತಪ್ಪಿಸುವಲ್ಲಿ, ಗೊಂದಲದಲ್ಲಿ ಬೀಳಿಸುವಲ್ಲಿ ಯಶಸ್ವಿಯಾಗುತ್ತಿವೆ.

ಈ ಪುಸ್ತಕದಲ್ಲಿರುವುದು ಮ್ಯಾಜಿಕ್ ಅಲ್ಲದಿರಬಹುದು. ಆದರೆ ನೀವು ಯೋಚಿಸುವ ಸರಳ ವಿಷಯಗಳು, ನಿಮ್ಮನ್ನು ನೀವು ಕೇಳಿಕೊಳ್ಳುವ ಪ್ರಶ್ನೆಗಳು ಇಲ್ಲಿವೆ. ಅದರ ಉತ್ತರಗಳು ನೀವು ನಿರೀಕ್ಷಿಸದ್ದಿಕ್ಕಿಂತ ಭಿನ್ನವಾಗಿ, ಆದರೆ ಸಮರ್ಥವಾಗಿವೆ. ಈ ಓದು ನಿಮ್ಮ ನೆಗೆಟಿವಿಟಿಯನ್ನು ಕಡಿಮೆ ಮಾಡುವುದರಲ್ಲಿ ಸಂದೇಹವಿಲ್ಲ. ಪುಟ್ಟ ಬದುಕನ್ನು ಮತ್ತಷ್ಟು ಸುಂದರವಾಗಿ ಚಿತ್ರಿಸುವಲ್ಲಿ, ಸುಲಭಗೊಳಿಸುವಲ್ಲಿ ಈ ಪುಸ್ತಕ ನಿಮಗೆ ಸಹಾಯ ಮಾಡುತ್ತದೆ. ಒಂದೇ ಗುಕ್ಕಿಗೆ ಓದಿ ಮುಗಿಸಬಹುದಾದರೂ ಆಗೀಗ ಮತ್ತೆ ಮತ್ತೆ ಓದಿಸಿಕೊಳ್ಳುವ ಚೇತೋಹಾರಿ ಬರಹಗಳು ನಿಮ್ಮ ಬದುಕಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಲಿ ಎನ್ನುವ ಸದಾಶಯ ನಮ್ಮದು.

“ನಂಬಿಕೆಯಿರಲಿ” ಈ ಬದುಕು ಭರಪೂರ ಭರವಸೆಗಳ ಕಣಜ. ನಿಮ್ಮ ಬದುಕಿನ ತುಂಬಾ ಅಂಥದೇ ಭರವಸೆಯ ಬೆಳಕು ಪಸರಿಸಲಿ.

- ಶ್ವೇತಾ ಭಿಡೆ

View full details