Dr. Geetha Krishnamurthy
Publisher -
- Free Shipping
- Cash on Delivery (COD) Available
Couldn't load pickup availability
ಭಾರತ ಒ೦ದು ಸಾರ್ವಭೌಮ ಪ್ರಜಾಸತ್ತಾತ್ಮಕ ರಾಷ್ಟ್ರ, ಭಾರತದ ಸಂವಿಧಾನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಿರುವುದಷ್ಟೇ ಅಲ್ಲದೆ ಮೂಲಭೂತ ಕರ್ತವ್ಯಗಳನ್ನೂ ವಿಧಿಸುತ್ತದೆ. ಮೂಲಭೂತ ಹಕ್ಕುಗಳು ಹಾಗೂ ಮೂಲಭೂತ ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾಗರಿಕರಿಗೆ ತಮಗಿರುವ ಹಕ್ಕುಗಳ ಅರಿವಿರುವಂತೆಯೇ ತಾವು ನಿರ್ವಹಿಸಲು ಬದ್ಧರಾಗಿರುವ ಕರ್ತವ್ಯಗಳ ಅರಿವೂ ಇರಬೇಕಾದ್ದು ಅವಶ್ಯಕ.
ಆದರ ಕೆಲವು ಸಂದರ್ಭಗಳಲ್ಲಿ ಸ೦ವಿಧಾನದ ಉಲ್ಲಂಘನೆಯಾಗಿರುವುದು ಅಪರೂಪವಲ್ಲ. ಪದೇ ಪದೇ ನಡೆಯುವ ಉಲ್ಲಂಘನೆಗಳು ದೇಶದ ಹಿತಕ್ಕೆ ಹಾನಿಕಾರಕವಾಗುತ್ತವೆ.
ಈ ಕಿರುಕೃತಿಯಲ್ಲಿ ಭಾರತದ ಸಂವಿಧಾನ, ನಾಗರಿಕತ್ವ, ಮೂಲಭೂತ ಹಕ್ಕುಗಳು, ಹಾಗೆಯೇ ನಮ್ಮ ಸಂವಿಧಾನದ ವೈಶಿಷ್ಟ್ಯಗಳ ಕುರಿತು ಸಂಕ್ಷಿಪ್ತ ಪರಿಚಯ ನೀಡಲಾಗಿದೆ.
ಇದನ್ನು ರಚಿಸಿರುವ ಡಾ|| ಗೀತಾ ಕೃಷ್ಣಮೂರ್ತಿ ಕರ್ನಾಟಕ ಸರ್ಕಾರದ ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕಾನೂನಿಗೆ ಸಂಬಂಧಿಸಿದ ಲೇಖನಗಳು ಮತ್ತು ಅಂಕಣ ಬರಹಗಳ ಮೂಲಕ ಖ್ಯಾತರಾಗಿದ್ದಾರೆ. 'ಮಹಿಳೆ-ಸಮಾಜ-ಕಾನೂನು', 'ವ್ಯಕ್ತಿ ವಿಕಸನ ಮತ್ತು ಕಾನೂನು' ಮುಂತಾದ ಇವರ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
