Dr. M.S.S Murthy
ಭಾರತ ರತ್ನ ಪ್ರೊ. ಎಂ.ಎಸ್. ಸ್ವಾಮಿನಾಥನ್
ಭಾರತ ರತ್ನ ಪ್ರೊ. ಎಂ.ಎಸ್. ಸ್ವಾಮಿನಾಥನ್
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹400
- Cash on Delivery (COD) Available*
Pages - 158
Type - Paperback
Couldn't load pickup availability
ಭಾರತವನ್ನು ಆಹಾರ ಕೊರತೆಯ ಪರಿಸ್ಥಿತಿಯಿಂದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ ಪರಿವರ್ತಿಸಿದ ಹಸಿರು ಕ್ರಾಂತಿಯಲ್ಲಿ ಎಂ.ಎಸ್.ಸ್ವಾಮಿನಾಥನ್ ಅವರ ಪ್ರಮುಖ ಪಾತ್ರವನ್ನು ಇಲ್ಲಿನ ಪುಟಗಳು ತೆರೆದಿಡುತ್ತವೆ. ಸ್ವಾಮಿನಾಥನ್ ಅವರ ಕೊಡುಗೆಗಳು ಹೆಚ್ಚು ಇಳುವರಿಯ ಗೋಧಿ ಮತ್ತು ಭತ್ತದ ತಳಿಗಳನ್ನು ರೈತರಿಗೆ ಪರಿಚಯಿಸುವುದು ಮಾತ್ರವೇ ಆಗಿರಲಿಲ್ಲ. ಅವರು ಕೃಷಿ ಕ್ಷೇತ್ರದಲ್ಲಿನ ಮುನ್ನಡೆಗಳು, ಪರಿಸರ ಸುಸ್ಥಿರತೆ ಮತ್ತು ಸಾಮಾಜಿಕ ಸಮಾನತೆ ಇವುಗಳ ಆಧಾರದ ಮೇಲೆ ಸುಭದ್ರವಾಗಿ ನಿಂತಿರಬೇಕೆಂಬುದನ್ನು ಅರಿತ ದಾರ್ಶನಿಕರೂ ಆಗಿದ್ದರು. ಸಮಗ್ರ ಹಾಗೂ ಸುಸ್ಥಿರ ಕೃಷಿ ಭವಿಷ್ಯಕ್ಕಾಗಿ ರೈತರ ಸಬಲೀಕರಣ, ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಆಧುನಿಕ ವಿಜ್ಞಾನದೊಂದಿಗೆ ಸಾಂಪ್ರದಾಯಿಕ ಜ್ಞಾನವನ್ನು ಒಂದುಗೂಡಿಸುವುದು ಇವುಗಳು ಅವಶ್ಯಕ ಎಂದು ಅವರು ಅರಿತಿದ್ದರು.
ಮಹತ್ವದ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವುದಲ್ಲದೆ ಅವುಗಳನ್ನು ಮುಂದುವರಿಸಿಕೊಂಡು ಹೋಗುವುದು, ರಾಷ್ಟ್ರೀಯ ಕೃಷಿ ನೀತಿಗಳನ್ನು ರೂಪಿಸುವುದು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಶ್ರಮಿಸುವುದು ಮುಂತಾದ ಕ್ಷೇತ್ರಗಳಲ್ಲಿ ಸ್ವಾಮಿನಾಥನ್ ಅವರ ನಾಯಕತ್ವದ ಪಾತ್ರವನ್ನು ಈ ಜೀವನ ಚರಿತ್ರೆ ತೆರೆದಿಡುತ್ತದೆ. ಇದಲ್ಲದೆ ಅವರ ಮಾನವೀಯತೆ, ನಿಶ್ಚಲ ಆಶಾವಾದ ಹಾಗೂ ಸಮಾಜದ ಬೆನ್ನೆಲುಬಾಗಿರುವ ರೈತರ ಬಗ್ಗೆ ಅಗಾಧ ಗೌರವ ಇವುಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಪ್ರೊ. ಸ್ವಾಮಿನಾಥನ್ ಅವರು ಕರ್ನಾಟಕದ ಅಗ್ರಿಕಲ್ಮರಲ್ ಕಮಿಟಿಯ ಅಧ್ಯಕ್ಷರೂ ಆಗಿದ್ದರು. ಅಂತಹ ಒಬ್ಬ ನಾಯಕನ ಜೀವನ ಕಥನವನ್ನು ಡಾ.ಎಮ್.ಎಸ್.ಎಸ್.ಮೂರ್ತಿಯವರು ಕನ್ನಡದಲ್ಲಿ ಹೊರ ತರುತ್ತಿರುವುದು ನನಗೆ ಬಹಳ ಸಂತೋಷವಾಗಿದೆ.
-ಡಾ. ಸೌಮ್ಯ ಸ್ವಾಮಿನಾಥನ್
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.