V. Narahari
ಭಗವದ್ಗೀತೆ: ಕನ್ನಡ ಕಾವ್ಯ
ಭಗವದ್ಗೀತೆ: ಕನ್ನಡ ಕಾವ್ಯ
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 225.00
Regular price
Rs. 225.00
Sale price
Rs. 225.00
Unit price
/
per
- Free Shipping Above ₹250
- Cash on Delivery (COD) Available
Pages - 204
Type - Paperback
ಶ್ರೀಮದ್ಭಗವದ್ಗೀತೆ ಮತ್ತು ಶ್ರೀವಿಷ್ಣು ಸಹಸ್ರನಾಮಗಳಿಂದ ಮಹಾಭಾರತವು ಮಹತ್ವವನ್ನು ಪಡೆದಿದೆಯೆಂದು ದಾರ್ಶನಿಕರು ಅಭಿಪ್ರಾಯಪಡುತ್ತಾರೆ. ಭಗವದ್ಗೀತೆಯಂತೂ ಭಾರತೀಯ ಅಧ್ಯಾತ್ಮದ ಸಾರಸಂಗ್ರಹ; ಭಗವಾನ್ ಶ್ರೀಕೃಷ್ಣನೇ ಸ್ವಯಂ ಲೋಕಕ್ಕೆ ನೀಡಿದ ತತ್ವಜ್ಞಾನಸುಧೆ. ಅದನ್ನು ಈಗ ಕನ್ನಡದ ಭಾಮಿನಿ ಷಟ್ಪದಿಗಳ ತಂಬಿಗೆಯಲ್ಲಿ ತುಂಬಿಸಿದ ಕೆಲಸ ಇಲ್ಲಿ ನಡೆದಿದೆ. ಮೂಲದ ಹದಿನೆಂಟು ಅಧ್ಯಾಯಗಳ ಏಳುನೂರು ಶ್ಲೋಕಗಳು ಇಲ್ಲಿ ೫೧೩ ಭಾಮಿನಿ ಷಟ್ಟದಿಗಳಾಗಿವೆ. ಸಂಸ್ಕೃತದ 'ಗೀತೆ' ಇಲ್ಲಿ ಹೃದ್ಯವಾದ ಪದ್ಯವಾಗಿದೆ. ಸರಳ ಸುಂದರ ಶೈಲಿಯಿಂದಾಗಿ ಗೀತೋಪನಿಷತ್ತಿನ ಅನುಭವಧಾರೆ ಜನಸಾಮಾನ್ಯರಿಗೂ ನಿಲುಕುವಂತಾಗಿದೆ.
ಭಗವದ್ಗೀತೆಯ ಹಿನ್ನೆಲೆ, ಧ್ಯಾನಪದ್ಯಗಳು, ಪುರುಷಸೂಕ್ತದ ಅನುವಾದ ಗೀತೆ, ಹದಿನೆಂಟು ಅಧ್ಯಾಯಗಳ ಸಾರಸಂಗ್ರಹ - ಇತ್ಯಾದಿಗಳಿಂದ ಈ ಕೃತಿಯು ಕಾವ್ಯವಾಚನಸುಖವನ್ನೂ, ಪಾರಾಯಣಪುಣ್ಯವನ್ನೂ ಒಂದೇ ಕಡೆ ನೀಡುವಂತಿದೆ. ಇಂತಹ ಮಹಾತಪಸ್ಸನ್ನು ಮಾಡಿದ ಮಹಾಕವಿ ಪ್ರೊ. ವಿ. ನರಹರಿ ಅವರಿಗೆ ಹಾರ್ದಿಕ ಅಭಿನಂದನೆಗಳು.
ಕುರುಕ್ಷೇತ್ರದ ಮಹಾಸಂಗ್ರಾಮ ನಮ್ಮ ಒಳಗೂ, ಹೊರಗೂ ನಡೆಯುತ್ತಲೇ ಇದೆ! ಈ ಮಹಾವಿಪ್ಲವದಲ್ಲಿ ವಿಜಯವನ್ನು ಸಾಧಿಸಬೇಕಾದರೆ ನಾವೆಲ್ಲರೂ ಅರ್ಜುನರಾಗಬೇಕು. ಗೀತಾರ್ಥವನ್ನು ಶ್ರದ್ಧೆಯಿಂದ ಮನಗಂಡು "ಕರಿಷ್ಯೇ ವಚನಂ ತವ" ಎಂಬ ಸಂಕಲ್ಪವನ್ನು ತಾಳಬೇಕು. ಅಂತಹ ಧೀರಸಂಕಲ್ಪಕ್ಕೆ ಈ ಕಾವ್ಯ ನಾಂದಿ ಹಾಡಲಿ ಎಂದು ಹಾರೈಕೆ.
-ಕಬ್ಬಿನಾಲೆ ವಸಂತ ಭಾರದ್ವಾಜ

Share
Subscribe to our emails
Subscribe to our mailing list for insider news, product launches, and more.