Dr. H. S. Sathyanarayana
ಬೆಳುದಿಂಗಳ ನೋಡs...
ಬೆಳುದಿಂಗಳ ನೋಡs...
Publisher -
- Free Shipping Above ₹250
- Cash on Delivery (COD) Available
Pages - 108
Type - Paperback
Couldn't load pickup availability
ಬೇಂದ್ರೆ ಎಂಬ ಹೆಸರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ದೊಡ್ಡ ಬೆರಗು. ಶಬ್ದ, ನಾದ, ಲಯ, ಛಂದ ಎಂಬ ನಾಲ್ಕು ತಂತ್ರ ಚತುರ್ಮುಖತೆಯಿಂದ ಕನ್ನಡ ಕಾವ್ಯವಾಹಿನಿಗೆ ಬೆಲೆಯುಳ್ಳ ಚಿರಕಾವ್ಯವನ್ನು ಕೊಟ್ಟ ಧೀಮಂತ ಕವಿ. ಇವರ ಕಾವ್ಯವನ್ನು ಓದಿ ನಾಡು ತಣಿದಿದೆ. ಕವಿಯ ಕಾವ್ಯ ವ್ಯಕ್ತಿತ್ವದ ಆಯಾಮ ಒಂದು ಮಜಲಾದರೆ, ಆತನ ಸಾಮಾಜಿಕ ವ್ಯಕ್ತಿತ್ವ ಮತ್ತೊಂದು ಮಜಲು. ವಿದ್ವತ್ತಿನ ಗತ್ತು, ಕಾವ್ಯಪ್ರತಿಭೆಯ ಮೇಲರಿಮೆ, ಸಿಟ್ಟು, ಸೆಡವು, ಜಗಳಗಂಟಿತನ, ವಾಗ್ವಿಲಾಸದ ವೈಖರಿ, ಬಹುಶ್ರುತ ಆಸಕ್ತಿ, ಅಪಾರವಾದ ಜ್ಞಾನಾಕಾಂಕ್ಷೆ, ಜಗದೆಲ್ಲ ಚಟುವಟಿಕೆಗಳನ್ನು ಕಾವ್ಯ ಪರಿಪ್ರೇಕ್ಷ್ಯದಲ್ಲಿ ಕಾಣುವ, ಕಾಣಿಸುವ ಬಗೆ, ಮಗು ಸಹಜ ಮುಗ್ಧತೆ ಈ ಎಲ್ಲ ಗುಣಗಳ ಸಮ್ಮಿಲನದ ಗಾರುಡಿಗ ವ್ಯಕ್ತಿತ್ವ ಬೇಂದ್ರೆಯವರದು. ಇವರ ಬಗೆಗೆ ಪ್ರಚಲಿತದಲ್ಲಿರುವ ಕತೆಗಳನ್ನು, ಸಂಗತಿಗಳನ್ನು, ಪ್ರಸಂಗಗಳನ್ನು ಒಂದೆಡೆ ಸಂಗ್ರಹಿಸಿ ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಒದಗಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರಣದಿಂದ ಎಚ್. ಎಸ್. ಸತ್ಯನಾರಾಯಣ ಅವರ 'ಅಂಬಿಕಾತನಯದತ್ತನ ಹಾಡ ಬೆಳುದಿಂಗಳು ನೋಡಾ...' ಎಂಬ ಕೃತಿ ಮಹತ್ವದ್ದು.
ಸತೀಶ ಕುಲಕರ್ಣಿ
ಹಾವೇರಿ
Share


Subscribe to our emails
Subscribe to our mailing list for insider news, product launches, and more.