M. G. Hegde
ಬೆಳಕಿನ ಬೆಳೆ
ಬೆಳಕಿನ ಬೆಳೆ
Publisher - ಮನೋಹರ ಗ್ರಂಥಮಾಲಾ
- Free Shipping Above ₹400
- Cash on Delivery (COD) Available*
Pages - 472
Type - Paperback
Couldn't load pickup availability
ಆಮೂರರ ಕೃತಿ ಪರೀಕ್ಷೆಯ ಶ್ರಮದ ಹಿಂದೆ ಹಲವು ಸಾಹಿತ್ಯಗಳ ಜ್ಞಾನ ಕೆಲಸ ಮಾಡುತ್ತಿರುತ್ತದೆ. ವಿದ್ವತ್ತಿನ ವ್ಯಾಪಕತೆ ಇರದ ಬರಿಯ ಉತ್ಕಟ ರಸಪ್ರಜ್ಞೆಯ ವಿಮರ್ಶೆಗಿಂತ ಈ ರೀತಿಯ ವಿಮರ್ಶೆ ನಮ್ಮ ಕೃತಿಗಳ ಅನನ್ಯತೆಯನ್ನು ಹೆಚ್ಚು ಖಚಿತವಾಗಿ ಬೆಳಕಿಗೆ ತರುತ್ತದೆ.
ಡಿ ಆರ್ ನಾಗರಾಜ
ಇಂಗ್ಲಿಷ್ ಸಾಹಿತ್ಯದ ಅಭ್ಯಾಸದಂತೆಯೇ ಕನ್ನಡ ಸಾಹಿತ್ಯದ ಅಭ್ಯಾಸವೂ ಇಡೀ ಮನಸ್ಸನ್ನು ಸುಶಿಕ್ಷಿತಗೊಳಿಸಬಲ್ಲ ಶಿಸ್ತಾಗಬಹುದೆಂದು ನಮಗೆ ಅನ್ನಿಸುವ ಕನ್ನಡ ಸಾಹಿತ್ಯ ವಿಮರ್ಶಕರು ಅಪರೂಪ. ಇಂಥ ಅಪರೂಪದ ಹಿರಿಯ ವಿಮರ್ಶಕರು ಡಾ. ಆಮೂರರು.
ಯು ಆರ್ ಅನಂತಮೂರ್ತಿ
ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತ ಸಾಹಿತ್ಯಗಳಲ್ಲಿ ಅಗಾಧ ವ್ಯುತ್ಪತ್ತಿ, 'ಸಾಹಿತ್ಯ'ವೆಂಬ ಜ್ಞಾನಶಾಖೆಯನ್ನು ಕುರಿತ ಗಾಢ ಪ್ರೀತಿ ಮತ್ತು ತೀಕ್ಷ್ಯ ವ್ಯಾಖ್ಯಾನ ಪ್ರತಿಭೆ -ಈ ಮೂರೂ ಗುಣಗಳು ಪರಸ್ಪರ ಪೂರಕವಾಗಿ ಡಾ.ಜಿ.ಎಸ್. ಆಮೂರರ ವಿಮರ್ಶೆಯಲ್ಲಿ ಮೇಲೈಸುತ್ತವೆ.
ಸಿ ಎನ್ ರಾಮಚಂದ್ರನ್
ಕೆಡಹುವ ಆವೇಶಕ್ಕಿಂತ ಕಟ್ಟುವ ಸಂಯಮವನ್ನು ಅಮೂರರ ರಚನೆಗಳುದ್ದಕ್ಕೂ ಕಾಣಬಹುದಾಗಿದೆ.
ಎಂ ಎಂ ಕಲಬುರ್ಗಿ
ಡಾ. ಆಮೂರರ ಬರಹಗಳು ಏಕಕಾಲಕ್ಕೆ ಸಾಹಿತ್ಯ ಚರಿತ್ರೆ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಗಳ ಸಮ್ಮೇಳನದಿಂದ ನಿಷ್ಪನ್ನವಾಗುವ ಹೊಸ ಸಂಗತಿಗಳನ್ನು. ಹೊಳಹುಗಳನ್ನು ಒಳನೋಟಗಳನ್ನು ಪ್ರಕಟಿಸುತ್ತವೆ.
ಜಿ ಎಸ್ ಶಿವರುದ್ರಪ್ಪ
ಆಮೂರರು ಭಾರತದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರು.
ಚಂದ್ರಶೇಖರ ಕಂಬಾರ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.