Skip to product information
1 of 2

Praveen Kumar G

ಬಯಲು

ಬಯಲು

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 110

Type - Paperback

Gift Wrap
Gift Wrap Rs. 15.00

“ಅತ್ತೆ ಮಾವ, ನೀವು ನನ್ನನ್ನ ಎಷ್ಟು ಚನ್ನಾಗಿ ನೋಡ್ಕೋತಾ ಇದೀರಿ ಅಂದ್ರೆ ನಂಗೆ ವರ್ಷಾ ವರ್ಷಾ ಒಂದು ಮಗು ಆಗ್ತಾನೇ ಇರ್ಬೇಕು ಅಂತ ಅನ್ಸತ್ತೆ ಕಡೇವರೆಗೂ” ಎನ್ನುತ್ತಾ ಖುಷಿಯಾಗಿದ್ದಳು ಪ್ರಿಯಾ.

-    ಕದ

ಸುಂದರ್ “ಹುಡ್ಗಿ ಏನ್ ಹೇಳ್ತಿದಾಳೆ ಅನ್ನೋದನ್ನ ಗಮನ ಕೊಟ್ಟು ಕೇಳಿಸ್ಕೋಳಿ. ಅವ್ಳು ಹೆಂಗೆ ಚೇಂಜ್ ಆಗ್ತಾಳೋ, ನೀವು ಹಂಗೇ ಚೇಂಜ್ ಆಗಿ ಆಷ್ಟೇ. ಲೈಫು ಈಸಿ ಆಗತ್ತೆ, ಜೀವ ಉಳ್ಯತ್ತ.” ಎಂದು ಇಬ್ಬರನ್ನೂ ನೋಡಿ ನಕ್ಕ.

-    ಬಣ್ಣದ ಚಂದಿರ

“ನಾನು ಒಂದು ಒಳ್ಳೇ ದಿನ ಬರ್ಲಿ ಅಂತ ಕಾಯಾಕತ್ತೀನಿ ಅಶ್ಟೇ.” ಎಂದಳು ರತ್ನ. “ಕಾಯಾದಂದ್ರೆ ಸಾಯಾದವಾ.” ಎಂದು ಜೋರಾಗಿ ನಗಲತ್ತಿತು ದನ.

-    ಗುಡ್ಡದವ್ವ

ಕನಸುಗಳು ಕಾಡುತ್ತಿವೆಐೇ? ಬನ್ನಿ ಕಾಡುವ ಕನಸುಗಳನ್ನು ನಾವು ಅಳಿಸಿ ಹಾಕುತ್ತೇವೆ. ಇನ್ನೊಮ್ಮೆ ಆ ಕನಸುಗಳು ನಿಮಗೆ ಬಿದ್ದರೆ ನಿಮ್ಮ ಹಣ ನಿಮಗೆ ವಾಪಸ್! ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ.

-    ಪದೇ ಪದೇ ಅದೇ ಅದೇ

“ದೇವ್ರು ಕೊಟ್ಟಂಗ ನಾವು ಇರ್ತೀವಿ. ಅವ್ನೇ ನಮೀಗೆ ಹಿಂಗ ಅಂತ ಹಣೇಬರಾ ಬರ್ದಿದ್ರೆ ಯಾರ್ ಏನ್ ಮಾಡಾಕಾಗ್ತತೆ? ಮನುಶುಗ ಮನ್ಸು, ಬುದ್ಧಿ, ನಾಲ್ಗೀ, ಮರ್ಯಾದಿ, ಒಳ್ಳೇತನ ಅನ್ನಾವಷ್ಟೇ ಮುಖ್ಯ.”

-    ಬಂಗಾರ

ಮತ್ತೆ ಆಕಾಶವನ್ನು ನೋಡಲು ಅವನಿಗೆ ಧೈರ್ಯ ಸಾಲಲಿಲ್ಲ. ಎದ್ದು ಚಾಪೆ ಸುತ್ತಿಕೊಂಡು ಕಣ್ಣೊರೆಸಿಕೊಂಡವನು ಮನೆಯೊಳಗೆ ಬಂದ. ಹೆಂಡತಿಯ ಪಕ್ಕದಲ್ಲಿ ಮಲಗಿ ನಿದ್ದೆ ಬಾರದೇ ಸೂರನ್ನೇ ದಿಟ್ಟಿಸಲತ್ತಿದ.

-    ವಧು ಪರೀಕ್ಷೆ

ಅವಳಿಂದ ದೂರಕ್ಕೆ ನಾಲ್ಕು ಹೆಜ್ಜೆ ಮುಂದಿಟ್ಟ ರಾಜಣ್ಣ, ಕೈಚೀಲದೊಳಗಿನಿಂದ ಒಂದು ದೊಡ್ಡ ಟವಲ್ಲಿನಂತಹ ಬಟ್ಟೆಯನ್ನು ತೆಗೆದು, ಹಾಸಿ, ಬಾ ಎಂದು ಸನ್ನೆ ಮಾಡಿ ಕುಳಿತ. ಕವಿತಾ ಚಕ್ಕಳಂಬಕ್ಕಳ ಹಾಕಿ ಅವನೆದುರು ನಗುತ್ತಾ ಕೂತಳು.

-    ಬಯಲು

“ನನ್ನನ್ನ, ನನ್ನ ಪ್ರೊಫೆಶನ್ನ ರೆಸ್ಪೆಕ್ಟ್ ಮಾಡೋನಾಗಿರ್ಬೇಕು, ಒಳ್ಳೇ ಜಾಬ್ ಇರ್ಬೇಕು. ಆಲ್ಸೋ ಲೈಫ್ ಲೀಡ್ ಮಾಡೋಶ್ಟು ಮಿನಿಮಮ್ ಸ್ಯಾಲರಿ ಮ್ಯಾಂಡಟರಿ.” ಎಂದಳು ಮಂದಾರ.

-    ಚಿಗುರು

ಹನುಮಂತಪ್ಪನವರು “ಇಡೀ ದೇಶ್ದಾಗ ದಿನುಕ್ಕ ನೂರಾರ್ ಜನ ಸಾಯ್ತಾರ ಇಂಥಾ ನನ್ ಮಕ್ಳು, ಆದ್ರೆ ಸುದ್ದಿಯಾಗಿದ್ದು ಮಾತ್ರ ನಮ್ಮೂರಿಂದು. ಎಲ್ಲಾ ನನ್ ಹಣೇಬರಾ.” ಎಂದು ಸಿಟ್ಟಾದರು.

-    ಜಾರುಬಂಡೆ

“ಎಲ್ಲಾರೂ ಇಂಥಾವನ್ನ ಮಾಡ್ಬೇಕು ಅಂತಿರ್ತಾರೆ ಮನು, ಬಟ್ ರೈಟ್ ಆಪರ್ಟ್ಯೂನಿಟಿ ಸಿಕ್ಕಿರಲ್ಲ ಅಶ್ಟೇ.” ಎಂದ ಅಮಿತ್.

 -    ಏರಿಳಿ

View full details