Chaya Bhat
ಬಯಲರಸಿ ಹೊರಟವಳು
ಬಯಲರಸಿ ಹೊರಟವಳು
Publisher - ಛಂದ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 128
Type - Paperback
Couldn't load pickup availability
ಛಾಯಾ ಭಟ್ ಅವರ ಕತೆಗಳು ಸಮಕಾಲೀನ ಬರವಣಿಗೆಗಳಲ್ಲಿರುವ ಕೆಲವು ಚಹರೆಗಳನ್ನು ಬಿಟ್ಟು ಕೊಟ್ಟಿವೆ. ಉದಾಹರಣೆಗೆ ಅವರಿಗೆ ಸ್ತ್ರೀವಾದಿ ನೆಲೆಯಲ್ಲಿ ಕಥೆ ಕಟ್ಟುವ ಅವಕಾಶವಿತ್ತಾದರೂ ಅವರು ಅದನ್ನು ಬಿಟ್ಟು ಕೊಟ್ಟು ಕಥೆ ಹೇಳುವ ರೀತಿಯನ್ನು ರೂಢಿಸಿಕೊಂಡಿದ್ದಾರೆ. ಜಾತಿ. ಲಿಂಗ ಮತ್ತು ವರ್ಗಗಳ ನೆಲೆಗಳಲ್ಲಿ ನಿಂತು ಲೋಕ ನೋಡುವುದು ಒಂದು ಬಗೆಯ ಜಾಡನ್ನು ನಿರ್ಮಿಸುತ್ತದೆ. ಅದು ಹಾಗೆ ಆಗಬೇಕೆಂದೇ ಆ ಅಸ್ಥಿತೆಗಳು ಮುನ್ನೆಲೆಗೆ ಬಂದಿದ್ದು. ಆದರೆ ಕ್ರಮೇಣ ಈ ಅಸ್ಥಿತೆಗಳು ಸ್ಥಿರಗೊಳ್ಳುತ್ತಾ ಜಡವಾಗತೊಡಗಿದವು. ಉದ್ದೇಶಪೂರ್ವಕವಾಗಿ ಐಡೆಂಟಿಟಿಗಳನ್ನು ಹೇರಿಕೊಳ್ಳುವುದು ಕತೆಗೆ ತೊಡಕಾಗುತ್ತದೆ. ಹೊಸ ತಲೆಮಾರಿನ ಕೆಲವು ಲೇಖಕ/ಲೇಖಕಿಯರಾದರೂ ತಂತಮ್ಮ ಅಸ್ಮಿತೆಗಳ ಭಾರಗಳನ್ನು ಒತ್ತರಿಸಿ ಏನಾದರೂ ಹೇಳಬೇಕು ಎನ್ನುವ ತಹತಹ ಹೊಂದಿದ್ದಾರೆ. ಛಾಯಾ ಭಟ್ ಅವರಂತಹ ಹೊಸ ತಲೆಮಾರಿನ ಲೇಖಕಿ ಈ ದಿಸೆಯಲ್ಲಿ ಹೆಜ್ಜೆಯಿಟ್ಟಿದ್ದಾರೆ ಎನ್ನಿಸುತ್ತದೆ. ಇದರಿಂದ ಪೊಲಿಟಿಕಲಿ ಕರೆಕ್ಟ್ ಅನ್ನಿಸುವ ಧಾಟಿಯಿಂದಲೂ ಹೊರಬರಲು ಸಾಧ್ಯವಾಗಿದೆ.
-ಡಾ. ಆರ್. ತಾರಿಣಿ ಶುಭದಾಯಿನಿ
Share

Subscribe to our emails
Subscribe to our mailing list for insider news, product launches, and more.