Girimane Shyamarao
Publisher - ಗಿರಿಮನೆ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನಮಸ್ಕಾರ-
ಗ್ಲಾಮರ್ ಜಗತ್ತು ಎಂದರೆ ಇದೊಂದು ಸೆಳೆಯುವ ಸುಂದರವಾದ ಮಾಯಾಲೋಕ, ಅದರ ಒಳಹೊರಗು ಬೇಗ ಎಲ್ಲರಿಗೂ ತಿಳಿಯುವುದಿಲ್ಲ. ಕಲೆಗೂ ಗ್ಲಾಮರಿಗೂ ಇರುವ ವ್ಯತ್ಯಾಸ ಬೇಗ ಅರಿವಾಗುವುದಿಲ್ಲ. ಎಲ್ಲೋ ಒಬ್ಬಿಬ್ಬರ ಹೊರತಾಗಿ ಗ್ಲಾಮರ್ ಹಿಂದೆ ಬಿದ್ದವರಲ್ಲಿ ಸಾಂಸಾರಿಕ ಸುಖ ಮರೀಚಿಕೆ. ಕಾರಣ, ಅನಿವಾರ್ಯ ಎಂಬಂತೆ ಭಾಸವಾಗುವ ಲೈಂಗಿಕ ಸ್ವಚ್ಛಂದದ ಆಕರ್ಷಣಿ, ಅಷ್ಟೊಂದು ಸೆಲೆಬ್ರಿಟಿ ಎನಿಸಿಕೊಂಡವರು ಕೂಡ ಕೊರಗಿ ಬದುಕು ಕಳೆಯುವುದೂ ಆತ್ಮಹತ್ಯೆ ಮಾಡಿಕೊಳ್ಳುವುದೂ ಅದರ ದುರಂತ.
ಗ್ಲಾಮರ್ ಜಗತ್ತಿನ ಬದುಕಿಗೂ ಪಶ್ಚಿಮಘಟ್ಟದ ಕಾಡಿಗೂ ಎಲ್ಲಂದೆಲ್ಲಿಯ ಸಂಬಂಧ? ಬಯಲು ಸೀಮೆಯಲ್ಲಿ ಹುಟ್ಟಿ ಮದುವೆಯಾದವರಲ್ಲಿ ಒಬ್ಬರು ಮಲೆನಾಡಿನ ಕಾಡಿಗೆ ಬಂದು ಅಲ್ಲೇ ಬದುಕು ಕಟ್ಟಕೊಂಡರೆ ಮತ್ತೊಬ್ಬರು ಗ್ಲಾಮರ್ ಜಗತ್ತಿನ ಒಳಗೆ ಮುಳುಗಿ ಕಳೆದೇ ಹೋಗುವ ಕಾಲ್ಪನಿಕ ಕಾದಂಬರಿ ಇದು.
ಇದು ಮಲೆನಾಡಿನ ರೋಚಕಕತೆಗಳ ಸರಣಿಯ ಹದಿನೈದನೆಯ ಭಾಗ ಓದುಗರು ಅಪೇಕ್ಷಿಸಿದಷ್ಟು ದಿನ ಸರಣಿಯೂ ಮುಂದುವರೆಯುತ್ತದೆ.
ನಿಮ್ಮವ
-ಗಿರಿಮನೆ ಶ್ಯಾಮರಾವ್
