Asha Raghu
Publisher -
- Free Shipping
- Cash on Delivery (COD) Available
Couldn't load pickup availability
ನಾಟಕ ರಚನಾ ಕ್ಷೇತ್ರದಲ್ಲಿ ಮಹಿಳೆಯರು ಮುಂದಕ್ಕೆ ಬರುವ ಅಗತ್ಯತೆಯ ಪ್ರಸ್ತುತ ಸಂದರ್ಭದಲ್ಲಿ ಕಾಣಿಸಿಕೊಂಡದ್ದು ಆಶಾರಘು ಅವರ ನಾಟಕ ಸಂಕಲನ, ಕತೆ, ಕಾದಂಬರಿ, ವಿಮರ್ಶೆಯ ವಲಯಗಳಲ್ಲಿ ಛಾಪು ಮೂಡಿಸಿರುವ ಆಶಾರಘು ಅವರು ನಾಟಕಗಳನ್ನೂ ಬರೆಯಬಲ್ಲರು ಎಂಬುದಕ್ಕೆ ಇಲ್ಲಿ ಒಡಮೂಡಿದ ನಾಲ್ಕು ಮಕ್ಕಳ ನಾಟಕಗಳು ನಿದರ್ಶನ.
ಇಲ್ಲಿನ ನಾಲ್ಕು ನಾಟಕಗಳು ನಾಲ್ಕು ವಿಭಿನ್ನ ಸಂದೇಶಗಳನ್ನು ನೀಡುತ್ತವೆ. ಜಾನಪದ, ಸಾಂಸಾರಿಕ, ಪೌರಾಣಿಕ ವಸ್ತುಗಳನ್ನಾಯು ಅದಕ್ಕೆ ಮಕ್ಕಳ ಭಾಷೆಯ, ನವುರಾದ ಹಾಸ್ಯದ ಲೇಪನ ಕೊಟ್ಟು ಮಿರುಮಿರುಗುವಂತೆ ಮಾಡುವ ಕೌಶಲ್ಯವನ್ನು ಶ್ರೀಮತಿ ಆಶಾರಘು ಅವರು ಹೊಂದಿದ್ದಾರೆ. ಭಾಷೆಯ ಮೇಲಿನ ಹಿಡಿತ, ರಂಗತಂತ್ರಗಳ ಬಳಕೆ, ಕಾಲ್ಪನಿಕತೆಯನ್ನು ಮಕ್ಕಳ ಮಟ್ಟಕ್ಕೆ ಹೊಂದುವಂತೆ ದುಡಿಸಿಕೊಳ್ಳುವಿಕೆ, ರಂಗಕ್ರಿಯೆಗೆ ಅವಕಾಶ ನಿರ್ಮಿಸುವಿಕೆ ಇತ್ಯಾದಿ ಕಾರಣಗಳಿಂದಾಗಿ 'ಬಂಗಾರದ ಪಂಜರ ಮತ್ತು ಇತರ ನಾಟಕಗಳು' ಸಂಕಲನ ಯಶಸ್ಸಿನೆಡೆಗೆ ಸಾಗದಿರುವುದಕ್ಕೆ ಕಾರಣಗಳಿಲ್ಲ ಎಂಬುದು ನನ್ನ ಅಚಲ ನಂಬಿಕೆ.
-ಡಾ. ನಾ. ದಾಮೋದರ ಶೆಟ್ಟಿ
(ಮುನ್ನುಡಿಯಿಂದ)
ಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್
