Girimane Shyamarao
Publisher - ಗಿರಿಮನೆ ಪ್ರಕಾಶನ
Regular price
Rs. 180.00
Regular price
Rs. 180.00
Sale price
Rs. 180.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಮಲೆನಾಡಿನ ಪ್ರಕೃತಿ ಹೇಗೆ ವೈವಿಧ್ಯವೋ ಹಾಗೇ ಇಲ್ಲಿನ ಜನರ ಬದುಕೂ ವೈವಿಧ್ಯಮಯ, ಗಮನಿಸುವ ಕಣ್ಣಿದ್ದರೆ ಇಲ್ಲಿ ನಡೆಯುವ ರೋಚಕ ಘಟನೆಗಳಂತೂ ಬರೆದು ಮುಗಿಯದಷ್ಟು! ಪ್ರತಿಯೊಂದು ಕೃತಿಯಲ್ಲೂ ಕತೆ, ಘಟನೆಗಳ ಜೊತೆಗೆ ಪ್ರಕೃತಿ ಹಾಗೂ ಬದುಕಿನ ನೈಜ ಚಿತ್ರಣ ನೀಡಲು ಯತ್ನಿಸಿದ್ದೇನೆ. ಹಾಗಾಗಿ ಇದರಲ್ಲಿ ಮಲೆನಾಡಿನ ರೋಚಕ ಕತೆಗಳ ಜೊತೆಗೇ ಕಳೆದೆರಡು ವರ್ಷಗಳಲ್ಲಿ ಮಲೆನಾಡಿನ ಭಾಗಗಳಲ್ಲಾದ ಪ್ರವಾಹ ಮತ್ತು ಭೂಕುಸಿತದ ಅನಾಹುತಗಳ ಚಿತ್ರಣವೂ ಇದೆ. ಮುನ್ನುಡಿಯಲ್ಲಿ ಅಂತಹಾ ಅನಾಹುತಕ್ಕೆ ಕಾರಣವಾಗುವ ಅಂಶಗಳನ್ನೂ ಪ್ರಸ್ತಾಪಿಸಿದ್ದೇನೆ. ಆ ಸಮಯದಲ್ಲಿ ಏನೇನಾಯಿತು ಎನ್ನುವುದು ಟಿ.ವಿ. ನೋಡಿದ ಎಲ್ಲರಿಗೂ ಗೊತ್ತು. ನಂತರ ಗಂಜಿ ಕೇಂದ್ರಗಳಲ್ಲಿ ಅವರು ಕಳೆದ ದುಃಸ್ಥಿತಿಯ ಬಗೆಯೂ ನಿಮಗೆ ತಳಿದಿದೆ, ಆದರೆ ಗಂಜಿ ಕೇಂದ್ರ ಸೇರುವುದಕ್ಕೂ ಹಿಂದಿನ ಬದುಕಿನ ಬವಣಿಯ ಚಿತ್ರಣ ಎಲ್ಲರಿಗೂ ತಿಳಿಯದು. ಇಲ್ಲಿ ಅಂತಹಾ ಕೆಲವು ಘಟನೆಗಳಗೆ ಪರ್ಯಾಯ ಘಟನೆ ಹೆಣಿದಿದ್ದೇನೆ. ವೈವಿಧ್ಯವಿರುಲಿ ಎಂಬ ದೃಷ್ಟಿಯಿಂದ ಇದನ್ನು ಸಣ್ಣಕತೆಗಳ ಕೃತಿಯನ್ನಾಗಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮೆಲ್ಲರ ಅಭೂತಪೂರ್ವ ಸಹಕಾರದಿಂದಾಗಿ ಇದು 'ಮಲೆನಾಡಿನ ರೋಚಕ ಕತೆ'ಗಳ ಸರಣಿಗೆ ಹನ್ನೊಂದನೆಯ ಭಾಗವಾಗಿ ಸೇರ್ಪಡೆಯಾಗುತ್ತಿದೆ.
ನಿಮ್ಮವ
ಗಿರಿಮನೆ ಶ್ಯಾಮರಾವ್
ನಿಮ್ಮವ
ಗಿರಿಮನೆ ಶ್ಯಾಮರಾವ್
