Rajamma D. K.
Publisher - ಸಾವಣ್ಣ ಪ್ರಕಾಶನ
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಹಸನಾದ ಬದುಕಿಗೆ, ಬದುಕು ಬದಲಿಸಿಕೊಳ್ಳುವ ದಿಕ್ಕಿನೆಡೆಗೆ ಬೇಕಾದ ಸ್ಫೂರ್ತಿಯನ್ನು ಪಡೆಯಲು ವಸ್ತು ಅಥವಾ ವಿಷಯ ಇಂತಹುದೇ ಆಗಿರಬೇಕೆಂಬ ಕಟ್ಟುಪಾಡೇನಿಲ್ಲ. ಮಹಾತ್ಮರ ಜೀವನದ ಸ್ಫೂರ್ತಿದಾಯಕ ಪ್ರಸಂಗಗಳು, ವಾಟ್ಸಾಪ್ ಸಂದೇಶಗಳು. ಆಡಿಯೋ ವಿಡಿಯೋ ತುಣುಕುಗಳು, ಕೇಳಿದ, ನೋಡಿದ ಘಟನೆಗಳು, ನಿತ್ಯ ಜೀವನದಲ್ಲಿ ನಡೆಯುವ ಆಗುಹೋಗುಗಳು, ಭೇಟಿಮಾಡುವ ವ್ಯಕ್ತಿಗಳು, ಭಾಗವಹಿಸುವ ಸಭೆ ಸಮಾರಂಭಗಳು, ಹಿರಿಯರ ಅನುಭವದ ನುಡಿಮುತ್ತುಗಳು ಹೀಗೆ ಯಾವುದೇ ಮೂಲಗಳಿಂದ ಹರಿದುಬರುವ ಒಳ್ಳೆಯ ವಿಚಾರಗಳು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ಪ್ರೇರಣೆ ನೀಡಬಲ್ಲವು, ಹೊಸ ದಿಕ್ಕಿನೆಡೆಗೆ, ಹೊಸ ಹೊಸ ಸಾಧ್ಯತೆಗಳ ಕಡೆಗೆ ಯೋಚಿಸಲು. ಈಗಿರುವುದಕ್ಕಿಂತ ಇನ್ನೂ ಹೆಚ್ಚಿನದನ್ನು ಸಾಧಿಸಲು, ಕಠಿಣ ಪರಿಸ್ಥಿತಿಗಳಿಂದ ಹೊರಬರಲು, ಸವಾಲುಗಳನ್ನು ಎದುರಿಸಲು, ಅವಕಾಶಗಳನ್ನು ದುಡಿಸಿಕೊಳ್ಳಲು, ಅಂದು ಕೊಂಡ ಕಾರ್ಯವನ್ನು ಯಶಸ್ವಿ ಯಾಗಿ ನಿರ್ವಹಿಸಲು, ಜೀವನ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲು, ಬದುಕಿನ ಉದ್ದೇಶವನ್ನು ನೆನಪಿಸಿಕೊಳ್ಳಲು ಅವಶ್ಯಕವಾಗಿ ಬೇಕಾದ ಸಾಮಗ್ರಿಗಳಾಗಬಲ್ಲವು ಎಂಬುದನ್ನು ಇಲ್ಲಿರುವ ಕಥೆಗಳ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಈ ನನ್ನ ಪ್ರಯತ್ನ ನಿಮಗೂ ಮೆಚ್ಚಿಗೆಯಾಗಬಹುದೆಂಬ ವಿಶ್ವಾಸ ನನ್ನದು.
-ರಾಜಮ್ಮ ಡಿ.ಕೆ.
