Prof. Shivaramaiah
ಬದುಕಿರುವುದೇ ಓದಿ ಬರೆಯಲಿಕ್ಕೆ
ಬದುಕಿರುವುದೇ ಓದಿ ಬರೆಯಲಿಕ್ಕೆ
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹300
- Cash on Delivery (COD) Available
Pages - 328
Type - Paperback
Couldn't load pickup availability
ಪ್ರೊ.ಶಿವರಾಮಯ್ಯ ಅವರು ಕನ್ನಡದ ಸೋಪಜ್ಞ ವಿದ್ವಾಂಸರಲ್ಲೊಬ್ಬರು. ನಿರಂತರವಾದ ಅಧ್ಯಯನ, ಸಂಶೋಧನೆಯ ಪ್ರತಿಪಾದನೆಯ ಜೊತೆಗೆ ಪ್ರಸ್ತುತ ವರ್ತಮಾನಕ್ಕೆ ಸದಾ ಸ್ಪಂದಿಸುವ ಅನುವರ್ತಿಗಳು, ಅವರ ಸಮಕಾಲೀನ ಚಿಂತನೆಗಳು, ವಿಮರ್ಶೆಗಳನ್ನೊಳಗೊಂಡ 'ಬದುಕಿರುವುದೇ ಓದಿ ಬರೆಯಲಿಕ್ಕೆ' ಕೃತಿ ನಿರಂತರವಾಗಿ ಪ್ರವಹಿಸುತ್ತಿರುವ ಕನ್ನಡ ಸಾಹಿತ್ಯ ಪರಂಪರೆಯ ಕುರುಹುಗಳನ್ನು ಪ್ರಮುಖವಾಗಿ ದಾಖಲಿಸುತ್ತದೆ. ತನ್ಮೂಲಕ ಓದುಗನಿಗುಂಟಾಗುವ ಸತ್ಯ ಮತ್ತು ಸಂಶೋಧನೆಯ ಅವಲೋಕನವು ಲೇಖಕರ ವಿಮರ್ಶೆಯ ಆರಾಧನೆಯನ್ನು ನೆನಪಿಸುತ್ತದೆ. ಇದು ಕನ್ನಡ ಸಾಹಿತ್ಯ ಹಾಗೂ ಸದ್ಯದ ಸಾಮಾಜಿಕ ಬೆಳವಣಿಗೆಗಳ ಕುರಿತಾಗಿ ಲೇಖಕರು ಅನುಮೋದಿಸುವ ಸುದೀರ್ಘವಾದ ನುಡಿಗಟ್ಟುಗಳ ವಿವರಗಳನ್ನೊಳಗೊಂಡಿದೆ. ಕೃತಿಯ ಲೇಖನಗಳು ಪಂಪನ ಆದಿಪುರಾಣದಿಂದ ಪ್ರಾರಂಭವಾಗಿ ಕುವೆಂಪು, ಬೇಂದ್ರೆ ಅವರ ಯಶೋಮಾರ್ಗದಲ್ಲಿ ಸಾಗಿ ಹೊಸ ತಲೆಮಾರಿನ ಲೇಖಕರ ಸಾಲಿನವರೆಗೆ ಬಂದು ನಿಲ್ಲುತ್ತವೆ. ಯಾವುದೇ ಕೃತಿ ಕೇವಲ ಲೇಖಕನ ಸೃಜನಶೀಲತೆಯ ಮುಖವಾಣಿಯಲ್ಲ: ಅದು ಲೇಖಕನ ಅಂತರಂಗದ ಕೈಗನ್ನಡಿ ಎಂಬುದನ್ನು ಲೇಖಕರು ವಿವರಣೆಗಳೊಂದಿಗೆ ಸ್ಪಷ್ಟಿಕರಿಸುತ್ತಾರೆ. ಶ್ರೇಷ್ಠ ಚಿಂತನೆಗಳನ್ನೊಳಗೊಂಡ ಯಾವುದೇ ಕೃತಿಯು ಲೌಕಿಕ ಲೋಕದಲ್ಲಿ ಓಯಾಸಿಸ್‌ನಂತೆ ಕಂಡು ಹಸಿದ ಹೊಟ್ಟೆಗೆ ಸಿಹಿನೀರನ್ನು ಎರೆಯುವ ಜ್ಞಾನಗಂಗೆ ಎಂಬುದನ್ನು ಒತ್ತಿ ಹೇಳುತ್ತಾರೆ. ನೈಜ ವಿಮರ್ಶೆಯೇ ಮರೆಯಾಗುತ್ತಿರುವ ಸಂದರ್ಭದಲ್ಲಿ ಕೃತಿಯ ಅಂತರಂಗವನ್ನು ತೆರೆದಿಟ್ಟು ಲೇಖಕನನ್ನು ಇನ್ನಷ್ಟು ಮೊನಚಾಗಿಸುವಲ್ಲಿ ಪ್ರೊ.ಶಿವರಾಮಯ್ಯರ ಚಿಂತನಾ ಬರಹಗಳು ಸಹಾಯಕವಾಗಲಿವೆ. ಅದರಲ್ಲೂ ಸಾಹಿತ್ಯ ಸಂಶೋಧನಾಸಕ್ತರಿಗೆ ಈ ಕೃತಿಯು ಮಾರ್ಗದರ್ಶಿಯಾಗಲಿದೆ. ಪ್ರಾಚೀನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿಕೊಂಡಿರುವ ಇವರು ಯಾವತ್ತೂ ಜನಪರ ಚಳುವಳಿಗಳಲ್ಲಿ ಸಕ್ರಿಯ ಭಾಗವಹಿಸುತ್ತಿದ್ದವರು ಕೋವಿಡ್-೧೯ ದುರಿತ ಕಾಲವನ್ನು ಓದಿ ಬರೆಯುತ್ತಾ ದಾಟಿದ್ದು ಇವರ ವಯೋಮಾನದ ಗುಟ್ಟು- ಎಂಬುದನ್ನು ಈ ವಿಮರ್ಶೆ ಸಾದರಪಡಿಸುತ್ತದೆ.
-ಶ್ರೀಧರ ಬನವಾಸಿ
Share


Subscribe to our emails
Subscribe to our mailing list for insider news, product launches, and more.