Dr. K. Shivaram Karanth
Publisher -
- Free Shipping
- Cash on Delivery (COD) Available
Couldn't load pickup availability
ಒಂದೊಂದು ಜೀವಿಯೇ ಇರಲಿ, ತಾನು ನಡೆಯಿಸುವ ಬದುಕು, ಮಾಡಬಹುದಾದ ಕೆಲಸ – ಇವೆಲ್ಲ ಇನ್ನೊಂದು ಜೀವಿಯ ಬದುಕು ಕೆಲಸಗಳ ಪಡಿಯಚ್ಚುಗಳಲ್ಲ. ಬಾಳ್ವೆಯ ಪ್ರಶ್ನೆ ಒಬ್ಬರು ಬಾಳಿ, ಇನ್ನೊಬ್ಬರು ಉತ್ತರಿಸಿ, ಮೂರನೆಯವರು ಒಪ್ಪಿ ಸಾಗುವ ಪ್ರಶ್ನೆ ಎಂದೂ ಆಗಿರಲಾರದು. ‘ಬಾಳ್ವೆ’ ಯನ್ನು ನಾವು ನಿರಾಕರಿಸದೆ ಮೊದಲಿಗೆ ‘ಒಪ್ಪಬೇಕು’. ತಮ್ಮ ಜೀವನದಿಂದಲೇ ಜೀವನ ಏನು ಎಂದು ತಿಳಿಯಲೆತ್ನಿಸಬೇಕು…ಎಂದಿದ್ದಾರೆ ಶಿವರಾಮ ಕಾರಂತರು ತಮ್ಮ ‘ಬಾಳ್ವೆಯೇ ಬೆಳಕು’ ಕೃತಿಯಲ್ಲಿ.
ನಮ್ಮಿಂದ ಈ ಪ್ರಪಂಚಕ್ಕೆ ಏನೋ ಕಿಂಚಿತ್ ಉಪಯೋಗವಿರುವುದರಿಂದಲೇ ಇಲ್ಲಿ ನಮ್ಮ ಹುಟ್ಟಾಗಿ, ಬದುಕು ನಡೆದಿರುವುದು. ಇಲ್ಲದಿದ್ದಲ್ಲಿ ಸೃಷ್ಟಿ ನಮ್ಮ ಅಸ್ತಿತ್ವಕ್ಕೆ ಅಂಗೀಕಾರವನ್ನೇ ಕೊಡುತ್ತಿರಲಿಲ್ಲ! ಬಾಳಿದ ಬದುಕು ಖಂಡಿತ ಬಹಳಷ್ಟನ್ನು ಕಲಿಸಿರುತ್ತದೆ, ಮುಂಬರುವ ಬದುಕು ಬತ್ತದ ಭರವಸೆಯ ಗಾಲಿಯ ಮೇಲೆ ನಿಂತಿರುತ್ತದೆ. ಅಷ್ಟು ಸಾಕಲ್ಲವೇ ಈ ಬದುಕಿಗೆ ಅಂಟಿಕೊಳ್ಳಲು?
–ಸುಮಾ ರಮೇಶ್
ಪ್ರಕಾಶಕರು - ಸಪ್ನ ಬುಕ್ ಹೌಸ್
