Prakash Rai
Publisher - ಸಾವಣ್ಣ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ಪ್ರತಿಯೊಂದು ಕ್ಷಣವನ್ನು ತನ್ಮಯರಾಗಿ ಜೀವಿಸುವ ಪ್ರಕಾಶ್ ರೈ ನನ್ನ ಪಾಲಿಗೆ ನಿರಂತರ ಅಚ್ಚರಿ.
ಅವರ ಪ್ರತಿಭೆಯ ಅನಂತ ಆಯಾಮಗಳಲ್ಲಿ ಕೆಲವು ಮಾತ್ರ ಅನಾವರಣಗೊಂಡಿವೆ ಎಂದು ನನಗೆ ಎಷ್ಟೋ ಸಲ ಅನ್ನಿಸುತ್ತಿರುತ್ತದೆ. ರಂಗಭೂಮಿಯಿಂದ ಶುರು ಮಾಡಿ, ಸಿನಿಮಾ ಜಗತ್ತಿನಲ್ಲಿ ಸ್ಥಿರವಾಗಿ ನೆಲೆಸಿ, ನಾಲ್ಕಾರು ಭಾಷೆಗಳನ್ನು ಕಲಿತು, ಕೃಷಿಕನಾಗಿ, ಹೋರಾಟಗಾರನಾಗಿ, ನೊಂದವರ ಪಾಲಿಗೆ ತಾಯಿಯಾಗಿ, ಗೆಳೆಯರಿಗೆ ನಿರಂತರ ಭರವಸೆಯಾಗಿ, ಸ್ಪಷ್ಟವಾಗಿ ಯೋಚಿಸಬಲ್ಲ, ಟೀಕೆಗಳನ್ನು ತಾಳಿ ನಿಲ್ಲಬಲ್ಲ, ಮಾನವೀಯವಾಗಿರಲು ಸತತವಾಗಿ ಯತ್ನಿಸುತ್ತಲೇ ಇರುವ ಪ್ರಕಾಶ ರೈ ಅಸೀಮ ಪ್ರತಿಭೆಯ ಖನಿ.
ತಮ್ಮ ಮಾತು, ಭಂಗಿ, ಭಾವ ಮತ್ತು ಅಭಿವ್ಯಕ್ತಿಯ ವಿಸ್ತಾರವೆಂಬಂತೆ ಅವರು ಬರಹಗಳ ಮೂಲಕ ತಮ್ಮನ್ನು ಪ್ರಕಟಪಡಿಸಿಕೊಳ್ಳುತ್ತಿದ್ದಾರೆ. ಎಂದೋ ಕೇಳಿದ ಕಥೆ, ಎಲ್ಲೋ ನೋಡಿದ ಮುಖ, ಕಡಿದು ಹೋದ ಪ್ರೇಮ, ಕದಡಿದ ಸಂಗತಿ, ಅಖಂಡ ನೆನಪು, ನಿರ್ಭೀತ ನಿಲುವು, ಸ್ಪುಟವಾದ ಗ್ರಹಿಕೆ, ತರ್ಕಬದ್ಧ ತೀವ್ರತೆ, ನಿಗರ್ವಿ ವಿನಯ-ಎಲ್ಲವೂ ಈ ಅಂಕಣ ಬರಹಗಳಲ್ಲಿ ಅಡಕಗೊಂಡು ಅವರ ವ್ಯಕ್ತಿತ್ವವನ್ನು ಬೆಳಗಿವೆ.
ತನ್ನ ಭಾವ-ಭಂಗಿ, ನಮ್ಮ ನಿಮ್ಮ ಭಾವಕ್ಕೂ ಒದಗುವಂತೆ ಬರೆಯಬಲ್ಲ ಪ್ರಕಾಶ ರೈ ಕನ್ನಡಕ್ಕೆ ವಿಶಿಷ್ಟವಾದದ್ದೇನೋ ಕೊಡುತ್ತಿದ್ದಾರೆ.
- ಜೋಗಿ
