Skip to product information
1 of 2

Arjun Devaladakere

ಅವಳು ಬದುಕ ಕಲಿಸಿದವಳು

ಅವಳು ಬದುಕ ಕಲಿಸಿದವಳು

Publisher -

Regular price Rs. 220.00
Regular price Rs. 220.00 Sale price Rs. 220.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 260

Type - Paperback

ಅದೆಷ್ಟು ಚೆನ್ನಾಗಿ ಬರೆಯುವಿರಿ ಅರ್ಜುನ್ ದೇವಾಲದಕೆರೆ. ಅವಳು ಕಾದಂಬರಿಯನ್ನು ನಾನು ಓದಿದ್ದು ಅರ್ಜುನ್‌ರ ಇನ್ನೊಂದು ಕಾದಂಬರಿ "ಆಟಗಾರ" ನನ್ನು ನನ್ನ ಕೈಯಾರೆ ಬಿಡುಗಡೆಗೊಳಿಸಿದ ನಂತರ, ಒಂದೇ ಗುಕ್ಕಿನಲ್ಲಿ ಓದಿಸಿಕೊಂಡಿತ್ತು ಅವಳು ಕಾದಂಬರಿ. ಕಾದಂಬರಿಯ ಪ್ರಾರಂಭದಲ್ಲಿ "ಅವಳನ್ನೋದುವ ಮುನ್ನ" ಎಂಬ ಪೀಠಿಕೆಯನ್ನು ಓದುತ್ತಿರುವಾಗ ಅರೆಕ್ಷಣ ನನ್ನ ಮಾವನವರಾದ ಕುವೆಂಪುರವರ ನೆನಪಾಗಿದ್ದು ಸುಳ್ಳಲ್ಲ. "ಅವಳು" ಎಲ್ಲೂ ಕೂಡ ಕಾಲ್ಪನಿಕವೆನಿಸುವುದಿಲ್ಲ. ನಮ್ಮ ಎದುರಲ್ಲೇ ನಡೆಯುತ್ತಿರುವ ನಮ್ಮ ಪಕ್ಕದ ಮನೆಯ ಹುಡುಗನ ಬದುಕಿನ ಏಳು-ಬೀಳುಗಳನ್ನು ಕಣ್ಣಾರೆ ಕಾಣುತ್ತಿರುವ ಭಾಸವಾಗುತ್ತದೆ. ಅವಳೊಳಗಿರುವ ಪ್ರೇಮ, ಅದನ್ನು ಕಾವ್ಯಾತ್ಮಕವಾಗಿ ಕೆಲವೆಡೆ ಪ್ರಸ್ತುತ ಪಡಿಸಿರುವ ರೀತಿಯಂತೂ ಅತ್ಯದ್ಭುತ. ಕಾದಂಬರಿಯನ್ನು ಸಂಪೂರ್ಣವಾಗಿ ಯುವಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆಯುತ್ತಾ ಹೋಗಿರುವುದು ಅರ್ಜುನ್‌ರವರ ಬಹುದೊಡ್ಡ ಶಕ್ತಿ. ನನ್ನ ಅಳಿಯ ನಾನೀ ಕಾದಂಬರಿಯನ್ನು ಮನೆಗೆ ತಂದ ಮರುದಿನ ಬೆಂಗಳೂರಿನಿಂದ ಬಂದಿಳಿದಿದ್ದರು. ಬರುವಾಗ "ಸ್ಟೀಫನ್ ಹಾಕಿನ್ಸ್‌'ರ ಪುಸ್ತವನ್ನು ಓದಲೆಂದು ಜೊತೆತಂದಿದ್ದರು. ಅದನ್ನು ಬದಿಗೆ ಸರಿಸಿ ಅರ್ಜುನ್‌ರವರ "ಅವಳು" ಮತ್ತು "ಆಟಗಾರ"ನನ್ನು ಕೈಗಿಟ್ಟಿದ್ದೆ. ಮುಗಿಸಿ ಎದ್ದವರು ಬಹಳವೇ ಸಂಭ್ರಮಪಟ್ಟರು. ಅರ್ಜುನ್ ದೇವಾಲದಕೆರೆ ಮಲೆನಾಡ ಭಾಗದಲ್ಲಿ ನಾ ಕಂಡ ಯುವಸಾಹಿತಿಗಳಲ್ಲಿ ಮುಂಚೂಣಿಯಲ್ಲಿರುವವರು. ಅವರೀಗ ಕನ್ನಡದ ರೈಸಿಂಗ್ ಸ್ಟಾರ್. ಅವರನ್ನು ಹರಸಿ ಬೆಳೆಸುವ ದೊಡ್ಡ ಜವಬ್ದಾರಿ ಕನ್ನಡಿಗರ ಮೇಲಿದೆ. ಜೊತೆಗೆ ನೀವು ಪುಸ್ತಕಕ್ಕೆ ಕೊಡುವ ದುಡ್ಡಿನ ದುಪ್ಪಟ್ಟು ನೀವೀ ಪುಸ್ತಕದಿಂದ ಪಡೆಯುತ್ತೀರೆಂಬುದು ನನ್ನ ಅಂಬೋಣ. ಇವರ "ಆಟಗಾರ" ಕೂಡ ಅದ್ಭುತವಾಗಿದ್ದಾನೆ. ಸಾಧ್ಯವಾದಲ್ಲಿ ಇವರ ಎಲ್ಲಾ ಪುಸ್ತಕಗಳನೊಮ್ಮೆ ಓದಿನೋಡಿ.

ಶುಭವಾಗಲಿ ಅರ್ಜುನ್ ದೇವಾಲದಕೆರೆ ನಿಮ್ಮ ಬರಹ ನಾಗಾಲೋಟದಿಂದ ಸಾಗಲಿ. ಕನ್ನಡ ಸಾಹಿತ್ಯಕ್ಕೆ ಬಹಳಷ್ಟು ಕೊಡುಗೆ ನೀಡಲಿ.

-ಶ್ರೀಮತಿ ರಾಜೇಶ್ವರಿ ತೇಜಸ್ವಿ (ಖ್ಯಾತ ಲೇಖಕ (ದಿ॥ ಪೂರ್ಣ ಚಂದ್ರ ತೇಜಸ್ವಿಯವರ ಧರ್ಮಪತ್ನಿ ಹಾಗೂ ಕುವೆಂಪುರವರ ಮುದ್ದಿನ ಸೊಸೆ) 

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)