Smt. T. S. Sravana Kumari
Publisher -
- Free Shipping
- Cash on Delivery (COD) Available
Couldn't load pickup availability
ಶ್ರೀಮತಿ ಟಿ. ಎಸ್. ಶ್ರವಣ ಕುಮಾರಿ ಅವರು ಥೇಟ್ ಅದೇ ಶ್ರವಣ ಕುಮಾರನ ರೀತಿಯೇ ಸಾಹಿತ್ಯವನ್ನು ತುಂಬು ಶ್ರದ್ಧೆಯಿಂದ ಹೊತ್ತು ನಡೆದಿದ್ದಾರೆ. ಟಿ. ಎಸ್. ಶ್ರವಣ ಕುಮಾರಿ ಅವರ ಲಲಿತ ಪ್ರಬಂಧಗಳು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಹೊಸ ಸೇರ್ಪಡೆ. ಅವರು ಕಥೆ, ಪ್ರವಾಸ ಕಥನದ ಆಸಕ್ತಿ ಹೊಂದಿದ್ದರೂ ಸಹಾ ಲಲಿತ ಪ್ರಬಂಧ ಇವರ ನೆಚ್ಚಿನ ಪ್ಲೇ ಗ್ರೌಂಡ್ ಎಂದು ಗೊತ್ತಾಗಿಬಿಡುತ್ತದೆ.
ಬ್ಯಾಂಕ್ ಕೆಲಸದಿಂದ ನಿವೃತ್ತರಾದ ಮೇಲೆ ಬರೆಯಲು ಆರಂಭಿಸಿದ ಟಿ.ಎಸ್. ಶ್ರವಣಕುಮಾರಿ ಅವರು ಸಾಹಿತ್ಯದ ಉದ್ಯಾನಕ್ಕೆ ಕಥೆ, ಲಲಿತ ಪ್ರಬಂಧದ ಕಾಲುದಾರಿ ಮೂಲಕ ಪ್ರವೇಶ ಪಡೆದವರು. ಮೈತ್ರಿ ಪ್ರಕಾಶನ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ ಪಡೆದು, ಇತ್ತೀಚೆಗಷ್ಟೆ ಹೊರಬಂದ ಅವರ ಕಥಾಸಂಕಲನವೇ ‘ಅಸ್ಪಷ್ಟ ತಲ್ಲಣಗಳು'. ಸಂಕಲನದ ಶೀರ್ಷಿಕೆಯಾದ ಈ ಕಥೆಯೂ ಸೇರಿ, ‘ಅವಳು ಮತ್ತು ಮಗಳು', ‘ಕಾಮಿನಿಯೂ ಚಿಕನ್ ಬಿರ್ಯಾನಿಯೂ', ‘ಜೀವನ್ಮುಖಿ' ಕಥೆಗಳು ಗಮನ ಸೆಳೆಯುತ್ತವೆ. ಎಲ್ಲ ಕಥೆಗಳಲ್ಲಿ ಹೆಣ್ಣಿನ ಬದುಕಿನ ತಲ್ಲಣಗಳೇ ತುಂಬಿವೆ. ಆಧುನಿಕ ಸ್ತ್ರೀಲೋಕದ ಸಂಕಟಗಳು ಸಹ ಇಲ್ಲಿನ ಕಥೆಗಳಲ್ಲಿ ಎದುರಾಗಿ ಕಾಡುತ್ತವೆ. ಉದ್ಯೋಗಸ್ಥ ಹೆಣ್ಣಿನ ತಳಮಳಗಳ ಆಪ್ತ ಚಿತ್ರಣವೂ ಢಾಳಾಗಿ ಕಾಣುತ್ತದೆ. ಕೌಟುಂಬಿಕ ಬಿಕ್ಕಟ್ಟುಗಳಲ್ಲಿ ಸಾಕಷ್ಟು ನೋವುಂಡರೂ ಅದನ್ನು ತಾನು ಮೌನವಾಗಿ ಸಹಿಸಿಕೊಳ್ಳಲು ಒಪ್ಪಲಾರೆ ಎಂಬ ಹೆಣ್ಣಿನ ಧ್ವನಿ ಗಟ್ಟಿಯಾಗಿ ಕೇಳುತ್ತದೆ.
