Dr. D. V. Guruprasad
ಅಪರಾಧಗಳ ಬೆನ್ನತ್ತಿ
ಅಪರಾಧಗಳ ಬೆನ್ನತ್ತಿ
Publisher -
- Free Shipping Above ₹250
- Cash on Delivery (COD) Available
Pages - 158
Type - Paperback
ಜನಪ್ರಿಯ ಲೇಖಕ, ಅಂಕಣಕಾರ, ಭಾಷಣಕಾರ ಹಾಗೂ ನಿವೃತ್ತ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ. ಡಿ.ವಿ. ಗುರುಪ್ರಸಾದ್ ಅವರು ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತ ಹೆಸರು. ಕಳೆದ 35 ವರ್ಷಗಳಿಂದ ತಮ್ಮ ಬರಹಗಳ ಮೂಲಕ ಸಾರ್ವಜನಿಕರನ್ನು ಪೊಲೀಸ್ ಇಲಾಖೆಯ ಹತ್ತಿರ ತರಲು ಅವರು ಪ್ರಯತ್ನಿಸುತ್ತಿದ್ದಾರೆ. ಆಂಗ್ಲಭಾಷೆಯಲ್ಲಿ ಪಿ.ಎಚ್.ಡಿ ಪದವಿ ಗಳಿಸಿರುವ ಶ್ರೀಯುತರು 62 ಪುಸ್ತಕಗಳನ್ನು ಕನ್ನಡದಲ್ಲಿಯೂ ಏಳು ಪುಸ್ತಕಗಳನ್ನು ಇಂಗ್ಲೀಷಿನಲ್ಲಿಯೂ ರಚಿಸಿದ್ದಾರೆ. 'ಗೂಢಚರೈಯ ಆ ದಿನಗಳು', 'ದಂತಕತೆಯಾದ ದಂತಚೋರ', 'ಪ್ರತೀಕಾರ' 'ನೀವೊಮ್ಮೆ ಫೇಲ್ ಆಗಲೇಬೇಕು' ಹಾಗೂ 'ಪೊಲೀಸ್ ಜೀವನದಲ್ಲಿ ಹಾಸ್ಯ' ಅವರ ಬಹುಮಾರಾಟದ ಕೃತಿಗಳಾಗಿವೆ.
ನೈಜ ಪ್ರಕರಣಗಳು ಪತ್ತೇದಾರಿ ಕಾದಂಬರಿಗಳಿಗಿಂತ ಎಷ್ಟು 'ಡ್ರಿಲ್' ಕೊಡುತ್ತವೆ ಎನ್ನುವುದನ್ನು ತಿಳಿಯಲು ಈ ಕಥೆಗಳನ್ನು ಓದಲೇ ಬೇಕು"
ನಂಜುಂಡ ಸ್ವಾಮಿ, ನಿವೃತ್ತ ಶಿಕ್ಷಕ.
"ಗುರುಪ್ರಸಾದ್ ಸರ್ ಅವರ ಸತ್ಯಕಥೆಗಳು ನನ್ನ ವ್ಯಾಸಂಗಕ್ಕೆ ಬಹಳಷ್ಟು ಸಹಕಾರಿಯಾಗಿವೆ"
ಬಸವರಾಜ್, ಕ್ರಿಮಿನಾಲಜಿ ವಿದ್ಯಾರ್ಥಿ.
"ಅಪರಾಧಿಗಳನ್ನು ಹುಡುಕಲು ಪೊಲೀಸರು ಎಷ್ಟು ಕಷ್ಟಪಡುತ್ತಾರೆ ಎಂದು ಈ ಕಥೆಗಳನ್ನು ಓದಿದ ನಂತರವೇ ನನಗರಿವಾದದ್ದು"
-ಗುರುರಾಜ ಗುಡಿ
"ಪಿ.ಎಸ್.ಐ ಆಗಬೇಕೆಂದು ತಯಾರಿ ನಡೆಸುತ್ತಿದ್ದೇನೆ. ನನ್ನ ಮುಂದಿನ ಜೀವನದಲ್ಲಿ ಎಂತಹ ಸವಾಲುಗಳು ಎದುರಾಗಬಹುದೆಂದು ಇವನ್ನು ಓದಿ ತಿಳಿಯುತ್ತಿದ್ದೇನೆ'
-ಸುಧಾಕರ್
"ಗುರುಪ್ರಸಾದ್ ಅವರ ಬರಹಗಳನ್ನು ಓದಿ ನಮ್ಮನ್ನು ನಾವು ಕ್ರಿಮಿನಲ್‌ಗಳಿಂದ ಹೇಗೆ ರಕ್ಷಿಸಿಕೊಳ್ಳಬಹದೆಂಬ ಅರಿವು ಮೂಡಿದೆ. ಥಾಂಕ್ಯೂ ಸರ್
-ಭಾರತಿ ಹಿರೇಮಠ, ಗೃಹಿಣಿ
"ಪ್ರತಿಯೊಂದು ಕಥೆಯೂ ಓದುಗನ ಕುತೂಹಲವನ್ನು ಸೆರೆಹಿಡಿದು, ಆರಂಭದಿಂದ ಮುಕ್ತಾಯದವರೆಗೂ ಹೊಸ ಅನುಭವಗಳನ್ನು ನೀಡುತ್ತದೆ"
-ಫ್ರಾನ್ಸಿಸ್ ಮಚಾಡೋ
Share
Subscribe to our emails
Subscribe to our mailing list for insider news, product launches, and more.