Skip to product information
1 of 2

Anjana Hegde

ಅಪ್ಪಿಗೌಡನ ಶಂಖಪುಷ್ಪ

ಅಪ್ಪಿಗೌಡನ ಶಂಖಪುಷ್ಪ

Publisher - ಛಂದ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 115

Type - Paperback

Gift Wrap
Gift Wrap Rs. 15.00
ಅಂಜನಾ ಹೆಗಡೆ ತಮ್ಮ ಕಥೆಗಳಲ್ಲಿ ಹಳೆಯ ರೂಪಕಗಳನ್ನು ಮುರಿದು ಹೊಸ ಪ್ರತಿಮೆಗಳನ್ನು ಕಟ್ಟುವ ಕೆಲಸ ಮಾಡಿದ್ದಾರೆ. ನಗರಕ್ಕೂ ಹಳ್ಳಿಗೂ ತೂಗುಸೇತುವೆಯಂತಿರುವ ಇವರ ಕಥೆಗಳು, ಓದುಗರಿಗೆ ಚೇತೋಹಾರಿ ಅನುಭವ ನೀಡುತ್ತವೆ. ಇಷ್ಟು ದಿನ ನಮ್ಮ ಜೊತೆಗೇ ಇದ್ದ, ನಮ್ಮ ದೈನಿಕದ ಭಾಗವಾಗಿಯೇ ಇದ್ದ, ಆದರೆ ನಾವು ಕಡೆಗಣಿಸಿದ್ದ ವ್ಯಕ್ತಿಗಳು ಇವರ ಕಥೆಗಳಲ್ಲಿ ರೂಪ ತಳೆದು ಓಡಾಡುವುದನ್ನು ನೋಡಿದಾಗ, ಅರೆ! ಇಷ್ಟು ದಿನ ನಾನು ಏಕೆ ಇವರನ್ನೆಲ್ಲ ಗಮನಿಸಿಯೇ ಇರಲಿಲ್ಲ? ಈ ಪಾತ್ರಗಳಿಗೂ ಹೇಳುವುದಕ್ಕೆ ಕಥೆಗಳಿದ್ದವಲ್ಲ- ಎಂದು ಅನ್ನಿಸದೇ ಇರದು. ಹೇಳಬೇಕಾದುದನ್ನು ಲಂಬಿಸದೇ, ಚಿಕ್ಕ ಚಿಕ್ಕ ಸಶಕ್ತವಾದ ಸಾಲುಗಳ ಮೂಲಕ ಕಥೆಗಳನ್ನು ಕಟ್ಟುವ ಕಲೆ ಅಂಜನಾಗೆ ಸಿದ್ಧಿಸಿದೆ. ಜಾಳಾಗಿರದ, ಬಿಗಿ ಬಂಧದ ಇಲ್ಲಿನ ಕಥೆಗಳು ನಿಮಗೂ ಕೂಡ ಓದಿನ ಖುಷಿ ನೀಡಲಿ.

- ಶ್ರೀನಿಧಿ ಡಿ. ಎಸ್. ಬರಹಗಾರ
View full details