1
/
of
1
Asha Raghu
ಅಪರೂಪದ ಪುರಾಣ ಕಥೆಗಳು
ಅಪರೂಪದ ಪುರಾಣ ಕಥೆಗಳು
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 130.00
Regular price
Rs. 130.00
Sale price
Rs. 130.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಕೆಲಕಾಲ ಯೋಚಿಸಿದ ಶಿಬಿ, 'ಪಾರಿವಾಳಕ್ಕೆ ಆಶ್ರಯ ಕೊಡುವುದಾಗಿ ಇದಾಗಲೇ ವಾಗ್ದಾನ ಮಾಡಿದ್ದೇನೆ. ಹೀಗಾಗಿ ಅದನ್ನು ಬಿಟ್ಟುಕೊಡುವುದು ಧರ್ಮವಲ್ಲ. ಹಾಗೆಂದು ನಿನ್ನ ಮಾತನ್ನೂ ತೆಗೆದು ಹಾಕಲೂ ಸಾಧ್ಯವಿಲ್ಲ. ಸರಿಯಾದ ಧರ್ಮಸೂಕ್ಷ್ಮದ ಪ್ರಶ್ನೆಯನ್ನೇ ನನ್ನ ಮುಂದಿಟ್ಟಿದ್ದೀಯೆ! ಪಾರಿವಾಳಕ್ಕೆ ರಕ್ಷಣೆಯನ್ನೂ ಕೊಡಬೇಕು, ನಿನ್ನ ಆಹಾರವನ್ನೂ ಕಸಿದುಕೊಂಡಂತೆ ಆಗಬಾರದೆಂದರೆ ನನ್ನಲ್ಲಿ ಒಂದು ಉಪಾಯವಿದೆ. ಪಾರಿವಾಳದ ತೂಕದಷ್ಟು ನನ್ನ ದೇಹದ ಮಾಂಸವನ್ನು ಕೊಟ್ಟರೆ ಆದೀತೋ?? ಎಂದಾಗ ಗಿಡುಗ ಪಾರಿವಾಳಗಳೂ ಸೇರಿದಂತೆ ಅಲ್ಲಿ ನೆರೆದಿದ್ದ ಇಡೀ ಪ್ರಜಾ ಸಮೂಹವೇ ದಂಗಾಗಿ ನೋಡಿತು!
ಸರಿ, ಪಾರಿವಾಳವನ್ನು ಒಂದು ತಕ್ಕಡಿಯ ಬಟ್ಟಲಿನಲ್ಲಿರಿಸಿ, ಶಿಬಿಯ ದೇಹದಿಂದ ಒಂದಷ್ಟು ಮಾಂಸವನ್ನು ಕತ್ತರಿಸಿ ಇನ್ನೊಂದು ತಕ್ಕಡಿಯ ಬಟ್ಟಲಿನಲ್ಲಿರಿಸಿ ತೂಕವನ್ನು ನೋಡುವ ಪ್ರಕ್ರಿಯೆ ಆರಂಭಗೊಂಡಿತು. ಶಿಬಿಯ ದೇಹದ ಮಾಂಸವನ್ನು ಅದೆಷ್ಟು ತುಂಡುಗಳಾಗಿ ಕತ್ತರಿಸುತ್ತಾ ಹೋದರೂ, ತಕ್ಕಡಿಯ ಪಾರಿವಾಳದ ತೂಕಕ್ಕೆ ಸಮಪ್ರಮಾಣವನ್ನು ಸರಿದೂಗಿಸಲು ಆಗಲೇ ಇಲ್ಲ. ಕಡೆಗೆ, ಶಿಬಿಯೇ ಅದರಲ್ಲಿ ಕೂತುಬಿಟ್ಟ. ಅದಾಗ ತೂಕವು ಸರಿಹೋಯಿತು. ಶಿಬಿಯು ಗಿಡುಗನಿಗೆ ಶಿರಬಾಗಿ ನಮಿಸಿ, ಇದೀಗ ಪಾರಿವಾಳದ ತೂಕಕ್ಕೆ ಸರಿದೂಗುವಷ್ಟು ಪ್ರಮಾಣದ ನನ್ನ ಇಡೀ ದೇಹ ಸಿದ್ಧವಾಗಿದೆ. ಓ ಗಿಡುಗನೇ ಸ್ವೀಕರಿಸು' ಎಂದ, ಆ ಕ್ಷಣವೇ ಗಿಡುಗ ರೂಪದಲ್ಲಿದ್ದ ಇಂದ್ರನೂ, ಪಾರಿವಾಳದ ರೂಪದಲ್ಲಿದ್ದ ಅಗ್ನಿಯೂ ಪ್ರಕಟಗೊಂಡರು. ದೇವ ದುಂದುಭಿ ಮೊಳಗಿತು. ದೇವತೆಗಳು ಮೋಡಗಳ ಅಂಚುಗಳಲ್ಲಿ ನಿಂತು ಪುಷ್ಪವೃಷ್ಟಿಯನ್ನು ಮಾಡಿದರು. ಎಲ್ಲೆಲ್ಲಿಯೂ ಜಯಕಾರ, 'ಮಹಾದಾನಿ, ಶಿಬಿ ಚಕ್ರವರ್ತಿ ಜಯತು.. ಜಯತು..!
ಸಾಹಿತ್ಯಲೋಕ ಪಬ್ಲಿಕೇಷನ್ಸ್

Share

Subscribe to our emails
Subscribe to our mailing list for insider news, product launches, and more.