ಡಾ. ಎಸ್.ಪಿ. ಪದ್ಮಪ್ರಸಾದ್
Publisher: ಅಂಕಿತ ಪುಸ್ತಕ
Regular price
Rs. 250.00
Regular price
Sale price
Rs. 250.00
Unit price
per
Shipping calculated at checkout.
Couldn't load pickup availability
ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ನಾಲ್ಕನೇ ಪ್ರವಾಸ ಕಥನವಿದು. ಕನ್ನಡದ ಹಿರಿಯ ವಿದ್ವಾಂಸರೂ, ಸೃಜನಶೀಲ ಲೇಖಕರೂ ಆದ ಇವರು, ತಮ್ಮ ಅರವತ್ತೇಳನೇ ವಯಸ್ಸಿನಲ್ಲಿ ಇಂಗ್ಲೆಂಡ್, ಸ್ಕಾಟ್ಲೆಂಡ್‌ಗಳನ್ನು ಮೊದಲಬಾರಿಗೆ ಏಕಾಂಗಿಯಾಗಿ ತಿರುಗಾಡಿ ಕಂಡ ನೋಟಗಳ, ಪಡೆದ ಅನುಭವಗಳ ವಿಶಿಷ್ಟ ನಿರೂಪಣೆ ಇಲ್ಲಿದೆ. ಬ್ರಿಟಿಷ್ ನಾಡನ್ನು ಕುರಿತ ಹಲವು ಪ್ರವಾಸ ಕಥನಗಳಿಗಿಂತಲೂ ಇದು ಭಿನ್ನವಾದುದು. ಪ್ರವಾಸಿ ಹಾಸ್ಟೆಲ್‌ಗಳಲ್ಲಿ ವಾಸಿಸಿ, ತಾವೇ ಹಾದಿ ಹುಡುಕಿಕೊಂಡು ತಿರುಗಿ, ಆ ನಾಡಿನ ಹಲವಾರು ಸುಪ್ರಸಿದ್ಧ ಮ್ಯೂಸಿಯಂಗಳನ್ನು, ಅರಮನೆಗಳನ್ನು, ಮತ್ತಿತರ ಆಸಕ್ತಿಕರ ತಾಣಗಳನ್ನು ಕಂಡ ವಿವರಗಳು - ಇಲ್ಲಿ ಸ್ವಾರಸ್ಯಕರವಾಗಿ ಕಥಿಸಲ್ಪಟ್ಟಿವೆ. ಪಿಕ್ ಪಾಕೆಟ್ ಪ್ರಕರಣ, ವೆಸ್ಟ್ ಮಿನಿಸ್ಟರ್ ಅಬೆ ಚರ್ಚ್ ವಿವರಗಳು, ಕೀಟ್ಸ್‌ನ ಮನೆಯನ್ನು ಕಂಡದ್ದು, ಷೇಕ್ಸ್‌ಪಿಯರ್‌ನ ಗ್ಲೋಬ್ ಥಿಯೇಟರ್‌ನಲ್ಲಿ ನಾಟಕ ನೋಡಿದ್ದು- ಎಲ್ಲ ನಮ್ಮ ಅನುಭವವನ್ನು ವಿಸ್ತರಿಸುವಂಥವು. ಈ ಕೃಷಿಯ ಓದು, ಮನರಂಜನೆಯೂ ಹೌದು, ಶಿಕ್ಷಣವೂ ಹೌದು.
