Pranav Bharadwaj
ಅಂಗದ
ಅಂಗದ
Publisher - Upasana Books
- Free Shipping Above ₹400
- Cash on Delivery (COD) Available*
Pages - 100
Type - Paperback
Couldn't load pickup availability
ಅಂಗದ' ಕಾದಂಬರಿಯು ರಾಮಾಯಣದ ಅತ್ಯಂತ ಸಣ್ಣ ಪಾತ್ರವಾದ ವಾಲಿಯ ಮಗ ಅಂಗದನ ಪಾತ್ರವನ್ನು ಕೇಂದ್ರೀಕರಿಸಿದೆ.
ಹಲವು ಪುರಾಣ ಕಥೆಗಳನ್ನು ಮರುನಿರೂಪಣೆ ಮಾಡಿರುವ ನನಗೆ ಎಂದೂ ಅಂಗದನ ಪಾತ್ರವು ಇಂತಹ ಹಲವು ಆಯಾಮಗಳನ್ನು ಹೊಂದಿದ್ದು, ಪ್ರಮುಖ ಭೂಮಿಕೆಯಲ್ಲಿಟ್ಟು, ಸುದೀರ್ಘ ಕಾದಂಬರಿಯೊಂದನ್ನು ಬರೆಯಬಹುದಾದ ಘನ ವ್ಯಕ್ತಿತ್ವ ಎಂದು ಅನ್ನಿಸಿರಲೇ ಇಲ್ಲ. ಆದರೆ ಹದಿನೈದು ವರ್ಷದ ಪುಟ್ಟ ಪೋರ ಪ್ರಣವ್ ಭಾರದ್ವಾಜ್ ಈ ಕಾರ್ಯವನ್ನು ಮಾಡಿ ತೋರಿಸಿದ್ದಾನೆ. ಸಣ್ಣ ಪಾತ್ರವನ್ನು ತನ್ನ ಸಂಶೋಧನೆ, ದೃಷ್ಟಿಕೋನ, ವಿವೇಚನೆ, ಕಲ್ಪನೆಗಳಿಂದ ಹಿಗ್ಗಿಸಿ, ಅಂಗದನ ಒಳನೋಟವನ್ನೂ ಮತ್ತು ಹೊರಜಗತ್ತನ್ನೂ ಓದುಗರ ಮುಂದೆ ಕಡೆದು ನಿಲ್ಲಿಸಿದ್ದಾನೆ. ಇದು ವಯಸ್ಸಿಗೆ ಮೀರಿದ ಪ್ರೌಢ ಹಾಗೂ ಅಪ್ರತಿಮ ಸಾಧನೆ! ಈ ಕಾದಂಬರಿಯ ಆರಂಭದಲ್ಲಿ ಕಲೆಗೆ ಪ್ರಾಧಾನ್ಯತೆ ಇದ್ದರೆ, ದ್ವಿತೀಯ ಭಾಗದಲ್ಲಿ ವಿವರಗಳಿಗೆ ಪ್ರಾಧಾನ್ಯತೆ ಇದೆ. ಯುದ್ಧ ವರ್ಣನೆಗಳನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿರುವ ಪ್ರಣವ ಕುಸ್ತಿಪಟುವಲ್ಲ, ಬದಲಿಗೆ ಒಳ್ಳೆಯ ಗಾಯಕ! ಭಾವ ತುಂಬಿ ಹಾಡುವಂತೆಯೇ ಅಂಗದನ ಮನೋವೇದನೆಯನ್ನೂ ಓದುಗರ ಮುಂದೆ ತನ್ನ ಶಕ್ತಾನುಸಾರ ನಿರೂಪಿಸಿದ್ದಾನೆ.
-ಆಶಾ ರಘು, ಕಾದಂಬರಿಗಾರ್ತಿ
ಪ್ರಣವ್ ಭಾರದ್ವಾಜ್ ಅವರು ಅತಿ ಚಿಕ್ಕ ವಯಸ್ಸಿನಲ್ಲಿಯೇ 'ಅಂಗದ ನಿಸ್ವಾರ್ಥ ವಾನರವೀರ' ಕೃತಿಯನ್ನು ಅತ್ಯಂತ ಸರಳವಾಗಿ, ಸೊಗಸಾಗಿ ಸ್ವಾರಸ್ಯಕರವಾಗಿ ಕಥಾ ರೂಪದಲ್ಲಿ ನಿರೂಪಿಸಿದ್ದಾರೆ.
ವಿದ್ಯಾರ್ಥಿಯಾಗಿರುವ ವಯಸ್ಸಿನಲ್ಲಿಯೇ ಇಂತಹ ಆಳವಾದ ವಿಚಾರಧಾರೆಯುಳ್ಳ ಕೃತಿ ರಚಿಸಿರುವುದು ಶ್ಲಾಘನೀಯ. ಸರಳ ಭಾಷೆ, ಸ್ಪಷ್ಟ ಅಭಿವ್ಯಕ್ತಿ ಮತ್ತು ಭಾವಪೂರ್ಣ ನಿರೂಪಣೆ ಈ ಕೃತಿಯ ವಿಶೇಷತೆಗಳಾಗಿವೆ. 'ಅಂಗದ ನಿಸ್ವಾರ್ಥ ವಾನರವೀರ' ಕೃತಿ ಹೆಜ್ಜೆ ಹೆಜ್ಜೆಗೂ ಓದುಗರಲ್ಲಿ ಕುತೂಹಲವನ್ನು ಮೂಡಿಸುವುದಷ್ಟೇ ಅಲ್ಲ, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಇಲ್ಲಿಯ ಶೈಲಿ ಎಲ್ಲ ವಯೋಮಾನದವರಿಗೂ ಎಟುಕುವಂತಹುದಾಗಿದೆ. ಪ್ರಣವ್ ಭಾರದ್ವಾಜ್ ಅವರ ಬರಹದಲ್ಲಿರುವ ಪ್ರೌಢತೆಯನ್ನು ಗಮನಿಸಿದರೆ ಅವರಿಗೆ ದೊರೆತಿರುವ ಸಂಸ್ಕಾರದ ಪರಿಚಯವಾಗುತ್ತದೆ. 'ಅಂಗದ'ನ ಪಾತ್ರ ಪರಿಚಯದ ಜೊತೆಗೆ ವಾಲಿಯ ದುಡುಕುತನ ಮತ್ತು ಕ್ರೋಧ, ಹಾಗೇ ರಾವಣ, ಮೇಘನಾದ, ಕುಂಭಕರ್ಣರ ಸಾಮರ್ಥ್ಯ ಮತ್ತು ನ್ಯೂನ್ಯತೆಗಳನ್ನು ಸೂಕ್ಷ್ಮವಾಗಿ ಪರಿಚಯಿಸಿದ್ದಾರೆ. ರಾಮಾಯಣದ ಹಲವಾರು ಪಾತ್ರಗಳೊಂದಿಗೆ ಬೆಸೆದಿರುವ 'ಅಂಗದ'ನ ಬದುಕು ವಿಶಿಷ್ಟತೆಯಿಂದ ಕೂಡಿರುವುದನ್ನು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಈ ಕೃತಿ ಪ್ರಣವ್ ಅವರ ಸಾಹಿತ್ಯ ಪ್ರೇಮ ಮತ್ತು ಚಿಂತನೆಯ ಆಳವನ್ನು ಪ್ರತಿಬಿಂಬಿಸುವಂತಿದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಸಾಹಿತ್ಯ ಸೃಷ್ಟಿಗಳು ಹೊರಹೊಮ್ಮಲಿ ಎಂಬುದು ನನ್ನ ಹಾರೈಕೆ.
-ಎನ್. ರಾಮಣ್ಣ, ಸಂಸ್ಥಾಪಕರು, ಆಡನ್ ಸಮೂಹ ಸಂಸ್ಥೆ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.