1
/
of
1
Dr. S. S. Angadi
ಆಂಡಯ್ಯನ ಸರಳ ಕಬ್ಬಿಗರ ಕಾವ
ಆಂಡಯ್ಯನ ಸರಳ ಕಬ್ಬಿಗರ ಕಾವ
Publisher - ಕನ್ನಡ ವಿಶ್ವವಿದ್ಯಾಲಯ
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 108
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊಟ್ಟಮೊದಲು ಅಚ್ಚಕನ್ನಡ ಕಾವ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾವ್ಯ ಆಂಡಯ್ಯನ 'ಕಬ್ಬಿಗರ ಕಾವ', ಅವನ ಅಭಿಪ್ರಾಯದಲ್ಲಿ ಅಚ್ಚಕನ್ನಡವೆಂದರೆ ದೇಶಿಯ ಪದಗಳ ಜೊತೆಗೆ ಕನ್ನಡದ ಜಾಯಮಾನಕ್ಕೆ ಹೊಂದಿಕೆಯಾಗುವ ತದ್ಭವಗಳೂ ಸೇರಿವೆ. ಈ ಕಾವ್ಯದ ವಸ್ತು ಹಳೆಯದಾದರೂ ಕಾವ್ಯದ ಭಾಷೆ, ಶೈಲಿ, ಆಶಯ ಹೊಸದು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಕಾವ್ಯದಲ್ಲಿ ಬಳಕೆಯಾದ ದೇಶಿಯ ಶೈಲಿ ಶಕ್ತಿಯುತವಾಗಿದೆ. ಕನ್ನಡದೇ ಆದ ರಚನೆ, ಸಾಂಸ್ಕೃತಿಕ ವಾಗ್ವಾದಗಳನ್ನೂ ಬೆಳೆಸಲು ಬೇಕಾದಂಥ ಸಾಮಗ್ರಿ ಕಾವ್ಯದ ಒಡಲಲ್ಲಿ ಅಡಗಿದೆ. ಕನ್ನಡ ಭಾಷೆಯ ಸಾಂಸ್ಕೃತಿಕ ಆಯಾಮ ಈ ಕಾವ್ಯದಲ್ಲಿ ನಿಚ್ಚಳವಾಗಿ ಅನಾವರಣಗೊಂಡಿದೆ. ಈ ಕಾವ್ಯವನ್ನು ಮೂಲ ಲಯಕ್ಕೆ ಧಕ್ಕೆಯಾಗದಂತೆ, ಛಂದಸ್ಸಿನ ಬಿಗಿ ಬಂಧವನ್ನು ಸಡಿಲಿಸಿ, ಸಂವಹನ ಪಾತಳಿಯ ನೆಲೆಯಲ್ಲಿ, ಅರ್ಥಾನುಗತವಾಗಿ ವಿಂಗಡಿಸಿರುವುದರಿಂದ ವಿದ್ಯಾರ್ಥಿಗಳು, ಆಸಕ್ತರು ಸುಲಭವಾಗಿ ಕಾವ್ಯದ ಆಶಯವನ್ನು ತಿಳಿದುಕೊಳ್ಳಬಹುದು. ಕನ್ನಡದ ಮೊದಲ ಈ ಅಚ್ಚಕನ್ನಡದ ಕಾವ್ಯವನ್ನು ಹಂಪಿ, ಕನ್ನಡ ವಿಶ್ವವಿದ್ಯಾಲಯ ಸಂತೋಷದಿಂದ ಪ್ರಕಟಿಸುತ್ತಿದೆ. ಈ ಕಾವ್ಯವನ್ನು ಸರಳ ಆವೃತ್ತಿಯನ್ನಾಗಿ ರೂಪಿಸಿದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಎಸ್.ಎಸ್. ಅಂಗಡಿ ಅವರಿಗೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ.
ಡಾ. ಸ.ಚಿ. ರಮೇಶ
ಡಾ. ಸ.ಚಿ. ರಮೇಶ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.