ಪ್ರೊ|| ಆರ್.ಎಸ್. ಶರ್ಮಾ | ಕನ್ನಡಕ್ಕೆ: ಎನ್.ಪಿ. ಶಂಕರನಾರಾಯಣ ರಾವ್
Publisher:
Regular price
Rs. 275.00
Regular price
Rs. 275.00
Sale price
Rs. 275.00
Unit price
per
Shipping calculated at checkout.
Couldn't load pickup availability
ಒಂದು ದೇಶದ ಇತಿಹಾಸವೆಂದರೆ, ಆ ದೇಶವನ್ನು ಆಳಿದ ರಾಜವಂಶಗಳ, ಅವು ನಡೆಸಿದ ದಂಡಯಾತ್ರೆಗಳ, ಸಣ್ಣಪುಟ್ಟ ಯುದ್ಧಗಳ ಅಥವಾ ಅವುಗಳ ಸೋಲು-ಗೆಲುವು, ಅಳಿವು – ಉಳಿವುಗಳ ವರದಿಯಷ್ಟೇ ಅಲ್ಲ, ಇತಿಹಾಸವೆಂದರೆ ಸರಿಯಾದ ಆಧಾರವಿಲ್ಲದ ಕಾಲ್ಪನಿಕ ಭವ್ಯ ಚಿತ್ರಣವೂ ಅಲ್ಲ. ಇತಿಹಾಸದ ಅವಧಿಯಲ್ಲಿ, ಅಲ್ಲಿ ಬದುಕಿದ ಜನರ ಜೀವನ, ಅಲ್ಲಿನ ಆರ್ಥಿಕ ಪರಿಸ್ಥಿತಿ, ಪರದೇಶಗಳೊಂದಿಗಿನ ವಾಣಿಜ್ಯ - ಆರ್ಥಿಕ ಸಂಬಂಧಗಳು, ನಾನಾ ಕಾರಣಗಳಿಂದ ವಲಸೆ ಬಂದು ಅಲ್ಲಿ ನೆಲಸಿದ ಇತರ ಜನರು, ಅಲ್ಲಿ ಹುಟ್ಟಿದ ಮತ ಧಾರ್ಮಿಕ ಚಳವಳಿಗಳು ಹಾಗೂ ಪಂಥಗಳು. ಹೊಸ ಹೊಸ ಆಧಾರಗಳು ಬೆಳಕಿಗೆ ಬಂದಂತೆ ಅದರ ಸ್ವರೂಪವೂ ಬದಲಾಗುತ್ತ ಹೋಗುತ್ತದೆ.
